ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲ್ಡೀವ್ಸ್‌ನಲ್ಲಿ ಸಿಲುಕಿರುವ 200 ಮಂದಿ ಭಾರತೀಯರನ್ನು ಕರೆತರಲು ಸಿದ್ಧತೆ

|
Google Oneindia Kannada News

ನವದೆಹಲಿ, ಮೇ 4: ಮಾಲ್ಡೀವ್ಸ್‌ನಲ್ಲಿ ಸಿಲುಕಿರುವ 200 ಮಂದಿ ಭಾರತೀಯರನ್ನು ಕರೆತರಲು ಭಾರತ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಇಡೀ ವಿಶ್ವವೇ ಕೊರೊನಾ ವೈರಸ್‌ನಿಂದ ಬಳಲುತ್ತಿದೆ. ಹಡಗಿನ ಮೂಲಕ ಕರೆ ತರುವ ಸಾಧ್ಯತೆ ಇದೆ ಎನ್ನುವ ಮಾಹಿತ ಲಭ್ಯವಾಗಿದೆ.

ರಾಯಭಾರಿ ಕಚೇರಿಯಲ್ಲಿ ನೋಂದಣಿ ಮಾಡಿರುವವರಲ್ಲಿ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವವರು, ಗರ್ಭಿಣಿಯರು, ಹಿರಿಯ ನಾಗರಿಕರು, ಪ್ರವಾಸಿಗರು ಮತ್ತು ಕೆಲಸ ಕಳೆದುಕೊಂಡಿರುವ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಒಂದೇ ದಿನ 2,333 ಮಂದಿಗೆ ಕೊರೊನಾ ಸೋಂಕುದೇಶದಲ್ಲಿ ಒಂದೇ ದಿನ 2,333 ಮಂದಿಗೆ ಕೊರೊನಾ ಸೋಂಕು

ಮಾಲ್ಡೀವ್ಸ್‌ನಲ್ಲಿ ಸುಮಾರು 2 ಸಾವಿರ ಮಂದಿ ಭಾರತೀಯರು ಸಿಲುಕಿದ್ದು, ಹಣ, ಆಹಾರ, ವಸತಿ ಕೊರತೆಯಿಂದ ಸಂಕಷ್ಟದಲ್ಲಿದ್ದಾರೆ. ಜನಸಾಂದ್ರತೆಯಿಂದಾಗಿ ವೈರಸ್ ವೇಗವಾಗಿ ಹ್ಬಬುತ್ತಿದೆ. ಆದಷ್ಟು ಬೇಗ ಕ್ರಮ ಕೈಗೊಳ್ಳಿ ಎಂದು ದಿಲೀಪ್ ಕುಮಾರ್ ಎಂಬುವವರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಟ್ವೀಟ್ ಮಾಡಿದ್ದರು.

ಮಾಲ್ಡೀವ್ಸ್‌ನಿಂದ ಕೇರಳಕ್ಕೆ ಬರಲಿದ್ದಾರೆ

ಮಾಲ್ಡೀವ್ಸ್‌ನಿಂದ ಕೇರಳಕ್ಕೆ ಬರಲಿದ್ದಾರೆ

ಮಾಲ್ಡೀವ್ಸ್‌ನಿಂದ ಹಡಗು ಕೇರಳದ ಕೊಚ್ಚಿಗೆ ಬಂದು ತಗುಪಲಿದೆ. ಅಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದು ಆಮೇಲೆ ಕೇರಳ ಮತ್ತು ಕೇಂದ್ರ ಸರ್ಕಾರದ ಅನುಮತಿ ಪಡೆದು ಪ್ರಯಾಣಿಕರು ಅಲ್ಲಿಂದ ತಮ್ಮ ಊರುಗಳಿಗೆ ತೆರಳಬಹುದಾಗಿದೆ.

ಮಲೇಷ್ಯಾದಲ್ಲೂ ಹಲವು ಭಾರತೀಯರು ಸಿಲುಕಿಕೊಂಡಿದ್ದಾರೆ

ಮಲೇಷ್ಯಾದಲ್ಲೂ ಹಲವು ಭಾರತೀಯರು ಸಿಲುಕಿಕೊಂಡಿದ್ದಾರೆ

ಮಲೇಷ್ಯಾ ಹಾಗೂ ಬೇರೆ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಭಾರತ ಚಿಂತನೆ ನಡೆಸುತ್ತಿದೆ. ಕಳೆದ ಹಲವು ದಿನಗಳಿಂದ ಹೊರದೇಶದಲ್ಲಿರುವ ಭಾರತೀಯರನ್ನು ಭಾರತಕ್ಕೆ ಕರೆತರುವ ಕಾರ್ಯಗಳು ನಡೆದಿರಲಿಲ್ಲ.

ಮೊದಲ ಹಡಗಿನಲ್ಲಿ 200 ಮಂದಿ ಪ್ರಯಾಣ

ಮೊದಲ ಹಡಗಿನಲ್ಲಿ 200 ಮಂದಿ ಪ್ರಯಾಣ

ಮೊದಲ ಹಡಗಿನಲ್ಲಿ 200 ಮಂದಿಯನ್ನು ಕರೆತರಲಾಗುವುದು, ಆದರೆ ಯಾವಾಗ ಎಂಬುದರ ಕುರಿತು ಇನ್ನೂ ನಿರ್ಧಾರವಾಗಿಲ್ಲ ಎಂದು ತಿಳಿಸಿದ್ದಾರೆ.

ಮಾಲೆಯಿಂದ ಕೊಚ್ಚಿಗೆ ತಲುಪಲು 48 ಗಂಟೆ ಬೇಕು

ಮಾಲೆಯಿಂದ ಕೊಚ್ಚಿಗೆ ತಲುಪಲು 48 ಗಂಟೆ ಬೇಕು

ಮಾಲೆನಿಂದ ಕೊಚ್ಚಿಗೆ ತಲುಪಲು 48 ಗಂಟೆಗಳ ಹಡಗಿನಲ್ಲಿ ಪ್ರಯಾಣಿಸಬೇಕು. ಮುಂಗಾರು ಮುಂಚಿನ ಹವಾಮಾನದಲ್ಲಿ ಪ್ರಯಾಣ ಮಾಡುವುದು ಕಷ್ಟವಾಗಲಿದೆ. ಹಡಗಿನಲ್ಲಿ ಅಗತ್ಯ ವೈದ್ಯಕೀಯ ಸಹಾಯಗಳನ್ನು ಒದಗಿಸಲಾಗುತ್ತದೆ. ಅದೇ ವೇಳೆ ಕೊಚ್ಚಿಯಲ್ಲಿ ಕ್ವಾರಂಟೈನ್‌ನಲ್ಲಿರಿಸುವಾಗಲೂ ಸಮಾನ್ಯ ಸೌಕರ್ಯಗಳನ್ನು ಅವರಿಗೆ ನೀಡಲಾಗುತ್ತದೆ, ಅದಕ್ಕೆ ಹಣ ಪಾವತಿಮಾಡಬೇಕಿದೆ.

English summary
India is likely to evacuate 200 of its nationals stranded in Maldives due to lockdown to contain COVID-19 by a ship within a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X