ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೋನಾ ವೈರಸ್‌ಗೆ 106 ಬಲಿ, ಹೈದರಾಬಾದ್‌ನಲ್ಲಿ ನಾಲ್ಕು ಶಂಕಿತ ಪ್ರಕರಣ

|
Google Oneindia Kannada News

ಚೀನಾ ಮೂಲಕ ವಿಶ್ವವ್ಯಾಪಿಯಾಗುತ್ತಿರುವ ಅತ್ಯಂತ ಅಪಾಯಕಾರಿ ಕೊರೋನಾ ವೈರಸ್‌ನಿಂದಾಗಿ ಚೀನಾ ಒಂದರಲ್ಲೇ ಈ ವರೆಗೆ 106 ಮಂದಿ ಸಾವನ್ನಪ್ಪಿದ್ದಾರೆ.

ಮಾರಣಾಂತಿಕ ಕೊರೋನಾ ವೈರಸ್ ಚೀನಾ ತುಂಬೆಂಲ್ಲ ಹರಡಿದ್ದು, ವೈರಸ್ ಅನ್ನು ತಹಬದಿಗೆ ತರಲು ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?

ಚೀನಾದಲ್ಲಿ 2700 ಮಂದಿ ಕೊರೋನಾ ವೈರಸ್‌ನಿಂದ ಭಾದಿತರಾಗಿದ್ದಾರೆ. ಹಲವು ನಗರಗಳನ್ನು 'ಲಾಕ್ ಡೌನ್' ಮಾಡಲಾಗಿದ್ದು, ಯಾರೂ ಒಂದು ನಗರದಿಂದ ಮತ್ತೊಂದು ನಗರಕ್ಕೆ ಹೋಗದಂತೆ ಸರ್ಕಾರ ತಡೆ ಹೇರಿದೆ. ವೈರಸ್ ಹೆಚ್ಚು ಹರಡಿದರಲೆಂದು ಈ ಕ್ರಮ.

Coronavirus Kills 106 In China: Four Suspects In Hyderabad

ಕೊರೋನಾ ವೈರಸ್ ಭಾದಿತ ಪ್ರದೇಶ ಚೀನಾದ ಉಹಾನ್‌ನಲ್ಲಿ ಭಾರತದ ಸುಮಾರು 250 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಅವರನ್ನು ಭಾರತಕ್ಕೆ ಮರಳಿ ಕರೆತರುವ ಬಗ್ಗೆ ಚೀನಾದ ಅಧಿಕಾರಗಳೊಂದಿಗೆ ವಿದೇಶಾಂಗ ಇಲಾಖೆ ಅಧಿಕಾರಿಗಳು ನಿನ್ನೆ ಮಾತುಕತೆ ನಡೆಸಿದ್ದಾರೆ.

ರಾಜಸ್ಥಾನ ಹಾಗೂ ಬಿಹಾರದಲ್ಲಿ ಕೊರೊನಾ ವೈರಸ್ ಭೀತಿರಾಜಸ್ಥಾನ ಹಾಗೂ ಬಿಹಾರದಲ್ಲಿ ಕೊರೊನಾ ವೈರಸ್ ಭೀತಿ

ನೆರೆಯ ಹೈದರಾಬಾದ್‌ನಲ್ಲಿ ನಾಲ್ಕು ಮಂದಿಗೆ ಕೊರೋನಾ ವೈರಸ್ ದಾಳಿ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದ್ದು, ಶಂಕಿತ ರೋಗಿಗಳನ್ನು ತೀವ್ರ ನಿಗಾಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ವೈರಸ್ ಚಿಕಿತ್ಸೆಗಾಗಿ ಒಂದೇ ವಾರದಲ್ಲಿ ಹೊಸ ಆಸ್ಪತ್ರೆಯನ್ನೇ ನಿರ್ಮಿಸಲಿದೆ ಚೀನಾಕೊರೊನಾ ವೈರಸ್ ಚಿಕಿತ್ಸೆಗಾಗಿ ಒಂದೇ ವಾರದಲ್ಲಿ ಹೊಸ ಆಸ್ಪತ್ರೆಯನ್ನೇ ನಿರ್ಮಿಸಲಿದೆ ಚೀನಾ

ಈ ನಾಲ್ವರೂ ಸಹ ಚೀನಾದಿಂದ ವಾಪಸ್ಸಾದವರಾಗಿದ್ದಾರೆ. ನಾಲ್ವರನ್ನೂ ವಿಶೇಷ ನಿಗಾಘಟಕದಲ್ಲಿಟ್ಟು ತಪಾಸಣೆ ನಡೆಸಲಾಗುತ್ತಿದೆ. ಈ ನಾಲ್ವರೂ ಸಹಹ ಪ್ರವಾಸಿಗರಾಗಿದ್ದರು, ಚೀನಾಕ್ಕೆ ಇತ್ತೀಚೆಗಷ್ಟೆ ಭೇಟಿ ನೀಡಿದ್ದರು.

English summary
Coronavirus spreading in China 106 people killed in China till now. In Hyderabad also four people suspected and kept under watch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X