ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರಿದಷ್ಟೇ ವೇಗದಲ್ಲಿ ಇಳಿದುಬಿಡಲಿದೆ ಕೊರೊನಾ ಪ್ರಕರಣ; ವೈದ್ಯರ ಭರವಸೆ

|
Google Oneindia Kannada News

ನವದೆಹಲಿ, ಏಪ್ರಿಲ್ 20: ಕೊರೊನಾ ಎರಡನೇ ಅಲೆ ದೇಶದಲ್ಲಿ ಭೀತಿ ಮೂಡಿಸಿದ್ದು, ಬಹುಪಾಲು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹಲವು ರಾಜ್ಯಗಳು ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಹಾದಿಯನ್ನು ಹಿಡಿದಿವೆ.

ಫೆಬ್ರವರಿ ತಿಂಗಳ ಮಧ್ಯದಿಂದ ದೇಶದ ಕೊರೊನಾ ಪ್ರಕರಣಗಳಲ್ಲಿ ಇದ್ದಕ್ಕಿದ್ದಂತೆ ಏರಿಕೆಯಾಗಿದ್ದು, ಒಂದೂವರೆ ತಿಂಗಳಿನಿಂದಲೂ ಪ್ರಕರಣಗಳ ಸಂಖ್ಯೆ ಏರಿಕೆ ಹಂತದಲ್ಲೇ ಇವೆ. ಆದರೆ ಎಷ್ಟು ದಿನಗಳ ಕಾಲ ದೇಶದಲ್ಲಿ ಈ ಕೊರೊನಾ ಅಲೆ ಇರಬಹುದು? ಕೊರೊನಾ ಪ್ರಕರಣಗಳು ಇನ್ನಷ್ಟು ಏರಿಕೆಯಾಗುತ್ತವೆಯೇ? ಯಾವಾಗ ಇಳಿಕೆ ಕಂಡುಬರುತ್ತದೆ ಎಂಬ ಪ್ರಶ್ನೆಗಳು ಜನರನ್ನು ಕಾಡುತ್ತಿವೆ. ಇದಕ್ಕೆ ವೈದ್ಯರೊಬ್ಬರು ಉತ್ತರ ನೀಡಿದ್ದಾರೆ. ಮುಂದೆ ಓದಿ...

ಕೊರೊನಾ ಕಥೆ: ಭಾರತದಲ್ಲಿ ಒಂದೇ ದಿನ 259170 ಮಂದಿಗೆ ಸೋಂಕು! ಕೊರೊನಾ ಕಥೆ: ಭಾರತದಲ್ಲಿ ಒಂದೇ ದಿನ 259170 ಮಂದಿಗೆ ಸೋಂಕು!

"ಮೇ ಮಧ್ಯದಲ್ಲಿ ಗರಿಷ್ಠ ಮಟ್ಟ ತಲುಪಲಿದೆ ಸೋಂಕು"

ಮ್ಯಾಕ್ಸ್‌ ಹೆಲ್ತ್‌ ಕೇರ್‌ನ ನಿರ್ದೇಶಕ ರೋಮೆಲ್ ಟಿಕ್ಕೂ ಅವರು ಕೊರೊನಾ ಕುರಿತ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದು, ಕೊರೊನಾ ಪ್ರಕರಣಗಳು ಸ್ವಲ್ಪ ದಿನಗಳಲ್ಲೇ ಇಳಿಕೆಯಾಗಲಿವೆ ಎಂದು ಭರವಸೆ ತುಂಬಿದ್ದಾರೆ. ಮುಂದಿನ ತಿಂಗಳ ಹೊತ್ತಿಗೆ, ಅಂದರೆ ಮೇ ಮಧ್ಯದಲ್ಲಿ ಕೊರೊನಾ ಪ್ರಕರಣಗಳು ಗರಿಷ್ಠ ಮಟ್ಟವನ್ನು ತಲುಪಲಿವೆ ಎಂದು ಹೇಳಿದ್ದಾರೆ.

"ಎಷ್ಟು ವೇಗವಾಗಿ ಏರಿದೆಯೋ ಅಷ್ಟೇ ವೇಗವಾಗಿ ಇಳಿಯುತ್ತದೆ"

ಮೇ ತಿಂಗಳ ಮಧ್ಯದಲ್ಲಿ ಕೊರೊನಾ ಪ್ರಕರಣಗಳು ಗರಿಷ್ಠ ಮಟ್ಟ ತಲುಪಲಿವೆ. ಹಾಗೆ ಗರಿಷ್ಠ ಮಟ್ಟ ತಲುಪಿದ ಕೆಲವೇ ದಿನಗಳಲ್ಲಿ ಇದ್ದಕ್ಕಿದ್ದಂತೆ ಪ್ರಕರಣಗಳಲ್ಲಿ ಇಳಿಕೆ ಕಂಡುಬರುತ್ತದೆ ಎಂದು ಅಂದಾಜು ಮಾಡಿದ್ದಾರೆ. ಎಷ್ಟು ವೇಗವಾಗಿ ಪ್ರಕರಣಗಳು ಏರಿದೆಯೋ ಅಷ್ಟೇ ವೇಗವಾಗಿ ಇಳಿಯಲಿದೆ. ಆದರೆ ಅಲ್ಲಿಯವರೆಗೂ ಜನರು ಎಚ್ಚರಿಕೆಯಿಂದ ಇರಲೇಬೇಕು. ಕೊರೊನಾ ನಿಯಮಗಳನ್ನು ಪಾಲಿಸಲೇಬೇಕು ಎಂದಿದ್ದಾರೆ.

"ಅತಿಯಾದ ಆತ್ಮವಿಶ್ವಾಸ ಬೇಡ"

ಕೊರೊನಾ ಎರಡನೇ ಅಲೆಯಲ್ಲಿ ಹೆಚ್ಚೆಚ್ಚು ಯುವಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಅದರಲ್ಲಿಯೂ ಕೆಲಸಕ್ಕೆಂದು ಸಾರ್ವಜನಿಕ ಸಾರಿಗೆಯಲ್ಲಿ ತೆರಳುವವರು ಹಾಗೂ ಹೊರಗೆ ಓಡಾಡುತ್ತಿರುವವರಲ್ಲಿ ಸೋಂಕು ಬೇಗನೆ ಆವರಿಸುತ್ತದೆ. ನಮಗೆ ಏನೂ ಆಗುವುದಿಲ್ಲ ಎಂದು ಅತಿಯಾದ ಆತ್ಮವಿಶ್ವಾಸ ಇಟ್ಟುಕೊಂಡವರಿಗೆ ಸೋಂಕು ತಗುಲುತ್ತದೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.

"ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಳ್ಳಬೇಡಿ"

 ದೇಶದಲ್ಲಿ259170 ಮಂದಿಗೆ ಕೊರೊನಾ ಸೋಂಕು

ದೇಶದಲ್ಲಿ259170 ಮಂದಿಗೆ ಕೊರೊನಾ ಸೋಂಕು

ಭಾರತದಲ್ಲಿ ಮಂಗಳವಾರ 259170 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಂದೇ ದಿನ 1,761 ಮಂದಿ ಪ್ರಾಣ ಬಿಟ್ಟಿದ್ದು, 1,54,761 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
Coronavirus in country will peak in mid-May or by the end of May and then suddenly there will be a dip, one of top doctor Rommel Tickoo said,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X