ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ರೂಪಾಂತರ ಸೃಷ್ಟಿ; ವೈರಸ್ ಟ್ರ್ಯಾಕಿಂಗ್ ನಿರ್ಣಾಯಕ ಎಂದ ಅಧ್ಯಯನ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಹೈದರಾಬಾದ್, ಜುಲೈ 30: ಕೊರೊನಾ ಸೋಂಕಿನ ಹರಡುವಿಕೆ ಜೊತೆಜೊತೆಗೆ ದಿನಕ್ಕೊಂದು ಕೊರೊನಾ ರೂಪಾಂತರಗಳ ಸೃಷ್ಟಿ ಹೊಸ ಆತಂಕಕ್ಕೆ ಕಾರಣವಾಗಿದೆ. ಇದೀಗ ರೂಪಾಂತರ ಸೃಷ್ಟಿ ಕುರಿತು ಅಧ್ಯಯನವೊಂದನ್ನು ಕೈಗೊಳ್ಳಲಾಗಿದ್ದು, ರೂಪಾಂತರ ಸಂಬಂಧ ಹಲವು ವಿಷಯಗಳನ್ನು ಅಧ್ಯಯನ ಹೊರಹಾಕಿದೆ.

ಸೋಂಕಿತ ಮನುಷ್ಯನ ದೇಹದಲ್ಲಿಯೇ ಹೊಸ ಕೊರೊನಾ ರೂಪಾಂತರ ಸೃಷ್ಟಿಯಾಗುತ್ತದೆ. ಆ ಬದಲಾವಣೆಗಳೊಂದಿಗೆ ಮತ್ತೆ ಬೇರೆಯವರಿಗೂ ಸೋಂಕು ಹರಡಲು ಆರಂಭವಾಗುತ್ತದೆ ಎಂದು ತಿಳಿಸಿದೆ.

ಭಾರತದಲ್ಲಿ ಕೊರೊನಾ 2ನೇ ಅಲೆ ತೀವ್ರತೆಗೆ ಡೆಲ್ಟಾ ರೂಪಾಂತರವೇ ಕಾರಣ: ಐಸಿಎಂಆರ್ಭಾರತದಲ್ಲಿ ಕೊರೊನಾ 2ನೇ ಅಲೆ ತೀವ್ರತೆಗೆ ಡೆಲ್ಟಾ ರೂಪಾಂತರವೇ ಕಾರಣ: ಐಸಿಎಂಆರ್

ಈ ಅಧ್ಯಯನವನ್ನು MedRxiv ನಲ್ಲಿ ಪ್ರಕಟಿಸಲಾಗಿದೆ. ಸಾಂಕ್ರಾಮಿಕ ಕಾಲದಲ್ಲಿ ಎರಡು ಬಾರಿ ಕೊರೊನಾ ಮಾದರಿಗಳ ಪರೀಕ್ಷೆ ನಡೆಸಿ ಈ ಫಲಿತಾಂಶ ಕಂಡುಕೊಂಡಿರುವುದಾಗಿ ತಿಳಿಸಿದೆ. ಹೈದರಾಬಾದ್ ಮೂಲದ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲೆಕ್ಯುಲರ್ ಬಯಾಲಜಿ, ಘಾಜಿಯಾಬಾದ್‌ನ ಅಕಾಡೆಮಿ ಫಾರ್ ಸೈಂಟಿಫಿಕ್ ಅಂಡ್ ಇನೊವೇಟಿವ್ ರಿಸರ್ಚ್, ಭುವನೇಶ್ವರದ ಇನ್‌ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸಸ, ದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಜೆನೋಮಿಕ್ಸ್ ಅಂಡ್ ಇಂಟೆಗ್ರೇಟಿವ್ ಬಯಾಲಜಿ, ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್, ಜೋಧಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಈ ಅಧ್ಯಯನದಲ್ಲಿ ಭಾಗವಹಿಸಿವೆ.

Coronavirus Mutates Inside The Body Of Infected Patient Says Study

ಜನರಲ್ಲಿ ಕಾಲಾವಧಿಗೆ ತಕ್ಕಂತೆ ವೈರಸ್‌ನ ಹರಡುವಿಕೆಯನ್ನು ಟ್ರ್ಯಾಕ್ ಮಾಡುವ ಮೂಲಕ ವೈರಸ್‌ನ ಗಂಭೀರತೆ ಹಾಗೂ ಹರಡುವಿಕೆ ಪ್ರಮಾಣವನ್ನು ಕಂಡುಕೊಳ್ಳಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ರೂಪಾಂತರ ಸೃಷ್ಟಿ ಪತ್ತೆಗೂ ಅನುಕೂಲಕರ ಎಂದು ಹೇಳಿದ್ದಾರೆ.

ಅಧ್ಯಯನದ ಮೊದಲ ಹಂತದಲ್ಲಿ ಜರ್ಮನಿ, ಮಲೇಷಿಯಾ, ಚೀನಾ, ಬ್ರಿಟನ್, ಅಮೆರಿಕ ಹಾಗೂ ಭಾರತದ ಹಲವು ಪ್ರದೇಶಗಳಲ್ಲಿ ಸಂಗ್ರಹಿಸಿದ 1347 ಮಾದರಿಗಳನ್ನು ಪರೀಕ್ಷೆ ನಡೆಸಿದ್ದಾರೆ. ಈ ಮೂಲಕ ಸೋಂಕಿತನ ದೇಹ ಹೊಕ್ಕ ಸೋಂಕು, ಅಲ್ಲೇ ಬೇರೊಂದು ರೂಪಾಂತರವನ್ನೂ ಪಡೆಯುತ್ತದೆ. ಆ ಮೂಲಕ ಬೇರೆಯವರಿಗೆ ಸೋಂಕು ಹರಡುತ್ತಾ ಸಾಗುತ್ತದೆ.

ಅದರ ಸ್ವರೂಪ ಮತ್ತೆ ಒಬ್ಬರಿಂದ ಒಬ್ಬರಿಗೆ ಬದಲಾಗುತ್ತಾ ಸಾಗಬಹುದು ಎಂದು ತಿಳಿಸಿದ್ದಾರೆ.

ಈ ನಡುವೆ ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ಕೊರೊನಾ ರೂಪಾಂತರದ ಬಗ್ಗೆ ಆತಂಕ ಹೆಚ್ಚಾಗುತ್ತಲೇ ಸಾಗಿದೆ. ಇದುವರೆಗೂ ಪತ್ತೆಯಾಗಿರುವ ರೂಪಾಂತರಗಳ ಪೈಕಿ ಡೆಲ್ಟಾ ಅತಿ ವೇಗವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ರವಾನಿಸಿದೆ.

ನೇಪಾಳ, ಪೋರ್ಚುಗಲ್ ನಂತಹ ದೇಶಗಳಲ್ಲಿಯೂ ಎವೈ 1 ಕಂಡುಬಂದಿದೆ. ಅದರ ಹರಡುವಿಕೆ, ಮತ್ತು ಗುಣಲಕ್ಷಣವನ್ನು ಅಧ್ಯಯನ ಮಾಡಲಾಗುತ್ತಿದೆ. ಇನ್ನಷ್ಟು ಹೆಚ್ಚು ಸಾಂಕ್ರಾಮಿಕದ ವೈರಾಣು ಬಂದರೆ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದೀಗ ಈ ರೂಪಾಂತರ ಅತಿ ವೇಗವಾಗಿ ಹರಡುತ್ತಿದ್ದು, ಜನರು ಎಚ್ಚರಿಕೆಯಿಂದಿರಬೇಕೆಂದು WHO ತಿಳಿಸಿದೆ.

ಡೆಲ್ಟಾ ರೂಪಾಂತರ ವಿಶ್ವದಾದ್ಯಂತ ಸೋಂಕನ್ನು ಪಸರಿಸುತ್ತಿದೆ. ಇದೇ ರೂಪಾಂತರ ಮಧ್ಯಪ್ರಾಚ್ಯದಲ್ಲಿ ಕೊರೊನಾ ನಾಲ್ಕನೇ ಅಲೆ ಸೃಷ್ಟಿಗೆ ಕಾರಣವಾಗಿದೆ. ಭಾರತದಲ್ಲೇ ಮೊದಲು ಕಂಡುಬಂದಿರುವ ಡೆಲ್ಟಾ 95ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ರವಾನಿಸಿದ್ದಾರೆ.

ಈಚೆಗಷ್ಟೆ, "ಈ ರೂಪಾಂತರ ಹರಡುತ್ತಿರುವ ವೇಗವನ್ನು ಗಮನಿಸಿದರೆ, ಶೀಘ್ರವೇ ಜಾಗತಿಕವಾಗಿ ಅತಿ ಪ್ರಬಲವಾದ ರೂಪಾಂತರವಾಗುವ ಸಾಧ್ಯತೆಯಿದೆ" ಎಂದು ಡಬ್ಲುಎಚ್‌ಒ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ ಖೇತ್ರಪಾಲ್ ಸಿಂಗ್ ಎಚ್ಚರಿಸಿದ್ದರು.

ಕೋವಿಡ್‌ ಮುಕ್ತ ಎಂದು ಘೋಷಿಸಲಾಗಿದ್ದ ಪ್ರದೇಶಗಳನ್ನು ಕೊರೊನಾದ ಡೆಲ್ಟಾ ರೂಪಾಂತರಿ ಆವರಿಸಿ ಆತಂಕಕ್ಕೆ ಕಾರಣವಾಗಿದೆ. ಡೆಲ್ಟಾ ರೂಪಾಂತರವು ಆಲ್ಫಾ ರೂಪಾಂತರಕ್ಕಿಂತ ಹೆಚ್ಚು ಹರಡಬಲ್ಲದು ಮತ್ತು ಪ್ರಸ್ತುತ ಪ್ರವೃತ್ತಿ ಮುಂದುವರಿದರೆ ಈ ರೂಪಾಂತರ ಪ್ರಬಲ ವಂಶಾವಳಿಯಾಗುವ ನಿರೀಕ್ಷೆಯಿದೆ ಎಂದು ಈಚಿನ ಅಧ್ಯಯನವೊಂದು ತಿಳಿಸಿತ್ತು.

ಸದ್ಯಕ್ಕೆ ಅತಿ ಅಪಾಯಕಾರಿ ಎನ್ನಲಾದ ಡೆಲ್ಟಾ ರೂಪಾಂತರದ ಕುರಿತು ಸಂಶೋಧನೆಗಳು ನಡೆಯುತ್ತಿದ್ದು, ಅದನ್ನು ತಡೆಯಲು ಅಗತ್ಯ ಕ್ರಮಗಳ ಕುರಿತು ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ.

English summary
A recent study of newly-discovered variants of COVID-19 has shown that virus mutates inside the body of an infected patient and spreads to others with those changes,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X