ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರವನ್ನೇ ಬೆಚ್ಚಿಬೀಳಿಸಿದ ಈ 5 ಸುಳ್ಳು ಸುದ್ದಿಯನ್ನು ಯಾವ ಕಾರಣಕ್ಕೂ ನಂಬಬೇಡಿ

|
Google Oneindia Kannada News

ಕೋವಿಡ್ 19 ಮರಣ ಮೃದಂಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೊತೆಗೆ, ಸೋಂಕಿತರ ಸಂಖ್ಯೆಯೂ ಉಲ್ಬಣಗೊಳ್ಳುತ್ತಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿಯದೆ ಸುಳ್ಳು ಸುದ್ದಿಗಳು ಯಥೇಚ್ಚವಾಗಿ ಹರಿದಾಡುತ್ತಿದೆ.

ಕಪೋಕಲ್ಪಿತ ಸುದ್ದಿಗಳು, ವದಂತಿಗಳು ಸಾಮಾಜಿಕ ತಾಣದಲ್ಲಿ ಎಗ್ಗಿಲ್ಲದೇ ಹರಿದಾಡುತ್ತಲೇ ಇದೆ. ಈ ಸುದ್ದಿಯನ್ನೆಲ್ಲಾ ನಂಬಬಾರದೆಂದು ಎಷ್ಟೇ ಸಂಬಂಧಪಟ್ಟವರು ತಿಳಿ ಹೇಳಿದರೂ, ಇಂತಹ ಸುದ್ದಿಗಳು ಜನರಲ್ಲಿ ಅನಗತ್ಯ ಭೀತಿ ಮತ್ತು ಗೊಂದಲವನ್ನು ಸೃಷ್ಟಿಸುತ್ತಿದೆ.

ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ಸ್ಪೆಷಲ್ ವೆಂಟಿಲೇಟರ್ ಸಿದ್ಧಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ಸ್ಪೆಷಲ್ ವೆಂಟಿಲೇಟರ್ ಸಿದ್ಧ

ಕೆಲವೊಂದು ಸುಳ್ಳು ಸುದ್ದಿಗಳಿಗೆ ಖುದ್ದು ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ, ಇಷ್ಟೆಲ್ಲಾ ಯಾಕೆ, ಭಾರತೀಯ ಆರ್ಮಿಯೂ ಇದಕ್ಕೆ ಸ್ಪಷ್ಟನೆಯನ್ನು ನೀಡಬೇಕಾಗಿ ಬಂತು.

ಕೊವಿಡ್19 ಕದನ: 18 ದೇಶಗಳ ಟಾಸ್ಕ್ ಫೋರ್ಸ್‌ಗೆ ಮೋದಿ ನಾಯಕ?ಕೊವಿಡ್19 ಕದನ: 18 ದೇಶಗಳ ಟಾಸ್ಕ್ ಫೋರ್ಸ್‌ಗೆ ಮೋದಿ ನಾಯಕ?

ಕೊರೊನಾ ದಾಳಿಯ ಮುನ್ನೆಚ್ಚರಿಕೆಯ ಕ್ರಮವಾಗಿ ಲಾಕ್ ಡೌನ್ ಘೋಷಣೆಯಾದ ನಂತರ, ಸಾಮಾಜಿಕ ತಾಣದಲ್ಲಿ ಬಿರುಗಾಳಿ ಎಬ್ಬಿಸಿದ ಐದು ಸುಳ್ಳು ಸುದ್ದಿಗಳ ಪಟ್ಟಿ ಇಂತಿದೆ.

ಕೊರೊನಾ ಭಾರತದಲ್ಲಿ ಮೂರನೇ ಸ್ಟೇಜ್ ಗೆ ಬಂದಿದೆ

ಕೊರೊನಾ ಭಾರತದಲ್ಲಿ ಮೂರನೇ ಸ್ಟೇಜ್ ಗೆ ಬಂದಿದೆ

ಆನ್ಲೈನ್ ಅಂತರ್ಜಾಲ ಸಂಸ್ಥೆಯೊಂದು ಕೊರೊನಾ ವೈರಸ್ ಭಾರತದಲ್ಲಿ ಮೂರನೇ ಸ್ಟೇಜ್ ಗೆ ಬಂದಿದೆ ಎನ್ನುವ ಸುದ್ದಿಯನ್ನು ಪ್ರಕಟಿಸಿತು. ಇದು ದೇಶದಲ್ಲಿ ಭಾರೀ ಸದ್ದನ್ನು ಮಾಡಿತು. ನಂತರ, ಕೇಂದ್ರ ಆರೋಗ್ಯ ಸಚಿವಾಲಯ ಇದಕ್ಕೆ ಸ್ಪಷ್ಟನೆಯನ್ನು ನೀಡಿ, ಕೊರೊನಾ, ಭಾರತದಲ್ಲಿ ಇನ್ನೂ ಎರಡನೇ ಹಂತದಲ್ಲಿದೆ ಎಂದು ಸ್ಪಷ್ಟ ಪಡಿಸಿತು.

ಐದು ಸಾವಿರ ಕಡಿತಗೊಳಿಸಲು ಪ್ರಧಾನಿ ಮೋದಿ ಸೂಚನೆ

ಐದು ಸಾವಿರ ಕಡಿತಗೊಳಿಸಲು ಪ್ರಧಾನಿ ಮೋದಿ ಸೂಚನೆ

ಕೊರೊನಾ ವೈರಸ್ ಎದುರಿಸುತ್ತಿರುವ ಈ ಸಂದಿಗ್ದ ಪರಿಸ್ಥಿತಿಯಲ್ಲಿ ಎಲ್ಲಾ ಕೇಂದ್ರ ಸರಕಾರದ ನೌಕರರ ಮತ್ತು ಪಿಂಚಣಿದಾರರ ಮಾಸಿಕ ವೇತನದಲ್ಲಿ ಐದು ಸಾವಿರ ಕಡಿತಗೊಳಿಸಲು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತು. ಕೊನೆಗೆ, ಈ ರೀತಿಯ ಯಾವ ಚಿಂತನೆಯೂ ಕೇಂದ್ರ ಹೊಂದಿಲ್ಲ, ಎಂದು ಖುದ್ದು, ಪ್ರಧಾನಮಂತ್ರಿ ಕಾರ್ಯಾಲಯ ಸ್ಪಷ್ಟನೆಯನ್ನು ನೀಡಿತು.

Fact Check: ಪಿಎಂ ಕೇರ್ಸ್ ದೇಣಿಗೆ ನೀಡುವ ಮುನ್ನ ಫೇಕ್ ಐಡಿ ಬಗ್ಗೆ ಗಮನಿಸಿFact Check: ಪಿಎಂ ಕೇರ್ಸ್ ದೇಣಿಗೆ ನೀಡುವ ಮುನ್ನ ಫೇಕ್ ಐಡಿ ಬಗ್ಗೆ ಗಮನಿಸಿ

ವೈಷ್ಣೋದೇವಿ ಯಾತ್ರಿಕರು ಕತ್ರಾದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ

ವೈಷ್ಣೋದೇವಿ ಯಾತ್ರಿಕರು ಕತ್ರಾದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ

ಕೊರೊನಾ ವೈರಸ್ ನಿಂದ ವೈಷ್ಣೋದೇವಿ ಯಾತ್ರಿಕರು ಕತ್ರಾದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತು. ಕೊನೆಗೆ, ಕೇಂದ್ರ ಪ್ರವಾಸೋದ್ಯಮ ಮತ್ತು ಜಮ್ಮು ಕಾಶ್ಮೀರ ಆಡಳಿತ, ಇದೊಂದು ಸುಳ್ಳುಸುದ್ದಿ, ಹದಿನೆಂಟು ಮಾರ್ಚ್ ಗೆ ಈ ಯಾತ್ರೆ ಮುಗಿದಾಗಿದೆ ಎಂದು ಸ್ಪಷ್ಟನೆಯನ್ನು ನೀಡಿತು.

ದೈನಂದಿನ ಆಡಳಿತ ಮಿಲಿಟರಿ ಕೈಗೆ ಹೋಗಲಿದೆ

ದೈನಂದಿನ ಆಡಳಿತ ಮಿಲಿಟರಿ ಕೈಗೆ ಹೋಗಲಿದೆ

ಏಪ್ರಿಲ್ ಮಧ್ಯಭಾಗದಲ್ಲಿ ಭಾರತದಲ್ಲಿ ಎಮರ್ಜೆನ್ಸಿ ಘೋಷಣೆ ಮಾಡಲಾಗುವುದು ಎನ್ನುವ ವದಂತಿ, ಸಾಮಾಜಿಕ ತಾಣದಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿತು. ದೈನಂದಿನ ಆಡಳಿತ ಮಿಲಿಟರಿ ಕೈಗೆ ಹೋಗಲಿದೆ ಎಂದು ಸುದ್ದಿಯಾಗುತ್ತಿದ್ದಂತೆಯೇ, ಭೂಸೇನಾ ಅಧಿಕಾರಿಗಳು ಇದೊಂದು ಸುಳ್ಳುಸುದ್ದಿ ಎನ್ನುವ ಸ್ಪಷ್ಟನೆಯನ್ನು ನೀಡಿತು.

ಹಬೆಯಿಂದ ಉಸಿರೆಳೆದುಕೊಂಡರೆ ವೈರಸ್ ಮಾಯ

ಹಬೆಯಿಂದ ಉಸಿರೆಳೆದುಕೊಂಡರೆ ವೈರಸ್ ಮಾಯ

ಹಬೆಯಿಂದ ಉಸಿರೆಳೆದುಕೊಂಡರೆ (inhalation) ಕೊರೊನಾ ವೈರಸ್ ಶೇ. 100% ತೊಲಗಿ ಹೋಗುತ್ತದೆ. ಮೂಗು, ಗಂಟಲಿನೊಳಗೆ ಹೋಗಿದ್ದರೂ, ಈ ರೀತಿ ಮಾಡಿದರೆ, ತೊಂದರೆಯಾಗುವುದಿಲ್ಲ ಎಂದು ಚೀನಾದವರು ಕಂಡು ಹಿಡಿದಿದ್ದಾರೆ ಎನ್ನುವ ಸುದ್ದಿ ಹರಿದಾಡಿತು. ಆಮೇಲೆ, ಇಂತಹ ಯಾವ ಪ್ರಯೋಗವೂ ಚೀನಾದಿಂದ ನಡೆದಿಲ್ಲ ಎನ್ನುವ ಸ್ಪಷ್ಟನೆಯನ್ನು ನೀಡಲಾಯಿತು.

Fact Check: ಬಿಸಿ ನೀರಿನ ಹಬೆಗೆ ವೈರಾಣು ಬೆದರಿ ಹೋಗುತ್ತಾ?Fact Check: ಬಿಸಿ ನೀರಿನ ಹಬೆಗೆ ವೈರಾಣು ಬೆದರಿ ಹೋಗುತ್ತಾ?

English summary
Five False News Spreading In And Around On Coronavirus, Don't Believe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X