ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ನ ಏಕತಾನತೆ: ನಾಯಿಗಳಲ್ಲೂ ಸೃಷ್ಟಿಸಿತು ಖಿನ್ನತೆ

|
Google Oneindia Kannada News

ನವದೆಹಲಿ, ಏಪ್ರಿಲ್ 7: ಕೊರೊನಾ ಸೃಷ್ಟಿಸಿದ ಲಾಕ್ ಡೌನ್ ಸನ್ನಿವೇಶ ಮನುಷ್ಯರ ಮೇಲಷ್ಟೇ ಅಲ್ಲ ಪ್ರಾಣಿಗಳ ಮೇಲೂ ಪ್ರಭಾವ ಬೀರಿದೆ. ಕೆಲವು ಪ್ರಾಣಿಗಳಿಗೆ ಲಾಕ್ ಡೌನ್ ಸ್ವಚ್ಛಂದ ಬದುಕು ಕಲ್ಪಿಸಿದರೆ, ಮತ್ತೆ ಕೆಲವು ಪ್ರಾಣಿಗಳ ಜೀವನ ಶೈಲಿಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದಕ್ಕೆ ಬೀದಿ ನಾಯಿಗಳೇ ಉತ್ತಮ ಉದಾಹರಣೆ.

ಮನುಷ್ಯರು ಹಾಕುವ ಆಹಾರವನ್ನೇ ನಂಬಿಕೊಂಡು ಬದುಕುತ್ತಿದ್ದ ಬೀದಿ ನಾಯಿಗಳನ್ನ ಈ ಲಾಕ್ ಡೌನ್ ಅವಧಿ ಅಕ್ಷರಶಃ ಕಂಗೆಡಿಸಿದೆ. ರಸ್ತೆಯಲ್ಲಿ ಮನುಷ್ಯರನ್ನು ಕಾಣದೆ, ಬೀದಿಬದಿ ಅಂಗಡಿಗಳು ತೆರೆಯದೆ, ಬೇಕರಿ, ಮಾಂಸದಂಗಡಿಗಳಿಲ್ಲದೆ ಬೀದಿ ನಾಯಿಗಳು ಹಸಿವಿನಿಂದ ಒದ್ದಾಡುತ್ತಿವೆ.

ಪ್ಲೀಸ್ ಒಮ್ಮೆ ನನ್ನ ಪತ್ರ ಓದ್ತೀರಾ - ನಿಮ್ಮ ಜಿಮ್ಮಿಪ್ಲೀಸ್ ಒಮ್ಮೆ ನನ್ನ ಪತ್ರ ಓದ್ತೀರಾ - ನಿಮ್ಮ ಜಿಮ್ಮಿ

ಪ್ರಾಣಿ ತಜ್ಞರ ಪ್ರಕಾರ, ಜಗತ್ತಿನ ಏನಾಗುತ್ತಿದೆ ಎಂಬ ಅರಿವೇ ಇಲ್ಲದೆ, ತುತ್ತು ಊಟಕ್ಕಾಗಿ ಬೀದಿ ಬೀದಿ ಅಲೆಯುತ್ತಿದ್ದ ಬೀದಿ ನಾಯಿಗಳಲ್ಲಿ ಖಿನ್ನತೆ, ಆಕ್ರಮಣಶೀಲತೆ, ಅಂಜುಬುರುಕುತನದಂತಹ ಕೆಲವು ಬದಲಾವಣೆಗಳನ್ನು ಸೃಷ್ಟಿಸಿದೆ.

ಆಹಾರಕ್ಕಾಗಿ ಜಿದ್ದಾಜಿದ್ದಿಗೆ ಬೀಳಬಹುದು!

ಆಹಾರಕ್ಕಾಗಿ ಜಿದ್ದಾಜಿದ್ದಿಗೆ ಬೀಳಬಹುದು!

''ಎಲ್ಲಾ ಬೀದಿ ನಾಯಿಗಳ ವರ್ತನೆಯಲ್ಲೂ ಇಂತಹ ಬದಲಾವಣೆ ಆಗಿದೆ ಅಂತ ಹೇಳಲು ಸಾಧ್ಯವಿಲ್ಲ. ಆದರೆ ಜನರು ರಸ್ತೆಯಲ್ಲಿ ಓಡಾಡುತ್ತಿಲ್ಲ. ಆಹಾರಕ್ಕೆ ಅಭಾವ ಎದುರಾಗಿರುವ ಕಾರಣ ಕೆಲವು ನಾಯಿಗಳು ಆಹಾರಕ್ಕಾಗಿ ಜಿದ್ದಾಜಿದ್ದಿಗೆ ಬೀಳಬಹುದು'' ಎನ್ನುತ್ಥಾರೆ ಪಾವ್ ಟ್ರಿಕ್ಸ್ ಸಂಸ್ಥಾಪಕಿ ಆಕಾಂಕ್ಷಾ ಯಾದವ್.

ನಾಯಿಗಳಲ್ಲಿ ಹತಾಶೆ

ನಾಯಿಗಳಲ್ಲಿ ಹತಾಶೆ

ನಾಯಿಗಳಿಗಿದು ಸಂಕಷ್ಟದ ಸಮಯ. ಈ ಹಿಂದಿನಂತೆ ನಾಯಿಗಳಿಗೆ ಆಹಾರ ಒದಗಿಸುತ್ತಿದ್ದ ಮಾರುಕಟ್ಟೆ, ಹೋಟೆಲ್ ಗಳು ಸೇರಿದಂತೆ ಇತರೆ ಪ್ರದೇಶಗಳಲ್ಲಿ ಈಗ ಸುಲಭವಾಗಿ ಆಹಾರ ಲಭ್ಯವಾಗುತ್ತಿಲ್ಲ. ಇದು ನಾಯಿಗಳಲ್ಲಿ ಹತಾಶೆಯನ್ನು ಹುಟ್ಟುಹಾಕಿದೆ.

ನಾಯಿಗಳಲ್ಲಿ ಖಿನ್ನತೆ

ನಾಯಿಗಳಲ್ಲಿ ಖಿನ್ನತೆ

ಸದಾ ಮನುಷ್ಯರು ಮತ್ತು ವಾಹನಗಳಿಂದ ಗಿಜಿಗುಡುತ್ತಿದ್ದ ರಸ್ತೆಗಳಲಿದ್ದ ನಾಯಿಗಳನ್ನ ಈಗ ಬಿಕೋ ಎನ್ನುವ ರಸ್ತೆಗಳು ತಬ್ಬಿಬ್ಬಾಗಿಸಿವೆ. ಮನುಷ್ಯರ ಸಹವರ್ತಿಕೆಯನ್ನು ಕಳೆದುಕೊಂಡಿರುವ ನಾಯಿಗಳು ಈಗ ಖಿನ್ನತೆಗೆ ದೂಡಲ್ಪಟ್ಟಿವೆ.

ಆಕ್ರಮಣಕಾರಿ ಮನಸ್ಸು

ಆಕ್ರಮಣಕಾರಿ ಮನಸ್ಸು

ಆಹಾರ ದೊರಕಿಸಿಕೊಳ್ಳಲು ಕೆಲ ನಾಯಿಗಳು ಸಿಕ್ಕವರ ಮೇಲೆ ಆಕ್ರಮಣಕ್ಕೆ ಮುಂದಾಗುವ ಮನಸ್ಥಿತಿ ಪ್ರದರ್ಶಿಸಬಹುದು ಎಂದು ಛತ್ತರ್ ಪುರ್ ನಲ್ಲಿ ಡಾಗ್ ಟ್ರೇನಿಂಗ್ ಸ್ಕೂಲ್ ಹೊಂದಿರುವ ಅದ್ನಾನ್ ಖಾನ್ ಹೇಳುತ್ತಾರೆ. ಆದ್ರೆ, ಕೆಲ ಹಳ್ಳಿಗಾಡುಗಳಲ್ಲಿ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿ ಇವೆ. ಸದಾ ಮನುಷ್ಯರಿಂದ ಹಿಂಸೆಗೊಳಗಾಗುತ್ತಿದ್ದ ಬೀದಿ ನಾಯಿಗಳು ಲಾಕ್ ಡೌನ್ ನಿಂದಾಗಿ ಸ್ವತಂತ್ರವಾಗಿ, ಖುಷಿಖುಷಿಯಾಗಿ ಓಡಾಡುವಂತಾಗಿದೆ.

English summary
Coronavirus Lockdown has lead to subtle behavioural changes in Stray Dogs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X