ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಜೋರಾಂನ ಅತಿದೊಡ್ಡ ಕುಟುಂಬದ ಸದಸ್ಯರಲ್ಲಿ ಕೋವಿಡ್‌ ಪತ್ತೆ

|
Google Oneindia Kannada News

ಮಿಜೋರಾಂ, ಜು.24: ಅತೀ ದೊಡ್ಡ ಕುಟುಂಬವನ್ನು ಹೊಂದಿರು ಇಲ್ಲಿನ ಜಿಯೋನಾ ಚನಾರ ಮನೆಯ 12 ಮಂದಿಗೆ ಕೋವಿಡ್‌ ಪಾಸಿಟಿವ್‌ ಆಗಿದೆ. ಈ ಮೂಲಕ ಮನೆ ಮಂದಿಯೆಲ್ಲರೂ ಭಾರೀ ಆತಂಕಕ್ಕೆ ಒಳಗಾಗಿದ್ದಾರೆ.

ಚಾನಾ ಪಾವ್ಲ್ (ಆರಾಧನಾ) ನ ಆಧ್ಯಾತ್ಮಿಕ ನಾಯಕ. 39 ಪತ್ನಿಯರು, ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಕುಟುಂಬದ ಪಿತಾಮಹ ಎಂದು ಜಗತ್ತಿಗೆ ಪರಿಚಿತವಾಗಿರುವ ಜಿಯೋನಾ ಜೂನ್ 13 ರಂದು ತಮ್ಮ 76 ನೇ ವಯಸ್ಸಿನಲ್ಲಿ ನಿಧನರಾದರು.

38 ಪತ್ನಿಯರು 89 ಮಕ್ಕಳು: ವಿಶ್ವದ ಅತಿ ದೊಡ್ಡ ಕುಟುಂಬದ ಮುಖಂಡ ಇನ್ನಿಲ್ಲ38 ಪತ್ನಿಯರು 89 ಮಕ್ಕಳು: ವಿಶ್ವದ ಅತಿ ದೊಡ್ಡ ಕುಟುಂಬದ ಮುಖಂಡ ಇನ್ನಿಲ್ಲ

ಜಿಯೋನಾರ ಅನುಯಾಯಿಗಳಾದ 2,224 ನಿವಾಸಿಗಳು ಇರುವ ಚುವಾಂತರ್ ತ್ಲಾಂಗ್ನುವಾಮ್ ಗ್ರಾಮದ ಹಿರಿಯ ಮಿಜೋರಾಂ ಆರೋಗ್ಯ ಅಧಿಕಾರಿಯೊಬ್ಬರು, 1,255 ಜನರ ಮಾದರಿಗಳನ್ನು ಶುಕ್ರವಾರ ಸಂಜೆ 5 ಗಂಟೆಯವರೆಗೆ ಪರೀಕ್ಷಿಸಲಾಗಿದೆ. 1,255 ಮಾದರಿಗಳಲ್ಲಿ, 80 ಮಂದಿಗೆ ಕೊರೊನಾ ದೃಢಪಟ್ಟಿದೆ. ಈ ಪೈಕಿ 12 ಜಿಯೋನಾರ ಕುಟುಂಬ ಸದಸ್ಯರು ಎಂದು ತಿಳಿಸಿದ್ದಾರೆ.

Coronavirus outbreak in Mizorams Zionas largest family

ಜಿಯೋನಾರ ನಿಧನದಿಂದ ವಿಧವೆಯರಾದ ಪತ್ನಿಯರು, ಮಕ್ಕಳು, ಮೊಮ್ಮಕ್ಕಳು, ಕಿರಿ ಮೊಮ್ಮಕ್ಕಳು, ಪುತ್ರರು, ಮೊಮ್ಮಕ್ಕಳ ಪತ್ನಿಯರು ಒಟ್ಟಾರೆಯಾಗಿ ಸುಮಾರು 200 ಜನ ಕುಟುಂಬಸ್ಥರು ಇರುವ ಈ ಜಿಯೋನಾರ ವಾಸಸ್ಥಾನವನ್ನು "ಚುವಾಂತರ್ ರನ್" ಎಂದು ಕರೆಯುತ್ತಾರೆ ಎಂದು ಚಾನಾ ಪಂಥದ ಸದಸ್ಯರೊಬ್ಬರು ತಿಳಿಸಿದ್ದಾರೆ.

ತಮ್ಮನ್ನು "ಚುವಾಂತರ್ ಕೊಹ್ರಾನ್" ಅಥವಾ ಚರ್ಚ್ ಆಫ್ ದಿ ನ್ಯೂ ಜನರೇಷನ್ ಎಂದು ಪರಿಗಣಿಸಿದ ಸಮುದಾಯದ 163 ಜನರಿಗೆ ಕಳೆದ ಒಂದು ವಾರದಲ್ಲಿ ಕೋವಿಡ್‌ ದೃಢಪಟ್ಟಿದೆ ಎಂದು ಶುಕ್ರವಾರ ತಿಳಿದು ಬಂದಿರುವುದಾಗಿ ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್‌ ಕಾರ್ಯಕ್ರಮದ (ಐಡಿಎಸ್‌ಪಿ) ರಾಜ್ಯ ನೋಡಲ್ ಅಧಿಕಾರಿ ಡಾ.ಪಚೌ ಲಾಲ್ಮಲ್ಸವ್ಮಾ ಹೇಳಿದರು.

ಒಟ್ಟಾರೆಯಾಗಿ ಸಮುದಾಯದ 243 ಸದಸ್ಯರು ಈಗ ಸೋಂಕಿಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.

ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ 1 ಲಕ್ಷ ರೂ. ಬಹುಮಾನಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ 1 ಲಕ್ಷ ರೂ. ಬಹುಮಾನ

ಜಿಯೋನಾ ಪುತ್ರರೊಬ್ಬರು ಸಂಜೆ 5 ಗಂಟೆಯವರೆಗೆ, ಚುವಾಂತರ್ ರನ್‌ನ ಕನಿಷ್ಠ 12 ಸದಸ್ಯರಿಗೆ ಕೋವಿಡ್‌ ದೃಢಪಟ್ಟಿದೆ. ಜಿಯೋನಾರ ಮೊದಲ ಪತ್ನಿ ಸೇರಿದಂತೆ ಹಿರಿಯ ಪುತ್ರ ನುನ್ಪರ್ಲಿಯಾನಾ ಕೋವಿಡ್‌ ದೃಢಪಟ್ಟಿದೆ ಎಂದು ಹೇಳಲಾಗಿದೆ.

ನುನ್ಪರ್ಲಿಯಾನಾ (61) ಇಬ್ಬರು ಪತ್ನಿಯರು ಮತ್ತು ಸುಮಾರು 15 ಮಕ್ಕಳನ್ನು ಹೊಂದಿದ್ದಾರೆ. ಜಿಯೋನಾ ಮರಣದ ನಂತರದ ಹೊಸ ನಾಯಕರನ್ನು ಇಲ್ಲಿಯವರೆಗೆ ಗುರುತಿಸಲಾಗಿಲ್ಲದಿದ್ದರೂ, ಇಡೀ ಪಂಥದವರಲ್ಲದಿದ್ದರೆ ಕುಟುಂಬದ ದೊಡ್ಡಸದಸ್ಯರು ಮುಖ್ಯಸ್ಥರೆಂದು ಪರಿಗಣಿಸಲಾಗಿದೆ.

ಏತನ್ಮಧ್ಯೆ, ನಾಲ್ಕನೇ ದಿನವೂ ಸಾಮೂಹಿಕ ಪರೀಕ್ಷೆಗಳು ಮುಂದುವರೆದಿದೆ. ಮುಖ್ಯವಾಗಿ ಐಜಾಲ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ಪ್ರದೇಶದಲ್ಲಿ, ಕನಿಷ್ಠ 60 ಪ್ರತಿಶತದಷ್ಟು ಪ್ರಕರಣಗಳು ಪ್ರತಿದಿನ ಪತ್ತೆಯಾಗುತ್ತಿದೆ.

(ಒನ್‌ಇಂಡಿಯಾ ಸುದ್ದಿ)

English summary
Coronavirus outbreak in Mizoram's Ziona's largest family. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X