ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಕೊರೊನಾ ವೈರಸ್ ಸಂಕಷ್ಟದ ಹೊರೆಗೆ ಪ್ರಮುಖ ಕಾರಣ ಈ ಐದು ರಾಜ್ಯಗಳು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 2: ದೇಶದಲ್ಲಿ ಕೊರೊನಾ ವೈರಸ್ ಭೀತಿ ಸದ್ಯದ ಪರಿಸ್ಥಿತಿಯಲ್ಲಿ ಕಡಿಮೆಯಾಗುವ ಲಕ್ಷಣಗಳಿಲ್ಲ. ದಿನದಿಂದ ದಿನಕ್ಕೆ ಹೊಸ ಪ್ರಕರಣಗಳು, ಸಾವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿ ರಾಜ್ಯಗಳಲ್ಲಿಯೂ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದರೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಐದು ರಾಜ್ಯಗಳಲ್ಲಿ.

Recommended Video

ಆಸ್ಪತ್ರೆಯಿಂದ ಕೆಲಸ ಮಾಡುತ್ತಿರುವ Minister | Oneindia Kannada

ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ದೇಶದ ಒಟ್ಟು ಪ್ರಕರಣಗಳಲ್ಲಿ ಬಹುಪಾಲು ಹೊರೆಯನ್ನು ಹೊತ್ತುಕೊಂಡಿವೆ. ಸೋಮವಾರ ದಾಖಲಾಗಿದ್ದ 69,921 ಹೊಸ ಪ್ರಕರಣಗಳಲ್ಲಿ ಶೇ 56ರಷ್ಟು ಪ್ರಕರಣಗಳು ಈ ಐದು ರಾಜ್ಯಗಳಲ್ಲಿಯೇ ವರದಿಯಾಗಿವೆ. 819 ಸಾವುಗಳಲ್ಲಿ ಈ ರಾಜ್ಯಗಳ ಪ್ರಮಾಣ ಶೇ 65.4ರಷ್ಟಿದೆ.

ಪಾಕಿಸ್ತಾನದಲ್ಲಿ ಕೊರೊನಾ ಸೋಂಕು ಏಕಾಏಕಿ ಕಡಿಮೆಯಾಗಲು ಕಾರಣವೇನು? ಪಾಕಿಸ್ತಾನದಲ್ಲಿ ಕೊರೊನಾ ಸೋಂಕು ಏಕಾಏಕಿ ಕಡಿಮೆಯಾಗಲು ಕಾರಣವೇನು?

ಅತ್ಯಧಿಕ ಪ್ರಕರಣಗಳು ದಾಖಲಾಗಿರುವ ಈ ಐದು ರಾಜ್ಯಗಳು ದೇಶದಲ್ಲಿ ಸೋಮವಾರದವರೆಗೂ ದಾಖಲಾದ ಒಟ್ಟು 36,91,166 ಪ್ರಕರಣಗಳಲ್ಲಿ ಶೇ 60ರಷ್ಟು ಹೊರೆ ಹೊತ್ತುಕೊಂಡಿವೆ. ಇದರಲ್ಲಿ ಮಹಾರಾಷ್ಟ್ರ ಒಂದರ ಪಾಲು ಶೇ 21. ಮುಂದೆ ಓದಿ.

ಐದು ರಾಜ್ಯಗಳು ಮುಂಚೂಣಿಯಲ್ಲಿ

ಐದು ರಾಜ್ಯಗಳು ಮುಂಚೂಣಿಯಲ್ಲಿ

ಒಟ್ಟು 7,85,996 ಸಕ್ರಿಯ ಪ್ರಕರಣಗಳಲ್ಲಿ ಈ ಐದು ರಾಜ್ಯಗಳ ಕೊಡುಗೆ ಶೇ 62.2ರಷ್ಟು. ಹಾಗೆಯೇ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡವರಲ್ಲಿ ಶೇ 58ರಷ್ಟು ಈ ರಾಜ್ಯಗಳಲ್ಲಿಯೇ ವರದಿಯಾಗಿದೆ. ಸಕ್ರಿಯ ಪ್ರಕರಣಗಳಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕ ಶೇ 48.6ರಷ್ಟು ಪಾಲು ಹೊಂದಿವೆ.

ಶೇ 56ರಷ್ಟು ಪಾಲು

ಶೇ 56ರಷ್ಟು ಪಾಲು

ಮಹಾರಾಷ್ಟ್ರ ಒಂದರಲ್ಲಿಯೇ ಶೇ 24.7ರಷ್ಟು ಸಕ್ರಿಯ ಪ್ರಕರಣಗಳಿವೆ. ಸೋಮವಾರ ಶೇ 22ರಷ್ಟು ಸಾವುಗಳು ಸಂಭವಿಸಿವೆ. ಹೊಸ ಪ್ರಕರಣಗಳಿಗೆ ಅತ್ಯಧಿಕ ಸೇರ್ಪಡೆಯು ಈ ಐದು ರಾಜ್ಯಗಳಲ್ಲಿ ಆಗಿದೆ. ಮಹಾರಾಷ್ಟ್ರ-11,852, ಆಂಧ್ರಪ್ರದೇಶ- 10,004, ಕರ್ನಾಟಕ-6,495, ತಮಿಳುನಾಡು- 5,956 ಮತ್ತು ಉತ್ತರ ಪ್ರದೇಶ-4,782 ಸೇರಿ ಹೊಸ ಖಚಿತ ಪ್ರಕರಣಗಳಲ್ಲಿ ಶೇ 56ರಷ್ಟು ಪಾಲು ಹೊಂದಿವೆ.

ಆಗಸ್ಟ್ ಆಘಾತ: ಕೊವಿಡ್-19 ಸಾವಿನ ಸಂಖ್ಯೆಯಲ್ಲಿ ದಾಖಲೆ ಬರೆದ ಭಾರತ!ಆಗಸ್ಟ್ ಆಘಾತ: ಕೊವಿಡ್-19 ಸಾವಿನ ಸಂಖ್ಯೆಯಲ್ಲಿ ದಾಖಲೆ ಬರೆದ ಭಾರತ!

ದೆಹಲಿಯಲ್ಲಿ ಸಾವಿನ ಸಂಖ್ಯೆ

ದೆಹಲಿಯಲ್ಲಿ ಸಾವಿನ ಸಂಖ್ಯೆ

ದೆಹಲಿಯಲ್ಲಿ ಒಟ್ಟು 4,444 ಸಾವುಗಳು ದಾಖಲಾಗಿವೆ. ಉತ್ತರ ಪ್ರದೇಶಕ್ಕಿಂತಲೂ ಸಾವಿನ ಪ್ರಮಾಣ ರಾಜಧಾನಿಯಲ್ಲಿ ಹೆಚ್ಚಿದೆ. ಉತ್ತರ ಪ್ರದೇಶದಲ್ಲಿ 3,486 ಮಂದಿ ಮೃತಪಟ್ಟಿದ್ದಾರೆ. ಆದರೆ ಸೋಮವಾರ ದೆಹಲಿಯಲ್ಲಿ 18 ಸಾವುಗಳು ವರದಿಯಾಗಿದ್ದರೆ, ಉತ್ತರ ಪ್ರದೇಶದಲ್ಲಿ 63 ಮಂದಿ ಬಲಿಯಾಗಿದ್ದಾರೆ.

78,357 ಹೊಸ ಪ್ರಕರಣಗಳು

78,357 ಹೊಸ ಪ್ರಕರಣಗಳು

ಬುಧವಾರ ಭಾರತದಲ್ಲಿ 78,357 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 37,69,524ಕ್ಕೆ ಏರಿಕೆಯಾಗಿದೆ. ಒಂದೇ ದಿನ 1045 ಮಂದಿ ಬಲಿಯಾಗಿದ್ದಾರೆ. ದೇಶದಲ್ಲಿ ಒಟ್ಟು 29,019,09 ಸಕ್ರಿಯ ಪ್ರಕರಣಗಳಿವೆ.

Covid 19 Infographics: ಯಾವ ದೇಶದಲ್ಲಿ ಸಾವಿನ ಸಂಖ್ಯೆ ಏರಿಕೆ?Covid 19 Infographics: ಯಾವ ದೇಶದಲ್ಲಿ ಸಾವಿನ ಸಂಖ್ಯೆ ಏರಿಕೆ?

English summary
Coroonavirus cases in India is surging. More than half of the cases are being reported from only five states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X