ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 19: ಯಾವ ರಾಜ್ಯಗಳಲ್ಲಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

|
Google Oneindia Kannada News

ನವದೆಹಲಿ, ಮಾರ್ಚ್ 29: ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಿಗೆ ತೆರಳುವವರು ಕಡ್ಡಾಯವಾಗಿ ಆರ್‌ಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು ಎಂದು ಹೇಳಲಾಗಿದೆ.

ಗುಜರಾತ್: ಕಳೆದ ಕೆಲವು ದಿನಗಳಿಂದ ಗುಜರಾತ್‌ನಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಯಾವುದೇ ರಾಜ್ಯಗಳಿಂದ ಗುಜರಾತ್‌ಗೆ ಆಗಮಿಸುವ ಪ್ರಯಾಣಿಕರು ಕೊರೊನಾ ನೆಗೆಟಿವ್ ವರದಿ ಕಡ್ಡಾಯವಾಗಿ ಹೊಂದಿರಬೇಕು ಎಂದು ಆದೇಶ ಹೊರಡಿಸಲಾಗಿದೆ. ಇದು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 40,414 ಕೋವಿಡ್-19 ಪ್ರಕರಣಗಳು ಪತ್ತೆಮಹಾರಾಷ್ಟ್ರದಲ್ಲಿ ಒಂದೇ ದಿನ 40,414 ಕೋವಿಡ್-19 ಪ್ರಕರಣಗಳು ಪತ್ತೆ

ರಾಜಸ್ಥಾನ: ಪಂಜಾಬ್, ಹರ್ಯಾಣ, ಮಧ್ಯಪ್ರದೇಶ, ಗುಜರಾತ್‌ನಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕೊರೊನಾ ನೆಗೆಟಿವ್ ವರದಿ ಹೊಂದಿರಲೇಬೇಕು.

Coronavirus: List Of State That Have Made Negative RT-PCR Test Mandatory

ಒಡಿಶಾ: ಮಹಾರಾಷ್ಟ್ರ, ಕೇರಳ, ಪಂಜಾಬ್, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಿಂದ ಬರುವ ಪ್ರಯಾಣಿಕರುಒಂದು ವಾರಗಳ ಕಾಲ ಗೃಹಬಂಧನದಲ್ಲಿರಬೇಕು. ಹಾಗೆಯೇ 12 ರಾಜ್ಯಗಳಿಂದ ಆಗಮಿಸುವವರ ಮೇಲೆ ತೀವ್ರ ನಿಗಾ ಇರಿಸಲಾಗುತ್ತದೆ.

ತ್ರಿಪುರ: ತ್ರಿಪುರಕ್ಕೆ ಬರುವವರು ಅಗರ್ತಲಾ ಏರ್‌ಪೋರ್ಟ್‌ನಲ್ಲಿ ಕೋವಿಡ್ 19 ಪರೀಕ್ಷೆ ಮಾಡಿಸಿಕೊಳ್ಳಬೇಕು.

ಮಹಾರಾಷ್ಟ್ರ: ಗುಜರಾತ್, ದೆಹಲಿ-ಎನ್‌ಸಿಆರ್, ಗೋವಾ, ರಾಜಸ್ಥಾನ ಹಾಗೂ ಕೇರಳದಿಂದ ಮಹಾರಾಷ್ಟ್ರಕ್ಕೆ ಪ್ರಯಾಣಿಸುವವರು 72 ಗಂಟೆಗಳ ಮೊದಲು ಪಡೆದಿರುವ ಕೊರೊನಾ ನೆಗೆಟಿವ್ ವರದಿ ಹೊಂದಿರಬೇಕು.

ಕರ್ನಾಟಕ: ಮಹಾರಾಷ್ಟ್ರ ಹಾಗೂ ಕೇರಳದಿಂದ ಆಗಮಿಸುವವರು 72 ಗಂಟೆಗಳ ಮೊದಲು ಪಡೆದ ಕೊರೊನಾ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ.

ಉತ್ತರಾಖಂಡ್: ಎಲ್ಲಾ ಪ್ರಯಾಣಿಕರಿಗೂ ಕೊರೊನಾ ಪರೀಕ್ಷೆ ಕಡ್ಡಾಯ, ಒಂದೊಮ್ಮೆ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ನೆಗೆಟಿವ್ ಇದ್ದರೂ ಕೂಡ ಗೃಹ ಬಂಧನದಲ್ಲಿರಸಲಾಗುತ್ತದೆ.

ಮಣಿಪುರ: ಮಹಾರಾಷ್ಟ್ರ ಹಾಗೂ ಕೇರಳದಿಂದ ಮಣಿಪುರಕ್ಕೆ ಬರುವವರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಬೇಕು.

ಅಸ್ಸಾಂ: ಅಸ್ಸಾಂಗೆ ಬರುವ ಪ್ರಯೊಬ್ಬ ಪ್ರಯಾಣಿಕರೂ ಕೊರೊನಾ ನೆಗೆಟಿವ್ ವರದಿ ಹೊಂದಿರಬೇಕು, ಒಂದೊಮ್ಮೆ ಪಾಸಿಟಿವ್ ಕಂಡುಬಂದರೆ ಅವರನ್ನು ಕೊರೊನಾ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕಳುಹಿಸಲಾಗುತ್ತದೆ.

ಛತ್ತೀಸ್‌ಗಢ:ಮಹಾರಾಷ್ಟ್ರ, ದೆಹಲಿ, ಮಧ್ಯಪ್ರದೇಶದಿಂದ ಬರುವ ಪ್ರಯಾಣಿಕರ ಪರೀಕ್ಷೆಯನ್ನು ಮಾಡಲಾಗುತ್ತದೆ. ರಾಯ್‌ಪುರ್, ಜಗ್ದಲ್‌ಪುರ್ ಏರ್‌ಪೋರ್ಟ್‌ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಜಮ್ಮು ಮತ್ತು ಕಾಶ್ಮೀರ: ಎಲ್ಲಾ ರಾಜ್ಯಗಳಿಂದ ಬರುವ ಪ್ರಯಾಣಿಕರು ಆರ್‌ಟಿಪಿಸಿಆರ್ ನೆಗೆಟಿವ್ ವರದಿ ನೀಡಬೇಕು.

ಅಂಡಮಾನ್ ಮತ್ತು ನಿಕೋಬಾರ್: ಐಸಿಎಂಆರ್ ಒಪ್ಪಿಗೆ ನೀಡಿರುವ ಲ್ಯಾಬ್‌ಗಳಿಂದಲೇ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಪಡೆದಿರಬೇಕು. ಪ್ರಯಾಣ ಮಾಡುವ 42 ತಾಸುಗಳ ಮುನ್ನ ವರದಿ ಪಡೆದಿರಬೇಕು.

ಬಿಹಾರ: ಪ್ರಯಾಣಿಕರು ಆರ್‌ಟಿ ಪಿಸಿಆರ್ ನೆಗೆಟಿವ್ ವರದಿ ತೆಗೆದುಕೊಂಡು ಬರುವುದು ಬೇಡ, ಆದರೆ ತಲುಪಿದ ಮೇಲೆ ಕೊರೊನಾ ಪರೀಕ್ಷೆ ಮಾಡುವುದು ಕಡ್ಡಾಯವಾಗಿರುತ್ತದೆ.

ಪಶ್ಚಿಮ ಬಂಗಾಳ: ಒಂದೊಮ್ಮೆ ಪ್ರಯಾಣಿಕರಲ್ಲಿ ಕೊರೊನಾ ಲಕ್ಷಣಗಳಿದ್ದರೆ ಹತ್ತಿರದ ಕೋವಿಡ್ 19 ಆಸ್ಪತ್ರೆಗೆ ಕಳುಹಿಸಲಾಗುತ್ತದೆ.

ತಮಿಳುನಾಡು: ಯಾವುದೇ ರಾಜ್ಯದಿಂದ ಬರುವ ಪ್ರಯಾಣಿಕರು ಕೊರೊನಾ ನೆಗೆಟಿವ್ ವರದಿಯನ್ನು ಹೊಂದುವುದು ಕಡ್ಡಾಯವಾಗಿದೆ. ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವವರನ್ನು ಒಂದು ವಾರಗಳ ಕಾಲ ಕ್ವಾರಂಟೈನ್‌ನಲ್ಲಿರಿಸಲಾಗುತ್ತದೆ.

Recommended Video

ಇಂದಿರಾ ಗಾಂಧಿ ಸರ್ಕಾರ ಇಂತಹ ಕೆಲ್ಸಾ ಮಾಡ್ತಿರ್ಲಿಲ್ಲ ! DkS | Oneindia Kannada

English summary
In the wake of increasing COVID-19 cases in the country, several states have made it mandatory for visitors to produce Covid-19 test if they are coming from coronavirus disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X