ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್‌ನಲ್ಲಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ವಾರ್ಷಿಕೋತ್ಸವ

|
Google Oneindia Kannada News

ನವದೆಹಲಿ, ಮೇ 26: ಕೊವಿಡ್ 19 ಮಹಾಮಾರಿಯಿಂದಾಗಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದ ವಾರ್ಷಿಕೋತ್ಸವವನ್ನು ಆನ್‌ಲೈನ್‌ನಲ್ಲಿ ಆಚರಿಸಿಕೊಳ್ಳುವಂತಾಗಿದೆ.

ಸಚಿವರುಗಳಿಂದ ಡಿಜಿಟಲ್ ಪ್ರೆಸ್ ಕಾನ್ಫರೆನ್ಸ್ ನಡೆಯಲಿದೆ, ಸಾರ್ವಜನಿಕರೊಂದಿಗೆ ವಿಡಿಯೋ ಸಂವಾದ ಹಾಗೆಯೇ ಇ-ಜಾಥಾವನ್ನು ಕೂಡ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಭಾರತದಲ್ಲಿ 14 ದಿನದಲ್ಲೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಡಬಲ್! ಭಾರತದಲ್ಲಿ 14 ದಿನದಲ್ಲೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಡಬಲ್!

ಕಳೆದ ವರ್ಷ ಮೇ 30 ರಂದು ನರೇಂದ್ರ ಮೋದಿ 2.0 ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತ್ರಿವಳಿ ತಲಾಖ್ ರದ್ದು, ಆರ್ಟಿಕಲ್ 370 ರದ್ದು, ಲಡಾಖ್‌ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸುವುದು ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿತ್ತು.

Coronavirus Pushes Governments First Anniversary Celebration Online

ಇ-ಜಾಥಾಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಪ್ರತಿ ದಿನ 500 ಮಂದಿಯನ್ನು ತಲುಪುವ ಗುರಿ ಹೊಂದಲಾಗಿದೆ. ಈ ಜಾಥಾಗಳಲ್ಲಿ ಸರ್ಕಾರಕ್ಕಿದ್ದ ಸವಾಲು ಹಾಗೂ ಸಾಧನೆಗಳನ್ನು ವಿವರಿಸಲಾಗುವುದು.

ಒಟ್ಟು 150 ಮಾಧ್ಯಮ ಕೇಂದ್ರಗಳಲ್ಲಿ ಮೀಡಿಯಾ ಕಾನ್ಫರೆನ್ಸ್ ನಡೆಯಲಿದೆ. 20 ನಿಮಿಷಗಳ ಕಾಲ ಪ್ರಶ್ನೋತ್ತರಕ್ಕೆ ಅನುವು ಮಾಡಿಕೊಡಲಾಗಿದೆ. ಭಾರತದಲ್ಲಿ 4179 ಮಂದಿ ಕೊರೊನಾವೈರಸ್‌ನಿಂದ ಮೃತಪಟ್ಟಿದ್ದಾರೆ. 1,46,000 ಮಂದಿ ಸೋಂಕಿತರಿದ್ದಾರೆ.

English summary
The first anniversary of the Narendra Modi government's second term will be marked online in a big way in view of the challenge posed by the highly infectious coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X