• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚು; ICMR ಅಧ್ಯಯನ

By ಒನ್‌ಇಂಡಿಯಾ ಡೆಸ್ಕ್
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 17: ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿದೆ ಹಾಗೂ ಅವರಲ್ಲಿ ಮಧ್ಯಮದಿಂದ ತೀವ್ರತರ ಸೋಂಕಿನ ಪರಿಣಾಮ ಕಂಡುಬರಬಹುದು ಎಂದು ಐಸಿಎಂಆರ್ ಅಧ್ಯಯನ ತಿಳಿಸಿದ್ದು, ಗರ್ಭಿಣಿಯರಿಗೆ ವೈದ್ಯಕೀಯ ಆರೈಕೆ ಹೆಚ್ಚು ಅವಶ್ಯಕವಾಗಿರುವುದಾಗಿ ತಿಳಿಸಿದೆ.

'ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌'ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ಗರ್ಭಿಣಿಯರಲ್ಲಿ ಕೊರೊನಾ ಸೋಂಕು ತೀವ್ರತರವಾಗಿ ಪರಿಣಾಮ ಬೀರಿದರೆ ಅವಧಿಗೆ ಮುನ್ನವೇ ಹೆರಿಗೆ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳಬಹುದಾಗಿದೆ.

 ಬಿಬಿಎಂಪಿಯಿಂದ ಗರ್ಭಿಣಿ, ಬಾಣಂತಿಯರಿಗೆ ಕೊರೊನಾ ಲಸಿಕೆ ಅಭಿಯಾನ ವಿಸ್ತರಣೆ ಬಿಬಿಎಂಪಿಯಿಂದ ಗರ್ಭಿಣಿ, ಬಾಣಂತಿಯರಿಗೆ ಕೊರೊನಾ ಲಸಿಕೆ ಅಭಿಯಾನ ವಿಸ್ತರಣೆ

ರಕ್ತಹೀನತೆ, ಕ್ಷಯ ಹಾಗೂ ಮಧುಮೇಹದಂಥ ಸಮಸ್ಯೆಗಳು ಇದ್ದ ಗರ್ಭಿಣಿ ಹಾಗೂ ಪ್ರಸವಾನಂತರ ಮಹಿಳೆಯರಲ್ಲಿ ಕೊರೊನಾ ಸೋಂಕು ತೀವ್ರತರ ಸ್ವರೂಪ ಪಡೆಯಲಿದೆ ಎಂಬುದನ್ನು ಅಧ್ಯಯನ ಹೇಳಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ ಸಾಂಕ್ರಾಮಿಕದ ಮೊದಲ ಅಲೆಯಲ್ಲಿ ಕೊರೊನಾ ಸೋಂಕಿಗೆ ಒಳಗಾದ ಮಹಿಳೆಯರಲ್ಲಿ ಸೋಂಕಿನ ಗುಣಲಕ್ಷಣಗಳು ಹಾಗೂ ಗರ್ಭಧಾರಣೆಯ ಫಲಿತಾಂಶಗಳನ್ನು ಅಧ್ಯಯನ ವಿಶ್ಲೇಷಿಸಿದೆ.

ಈ ವಿಶ್ಲೇಷಣೆಯು PregCovid ರಿಜಿಸ್ಟ್ರಿ ದತ್ತಾಂಶವನ್ನು ಆಧರಿಸಿದೆ. ಗರ್ಭಿಣಿಯರು ಹಾಗೂ ಹೆರಿಗೆ ನಂತರದ ಅವಧಿಯಲ್ಲಿ ಮಹಿಳೆಯರಲ್ಲಿ ಕೊರೊನಾ ರೋಗನಿರ್ಣಯಗಳನ್ನು ವಿಶ್ಲೇಷಣೆ ಮಾಡಲಾಗಿದೆ.

ಪ್ರತಿಯೊಬ್ಬ ಗರ್ಭಿಣಿಯೂ ಕೊರೊನಾ ಲಸಿಕೆ ಪಡೆಯುವಂತೆ ಸಿಡಿಸಿ ಸೂಚನೆಪ್ರತಿಯೊಬ್ಬ ಗರ್ಭಿಣಿಯೂ ಕೊರೊನಾ ಲಸಿಕೆ ಪಡೆಯುವಂತೆ ಸಿಡಿಸಿ ಸೂಚನೆ

ಮಹಾರಾಷ್ಟ್ರದ 19 ವೈದ್ಯಕೀಯ ಕಾಲೇಜುಗಳಲ್ಲಿ ಪ್ರಯೋಗಾಲಯದಿಂದ ದೃಢಪಟ್ಟ ಗರ್ಭಿಣಿಯರಲ್ಲಿನ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲಾಗಿದೆ.

ಕೊರೊನಾ ಮೊದಲ ಅಲೆಯಲ್ಲಿ (ಮಾರ್ಚ್ 2020-ಜನವರಿ 2021)ವರೆಗೆ 4203 ಗರ್ಭಿಣಿಯರ ದತ್ತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ.

Coronavirus May Infect Pregnant Women More Says ICMR Study

'3213 ಜನನ, 77 ಗರ್ಭಪಾತಗಳು, 834 ವಿಫಲ ಗರ್ಭಧಾರಣೆಗಳು ಆಗಿರುವುದು ಪತ್ತೆಯಾಗಿದೆ. 534ರಲ್ಲಿ 13% ಮಹಿಳೆಯರು ರೋಗಲಕ್ಷಣ ಹೊಂದಿದ್ದರು. ಅದರಲ್ಲಿ 382 (72%) ಮಹಿಳೆಯರಿಗೆ ಸೌಮ್ಯ ಲಕ್ಷಣ, 112 (21%) ಮಧ್ಯಮ ಹಾಗೂ 40 (7.5%) ತೀವ್ರ ರೋಗ ಲಕ್ಷಣಗಳನ್ನು ಹೊಂದಿದ್ದರು.

ಇವರಲ್ಲಿ ಅತ್ಯಂತ ಸಾಮಾನ್ಯವಾದ ಸಮಸ್ಯೆ ಎಂದರೆ ಅವಧಿಗೆ ಮುನ್ನ ಹೆರಿಗೆ (528- 16.3%) ಹಾಗೂ ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ (328- 10.1%). ಒಟ್ಟು 158 (3.8%) ಗರ್ಭಿಣಿ ಹಾಗೂ ಪ್ರಸವಾನಂತರದ ಮಹಿಳೆಯರಿಗೆ ತೀವ್ರ ನಿಗಾ ಅಗತ್ಯ ಕಂಡುಬಂದಿದ್ದು, ಇದರಲ್ಲಿ 152 (96%) ಮಹಿಳೆಯರಲ್ಲಿ ಕೊರೊನಾ ಸೋಂಕು ಕಾರಣವಾಗಿದ್ದಾಗಿ ಅಧ್ಯಯನ ತಿಳಿಸಿದೆ.

ಒಟ್ಟಾರೆ ಪ್ರಕರಣದಲ್ಲಿ ಗರ್ಭಿಣಿಯರಲ್ಲಿ ಮರಣ ಪ್ರಮಾಣ (CFR) 0.8% ಇರುವುದಾಗಿ ತಿಳಿದುಬಂದಿದೆ. ಹೀಗಾಗಿ ನಮ್ಮ ವಿಶ್ಲೇಷಣೆಯು ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ ಹಾಗೂ ಮಧ್ಯಮದಿಂದ ತೀವ್ರತರ ಸೋಂಕು ಕಂಡುಬರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಗರ್ಭಿಣಿಯರಿಗೆ ಹೆಚ್ಚಿನ ವೈದ್ಯಕೀಯ ನೆರವು ನೀಡಲು ಆರೋಗ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗಿ ಅಧ್ಯಯನ ಸೂಚಿಸಿದೆ.

ಗರ್ಭಿಣಿಯರಿಗೆ ಸೋಂಕು ತಗುಲುವ ಅಪಾಯದ ಹಿನ್ನೆಲೆಯಲ್ಲಿ ಅವರಿಗೆ ಕೊರೊನಾ ಲಸಿಕೆಯನ್ನು ಆದ್ಯತೆಯಲ್ಲಿ ನೀಡಲಾಗುತ್ತಿದೆ. ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ಕಡ್ಡಾಯವಾಗಿ ಲಸಿಕೆ ತೆಗೆದುಕೊಳ್ಳಲು ಸೂಚಿಸಲಾಗಿದೆ.

ಪ್ರತಿಯೊಬ್ಬ ಗರ್ಭಿಣಿಯೂ ಕಡ್ಡಾಯವಾಗಿ ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ದಿ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಬೋರ್ಡ್ (ಸಿಡಿಸಿ) ಸೂಚನೆ ನೀಡಿದೆ.

''ಗರ್ಭಿಣಿಯರು ಲಸಿಕೆ ಪಡೆದುಕೊಂಡರೆ, ಸೋಂಕು ತಗುಲಿದರೂ ಅದರ ತೀವ್ರತೆ ಕಡಿಮೆಯಿರುತ್ತದೆ. ಅಲ್ಲದೆ, ಹೆರಿಗೆ ಮತ್ತು ಅಕಾಲಿಕ ಹೆರಿಗೆಗಳ ಅಪಾಯ ಕಡಿಮೆ ಇರುತ್ತದೆ. ಸೋಂಕು ಹರಡುವ ಪ್ರಮಾಣ ಕೂಡ ಕಡಿಮೆ ಇರುತ್ತದೆ'' ಎಂದು ವೈದ್ಯರು ಹೇಳಿದ್ದಾರೆ. ಇತರಂತೆಯೇ ಎಲ್ಲಾ ಗರ್ಭಿಣಿಯರಿಗೂ ಕೋವಿಡ್ ಲಸಿಕೆಗಳನ್ನು ನೀಡಬೇಕು ಎಂದು ತಿಳಿಸಿದ್ದಾರೆ.

ಸಿಡಿಸಿ ಮಾಹಿತಿ ಪ್ರಕಾರ ಕೇವಲ ಶೇ.23ರಷ್ಟು ಗರ್ಭಿಣಿಯರು ಮಾತ್ರ ಲಸಿಕೆ ಪಡೆದಿದ್ದಾರೆ. ''ಲಸಿಕೆಗಳು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ, ಡೆಲ್ಟಾ ವೇಗವಾಗಿ ಹರಡುತ್ತಿರುವ ಕಾರಣ ಗರ್ಭಿಣಿಯರಿಗೂ ಸೋಂಕು ತಗುಲಬಹುದು'' ಎಂದು ಸಿಡಿಸಿ ನಿರ್ದೇಶಕ ಡಾ. ರೋಚಲ್ಲೆ ತಿಳಿಸಿದ್ದಾರೆ.

{document1}

English summary
Coronavirus may infect a higher proportion of pregnant women and they can develop moderate-to-severe diseases, an ICMR study has said,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X