ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಾರ್ಡ್ ಗಾಳಿಯಲ್ಲೂ ಸೋಂಕು; ಅಧ್ಯಯನ ಕೊಟ್ಟ ಎಚ್ಚರಿಕೆ

|
Google Oneindia Kannada News

ನವದೆಹಲಿ, ಜನವರಿ 05: ಕೊರೊನಾ ವಾರ್ಡ್ ನ ಗಾಳಿಯಲ್ಲಿಯೂ ಕೊರೊನಾ ಸೋಂಕು ಸ್ವಲ್ಪ ಸಮಯ ಇದ್ದೇ ಇರುತ್ತದೆ. ವಾರ್ಡ್ ನಲ್ಲಿ ಎಷ್ಟು ಕಾಲ ಕೊರೊನಾ ರೋಗಿ ಉಳಿದಿರುತ್ತಾನೆ ಎಂಬುದರ ಮೇಲೆ ಆ ಸೋಂಕಿನ ಉಪಸ್ಥಿತಿ ಅವಲಂಬಿತವಾಗಿರುತ್ತದೆ. ಹೀಗೆಂದು ಅಧ್ಯಯನವೊಂದು ಮಾಹಿತಿ ನೀಡಿದೆ.

ಎರಡು ಭಾರತೀಯ ಸಂಶೋಧನಾ ಸಂಸ್ಥೆಗಳು ಈ ಕುರಿತು ಅಧ್ಯಯನ ನಡೆಸಿದ್ದು, ಕೊರೊನಾ ವೈರಸ್ ಆದ SARS-CoV-2 ಕೊರೊನಾ ವಾರ್ಡ್ ನ ಗಾಳಿಯಲ್ಲಿ ಇರುತ್ತದೆ ಎಂದು ತಿಳಿಸಿದ್ದಾರೆ. ವಾರ್ಡ್ ನ ಗಾಳಿ ಮಾದರಿಯನ್ನು ಪರೀಕ್ಷೆ ನಡೆಸಿದ್ದು, ಈ ಫಲಿತಾಂಶ ದೊರೆತಿರುವುದಾಗಿ ತಿಳಿಸಿದ್ದಾರೆ. ಹೈದರಾಬಾದ್ ನ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲೆಕ್ಯುಲರ್ ಬಯಾಲಜಿ ಹಾಗೂ ಚಂಡೀಗಢದ ಇನ್ ಸ್ಟಿಟ್ಯೂಟ್ ಆಫ್ ಮೈಕ್ರೊಬಯಲ್ ಟೆಕ್ನಾಲಜಿ, ಕೊರೊನಾ ಸೋಂಕಿನ ಗಾಳಿಯಿಂದ ಹರಡುವ ಸ್ವಭಾವದ ಬಗ್ಗೆ ಪರೀಕ್ಷೆ ನಡೆಸಿ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಮುಂದೆ ಓದಿ...

 ವಾರ್ಡ್ ಗಾಳಿಯಲ್ಲಿ ಕೊರೊನಾ ಸೋಂಕಿನ ಕಣಗಳು ಪತ್ತೆ

ವಾರ್ಡ್ ಗಾಳಿಯಲ್ಲಿ ಕೊರೊನಾ ಸೋಂಕಿನ ಕಣಗಳು ಪತ್ತೆ

ಅಧ್ಯಯನಕ್ಕಾಗಿ ವಿಜ್ಞಾನಿಗಳು ಹೈದರಾಬಾದ್ ನಲ್ಲಿ ಮೂರು ಮತ್ತು ಚಂಡೀಗಢದಲ್ಲಿ ಮೂರು ಆಸ್ಪತ್ರೆಗಳೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಆಸ್ಪತ್ರೆಗಳ ಕೋವಿಡ್ ವಾರ್ಡ್ ಗಳಲ್ಲಿನ ಗಾಳಿ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಅಧ್ಯಯನಕ್ಕಾಗಿ ಗಾಳಿಯ ಮಾದರಿ ಹಾಗೂ ಅವುಗಳಲ್ಲಿ ವೈರಸ್ ಕಣಗಳ ಪತ್ತೆಗೆ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಿದ್ದಾರೆ.

ಜ. 05: ವಿಶ್ವದಲ್ಲಿ ಕೊವಿಡ್ 19ರಿಂದ ಗುಣಮುಖ ಹೊಂದಿದವರೆಷ್ಟು?ಜ. 05: ವಿಶ್ವದಲ್ಲಿ ಕೊವಿಡ್ 19ರಿಂದ ಗುಣಮುಖ ಹೊಂದಿದವರೆಷ್ಟು?

ಈ ಪರೀಕ್ಷೆಯಲ್ಲಿ, ಆಸ್ಪತ್ರೆಯ ಕೋವಿಡ್ ವಾರ್ಡ್ ಗಳಿಂದ ಸಂಗ್ರಹಿಸಿದ ಗಾಳಿಯ ಮಾದರಿಗಳಲ್ಲಿ ಕೊರೊನಾ ವೈರಸ್ ಕಂಡುಬಂದಿದೆ. ಕೋವಿಡ್ ಅಲ್ಲದ ಇತರೆ ವಾರ್ಡ್ ಗಳಿಂದ ಈ ಕಣಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

 ರೋಗಿ ಇದ್ದ ಅವಧಿ ಮೇಲೆ ವೈರಸ್ ಉಪಸ್ಥಿತಿ ಅವಲಂಬಿತ

ರೋಗಿ ಇದ್ದ ಅವಧಿ ಮೇಲೆ ವೈರಸ್ ಉಪಸ್ಥಿತಿ ಅವಲಂಬಿತ

ಕೋಣೆಯಲ್ಲಿನ ಕೊರೊನಾ ರೋಗಿಗಳ ಸಂಖ್ಯೆ, ಅವರ ರೋಗಸ್ಥಿತಿ ಹಾಗೂ ಅವರು ಆ ಕೋಣೆಯಲ್ಲಿ ಅವರು ಇದ್ದ ಅವಧಿಯ ಮೇಲೆ ಗಾಳಿಯಲ್ಲಿರುವ ಕೊರೊನಾ ವೈರಸ್ ನೇರ ಸಂಬಂಧ ಹೊಂದಿದೆ ಎಂದು ಅಧ್ಯಯನ ತಿಳಿಸಿದೆ. ಒಂದೇ ಕೋಣೆಯಲ್ಲಿ ದೀರ್ಘ ಸಮಯ ಕೊರೊನಾ ರೋಗಿಯು ಇದ್ದರೆ, ಅವರು ವಾರ್ಡ್ ಬಿಟ್ಟ ಎರಡು ಗಂಟೆಗಳಿಗೂ ಹೆಚ್ಚು ಅವಧಿ ವೈರಸ್ ಆ ಕೋಣೆಯಲ್ಲಿ ಇರುತ್ತದೆ. ಅವರ ಹಾಸಿಗೆಯಿಂದ ಎರಡು ಮೀಟರ್ ದೂರದವರೆಗೂ ವೈರಸ್ ಇರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

 ಅಧ್ಯಯನದ ಮತ್ತೊಂದು ಸಾಧ್ಯತೆ

ಅಧ್ಯಯನದ ಮತ್ತೊಂದು ಸಾಧ್ಯತೆ

ಲಕ್ಷಣವಿಲ್ಲದೆ ಕಾಣಿಸಿಕೊಂಡ ಕೊರೊನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧ್ಯಯನ ತಿಳಿಸಿದ್ದು, ಫ್ಯಾನ್ ಅಥವಾ ಎಸಿ ಇಲ್ಲದ, ಗಾಳಿಯ ಹರಿವು ಹೆಚ್ಚು ಇಲ್ಲದ ಕೋಣೆಯಲ್ಲಿ ರೋಗಿ ಇದ್ದರೆ, ಅವರಿಂದ ವೈರಸ್ ಹರಡುವ ಸಾಧ್ಯತೆ ಕಡಿಮೆ ಎಂದು ತಿಳಿಸಿದ್ದಾರೆ.

ಜನವರಿ 13ಕ್ಕೆ ದೇಶದಲ್ಲಿ ಮೊದಲ ಕೊರೊನಾ ಲಸಿಕೆ?ಜನವರಿ 13ಕ್ಕೆ ದೇಶದಲ್ಲಿ ಮೊದಲ ಕೊರೊನಾ ಲಸಿಕೆ?

"ರೋಗಿಯಿದ್ದ ಸ್ಥಳದಲ್ಲಿ ವೈರಸ್ ಇರುತ್ತದೆ"

ಕೊರೊನಾ ರೋಗಿ ಕೋಣೆಯಲ್ಲಿ ಕೊರೊನಾ ವೈರಸ್ ಕೆಲವು ಸಮಯದವರೆಗೂ ಇದ್ದೇ ಇರುತ್ತದೆ ಎಂಬುದನ್ನು ಅಧ್ಯಯನ ಸಾಬೀತುಪಡಿಸಿದೆ. ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ಶೀಘ್ರ ಪತ್ತೆಹಚ್ಚುವುದು ಹಾಗೂ ಪ್ರತ್ಯೇಕ ಮಾಡುವುದು ಸೋಂಕು ಹರುಡುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಿಸಿಎಂಬಿ ನಿರ್ದೇಶಕ ರಾಕೇಶ್ ಮಿಶ್ರಾ ತಿಳಿಸಿದ್ದಾರೆ.

ಕೊರೊನಾ ಸೋಂಕಿಗೆ ಲಸಿಕೆ ದೊರೆಯುವವರೆಗೂ ಮಾಸ್ಕ್‌ ಧರಿಸುವುದೇ ಸಾಮಾಜಿಕ ವ್ಯಾಕ್ಸಿನ್ ಆಗಿದೆ. ಇದೇ ಸೋಂಕು ತಡೆಗಿರುವ ಏಕೈಕ ಹಾಗೂ ಪರಿಣಾಮಕಾರಿ ಮಾರ್ಗ ಎಂದು ಐಎಂಟೆಕ್ ನಿರ್ದೇಶಕ ಡಾ.ಸಂಜೀವ್ ಖೋಸ್ಲಾ ಅವರು ತಿಳಿಸಿದ್ದಾರೆ. ಹೀಗಾಗಿ ಕೊರೊನಾ ವೈರಸ್ ಸಂಪೂರ್ಣ ನಿವಾರಣೆಯಾಗುವವರೆಗೂ ಮಾಸ್ಕ್ ಅನ್ನು ಕಡ್ಡಾಯ ಧರಿಸಿರುವುದು ಒಳಿತು ಎಂದು ಸಲಹೆ ನೀಡಿದ್ದಾರೆ.

ಭಾರತದಲ್ಲಿ ಸದ್ಯಕ್ಕೆ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ದೊರೆತಿದೆ. ಇನ್ನು ಕೆಲವೇ ದಿನಗಳಲ್ಲಿ ಸಾಮೂಹಿಕ ಕೊರೊನಾ ವೈರಸ್ ಲಸಿಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಭಾರತ ಲಸಿಕೆಗೆ ಸಜ್ಜಾಗುತ್ತಿದೆ.

English summary
A study by two Indian research institutes found that the Covid-19 virus was present in air samples from Covid-19 wards
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X