ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಭಾರತೀಯರಿಗೆ 2 ತಿಂಗಳಿನಲ್ಲೇ ದೇಶೀಯ ಕೊವಿಡ್-19 ಲಸಿಕೆ"

|
Google Oneindia Kannada News

ನವದೆಹಲಿ, ನವೆಂಬರ್.23: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಕುರಿತು ನಡೆಸಿರುವ ವೈದ್ಯಕೀಯ ಸಂಶೋಧನಾ ಕಾರ್ಯವು ಒಂದು ಅಥವಾ ಎರಡು ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.

ನವೆಂಬರ್ ತಿಂಗಳಿನಲ್ಲೇ ಭಾರತ್ ಬಯೋಟೆಕ್ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯು ಜಂಟಿಯಾಗಿ ಮೂರನೇ ಹಂತದ ವೈದ್ಯಕೀಯ ಪ್ರಯೋಗವನ್ನು ಪ್ರಾರಂಭಿಸಲಿವೆ. ಕೊವ್ಯಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗದಲ್ಲಿ ಈ ಬಾರಿ 26000 ಸ್ವಯಂಸೇವಕರನ್ನು ಪ್ರಯೋಗಿಸಲಾಗುತ್ತದೆ ಎಂದು ಹೇಳಿದ್ದಾರೆ.

Covid-19 Vaccine: ತುರ್ತು ಸಂದರ್ಭದಲ್ಲಿ ಆಸ್ಟ್ರಾಜೆನಿಕಾ ಲಸಿಕೆ ಬಳಸಲು ಅನುಮತಿCovid-19 Vaccine: ತುರ್ತು ಸಂದರ್ಭದಲ್ಲಿ ಆಸ್ಟ್ರಾಜೆನಿಕಾ ಲಸಿಕೆ ಬಳಸಲು ಅನುಮತಿ

ಭಾರತದಲ್ಲಿ ಕೊವಿಡ್-19 ಸೋಂಕಿಗೆ ಸ್ಥಳೀಯ ಲಸಿಕೆಯನ್ನು ಸಂಶೋಧಿಸುವಲ್ಲಿ ನಿರತರಾಗಿದ್ದೇವೆ. ಇನ್ನೊಂದು ತಿಂಗಳು ಅಥವಾ ಎರಡು ತಿಂಗಳಿನಲ್ಲಿ ದೇಶೀಯ ಕೊರೊನಾವೈರಸ್ ಲಸಿಕೆಯ ವೈದ್ಯಕೀಯ ಪ್ರಯೋಗ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.

Coronavirus: Local Vaccine Final Trials Could End Within Two Months, Says Harsh Vardhan

20 ರಿಂದ 25 ಕೋಟಿ ಜನರಿಗೆ ಲಸಿಕೆ:

ಭಾರತದಲ್ಲಿ ಮುಂದಿನ 2021ರ ಜುಲೈ ತಿಂಗಳ ವೇಳೆಗೆ 20 ರಿಂದ 25 ಕೋಟಿ ಭಾರತೀಯರಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. ಕಳೆದ ಸಪ್ಟೆಂಬರ್ ನಲ್ಲಿ ಇದೇ ಕೊವಿಡ್-19 ಲಸಿಕೆ ಬಗ್ಗೆ ಮಾತನಾಡಿದ್ದ ಸಚಿವರು ಆರಂಭಿಕ ಹಂತದಲ್ಲಿ ವೃದ್ಧರು ಮತ್ತು ಕೊರೊನಾವೈರಸ್ ನಿಂದ ಹೆಚ್ಚು ಅಪಾಯವಿರುವ ವಲಯಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಹೇಳಿದ್ದರು.

ಮಾರ್ಚ್ ವೇಳೆಗೆ ಲಸಿಕೆಗೆ ಚಾಲನೆ:

ಕಳೆದ ಶುಕ್ರವಾರ ರಾಯಟರ್ಸ್ ಜೊತೆಗೆ ಮಾತನಾಡಿದ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಸಂಶೋಧಕರು ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಲಸಿಕೆ ವಿತರಣೆಗೆ ಚಾಲನೆ ಸಿಗಲಿದೆ ಎಂದು ಮಾಹಿತಿ ನೀಡಿದ್ದರು. ಇನ್ನು, ಭಾರತ್ ಬಯೋಟೆಕ್ ಸಂಸ್ಥೆಯು ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಲಸಿಕೆ ವಿತರಣೆ ಆರಂಭಿಸುವುದಾಗಿ ಹೇಳಿತ್ತು.

Recommended Video

Covid Vaccine ಹಂಚುವಿಕೆ ಬಗ್ಗೆ ಮುಖ್ಯಮಂತ್ರಿಗಳ ಸಭೆ ಕರೆದ Modi | Oneindia Kannada

English summary
Coronavirus: Local Vaccine Final Trials Could End Within Two Months, Says Harsh Vardhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X