ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರನಾ ವೈರಸ್ ಔಷಧಿ ತಯಾರಿಕೆಯಲ್ಲಿ ಭಾರತಕ್ಕೆ 5ನೇ ಸ್ಥಾನ

|
Google Oneindia Kannada News

ನವದೆಹಲಿ, ಮಾರ್ಚ್.13: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಸೋಂಕಿಗೆ ಇದುವರೆಗೂ ಯಾವುದೇ ಔಷಧಿಯನ್ನು ಕಂಡು ಹಿಡಿದಿಲ್ಲ. ಮಾರಕ ರೋಗಕ್ಕೆ ಲಸಿಕೆ ಕಂಡು ಹಿಡಿಯಬೇಕಾದಲ್ಲಿ ಕನಿಷ್ಠ 18 ತಿಂಗಳಾದರೂ ಬೇಕಾಗುತ್ತದೆ ಎಂದು ಸ್ವತಃ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯೇ ತಿಳಿಸಿದೆ.
ಕೊರೊನಾ ವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯಲು ಹಲವು ರಾಷ್ಟ್ರಗಳ ವಿಜ್ಞಾನಿಗಳು ವೈದ್ಯಕೀಯ ತಜ್ಞರು ಶ್ರಮಿಸುತ್ತಿದ್ದಾರೆ. ಲ್ಯಾಬೋರೇಟರಿಗಳಲ್ಲಿ ಕೊರೊನಾ ರೋಗದ ಸೂಕ್ಷ್ಮಾಣುಗಳನ್ನು ಬೇರ್ಪಡಿಸಿ ಅದಕ್ಕೆ ಔಷಧಿಗಳನ್ನು ಸಂಶೋಧಿಸುವ ಕೆಲಸ ನಡೆಯುತ್ತಿದೆ.

ಭಾರತದ ಪುಣೆಯಲ್ಲಿ ಇರುವ ಸೂಕ್ಷ್ಮ ರೋಗಾಣುಗಳ ಅಧ್ಯಯನ ಕೇಂದ್ರದಲ್ಲಿ ವಿಜ್ಞಾನಿಗಳು ಕೊರೊನಾ ವೈರಸ್ ನ್ನು ಪ್ರತ್ಯೇಕಿಸುತ್ತಿದ್ದು, ಲಸಿಕೆ ಕಂಡು ಹಿಡಿಯಲು ಶ್ರಮಿಸುತ್ತಿದ್ದಾರೆ. ಈ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಐದನೇ ಸ್ಥಾನದಲ್ಲಿದೆ ಎಂದು ವರದಿಯಾಗಿದೆ.

ಸೋಂಕು ಹರಡುವ ಕುರಿತು ಭಯಾನಕ ಸತ್ಯ ಹೊರಹಾಕಿದ ಕೊರೊನಾ ಪೀಡಿತ ಮಹಿಳೆ!ಸೋಂಕು ಹರಡುವ ಕುರಿತು ಭಯಾನಕ ಸತ್ಯ ಹೊರಹಾಕಿದ ಕೊರೊನಾ ಪೀಡಿತ ಮಹಿಳೆ!

ಕೊರೊನಾ ಪ್ರತ್ಯೇಕಿಸುವಲ್ಲಿ ಭಾರತಕ್ಕೆ 5ನೇ ಸ್ಥಾನ

ಕೊರೊನಾ ಪ್ರತ್ಯೇಕಿಸುವಲ್ಲಿ ಭಾರತಕ್ಕೆ 5ನೇ ಸ್ಥಾನ

ಜಾಗತಿಕ ಮಟ್ಟದಲ್ಲಿ ಜನರಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ನ್ನು ಪ್ರತ್ಯೇಕಿಸಿ ಅದಕ್ಕೆ ಮದ್ದು ಕಂಡು ಹಿಡಿಯಲು ತಜ್ಞರು ಶ್ರಮಿಸುತ್ತಿದ್ದಾರೆ. ಇದರ ಪೈಕಿ ಚೀನಾ ಮೊದಲ ಸ್ಥಾನದಲ್ಲಿದೆ. ಯುನೈಟೆಡ್ ಸ್ಟೇಟ್ಸ್, ಥೈಲ್ಯಾಂಡ್, ಜಪಾನ್ ರಾಷ್ಟ್ರಗಳು ಕೂಡಾ ವೈರಸ್ ನ್ನು ಪ್ರತ್ಯೇಕಿಸಿ ಸಂಶೋಧನೆ ನಡೆಸುತ್ತಿವೆ. ಭಾರತ ಕೂಡಾ ಈ ಕಾರ್ಯದಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಕೊರೊನಾ ವೈರಸ್ ಪ್ರತ್ಯೇಕಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು 5ನೇ ಸ್ಥಾನ ಪಡೆದಿದೆ.

ಭಾರತೀಯ ತಜ್ಞರು ಕೊರೊನಾ ವೈರಸ್ ಪ್ರತ್ಯೇಕಿಸುವಲ್ಲಿ ಸಕ್ಸಸ್

ಭಾರತೀಯ ತಜ್ಞರು ಕೊರೊನಾ ವೈರಸ್ ಪ್ರತ್ಯೇಕಿಸುವಲ್ಲಿ ಸಕ್ಸಸ್

ಕೊರೊನಾ ವೈರಸ್ ನಲ್ಲಿ ಇರುವ ಸೂಕ್ಷ್ಮಾಣುಗಳನ್ನು ಪ್ರತ್ಯೇಕಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೆ, ಪುಣೆಯ ಸೂಕ್ಷ್ಮ ರೋಗಾಣುಗಳ ಅಧ್ಯಯನ ಕೇಂದ್ರ(NIV)ದಲ್ಲಿ ವಿಜ್ಞಾನಿಗಳು ಕೊರೊನಾ ವೈರಸ್ ನಲ್ಲಿ ಇರುವ ಸೂಕ್ಷ್ಮಾಣುಗಳನ್ನು ಪ್ರತ್ಯೇಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊರೊನಾ ವೈರಸ್ ನಲ್ಲಿ 11 ಬಗೆಯ ಸೂಕ್ಷ್ಮಾಣುಗಳು ಇರುವುದಾಗಿ ಪ್ರತ್ಯೇಕಿಸಲಾಗಿದೆ. ಎಂದು ಎಪಿಡೆಮಿಯಾಲಜಿ ಆಂಡ್ ಕಮ್ಯೂನಿಕೇಬಲ್ ಡಿಸೀಸಸ್(ECD-I) ICMR ವಿಭಾಗದ ಮುಖ್ಯಸ್ಥ ರಮಣ್ ಆರ್ ಗಂಗಾಖೇದಕರ್ ತಿಳಿಸಿದ್ದಾರೆ.

ಒಂದೂವರೆಯಿಂದ ಎರಡು ವರ್ಷಗಳಲ್ಲಿ ಔಷಧಿ

ಒಂದೂವರೆಯಿಂದ ಎರಡು ವರ್ಷಗಳಲ್ಲಿ ಔಷಧಿ

ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿಯಲು ಕನಿಷ್ಠ 18 ತಿಂಗಳು ಬೇಕಾಗುತ್ತದೆ ಎಂದು ಈಗಾಗಲೇ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಸ್ಪಷ್ಟನೆ ನೀಡಿದೆ. ಇದರ ಮಧ್ಯೆ ಭಾರತದಲ್ಲಿ ಮಾರಕ ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿಯಲು ಕನಿಷ್ಠ ಒಂದೂವರೆಯಿಂದ ಎರಡು ವರ್ಷಗಳ ಕಾಲ ಬೇಕಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

ಎರಡು ವಿಧಾನಗಳಲ್ಲಿ ಲಸಿಕೆ ಕಂಡು ಹಿಡಿಯಲು ಸಾಧ್ಯ

ಎರಡು ವಿಧಾನಗಳಲ್ಲಿ ಲಸಿಕೆ ಕಂಡು ಹಿಡಿಯಲು ಸಾಧ್ಯ

ಇನ್ನು, ಕೊರೊನಾ ವೈರಸ್ ನಲ್ಲಿರುವ ಸೂಕ್ಷ್ಮಾಣುಗಳನ್ನು ಪ್ರತ್ಯೇಕಿಸಿದ್ದು ಲಸಿಕೆ ಕಂಡು ಹಿಡಿಯಲು ಅನುಕೂಲವಾಗಿದೆ. ಈ ಲಸಿಕೆಯನ್ನು ಎರಡು ವಿಧಾನಗಳಲ್ಲಿ ಕಂಡು ಹಿಡಿಯಲು ತಜ್ಞರು ಚಿಂತನೆ ನಡೆಸುತ್ತಿದ್ದಾರೆ. ಅನುವಂಶಿಕ ಧಾತುವಿನ ಕ್ರಮಾನುಗತಿಯಲ್ಲಿ ದೇಹಕ್ಕೆ ಹೊಂದಿಕೊಳ್ಳುವಂತೆ ಲಸಿಕೆಯನ್ನು ಕಂಡು ಹಿಡಿಯುವುದು. ಇಲ್ಲವೇ ಸುಲಭ ಮಾರ್ಗದಲ್ಲಿ ಆಯಾಸ ಮಾಡಿಕೊಳ್ಳಲದೇ ಲಸಿಕೆಯನ್ನು ಕಂಡು ಹಿಡಿಯುವುದಾಗಿದೆ.

ಭಾರತದಲ್ಲಿ ಕೊರೊನಾ ಪರೀಕ್ಷೆಗೆ 52 ಲ್ಯಾಬೋರೇಟರಿ

ಭಾರತದಲ್ಲಿ ಕೊರೊನಾ ಪರೀಕ್ಷೆಗೆ 52 ಲ್ಯಾಬೋರೇಟರಿ

ಜನರಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ಸೋಂಕಿನ ಪತ್ತೆಗೆ ಭಾರತದಲ್ಲಿ 52 ಲ್ಯಾಬೋರೇಟರಿಗಳು ಕಾರ್ಯ ನಿರ್ವಹಿಸುತ್ತಿವೆ. ಒಟ್ಟು 57 ಲ್ಯಾಬೋರೇಟರಿಗಳಲ್ಲಿ ಸೋಂಕಿತರ ರಕ್ತ ಹಾಗೂ ಗಂಟಲು ದ್ರವ್ಯದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸುತ್ತಿವೆ. ದೇಶದಲ್ಲಿ ಈಗಾಗಲೇ 1 ಲಕ್ಷಕ್ಕೂ ಅಧಿಕ ತಪಾಸಣಾ ಕಿಟ್ ಗಳನ್ನು ಹೊಂದಿದ್ದು, ಹೆಚ್ಚುವರಿ ತಪಾಸಣಾ ಕಿಟ್ ಗಳಿಗೆ ಆರ್ಡರ್ ಕೊಡಲಾಗಿದೆ ಎಂದು ಸ್ವತಃ ಕೇಂದ್ರ ಆರೋಗ್ಯ ಸಚಿವಾಲಯವೇ ಸ್ಪಷ್ಟನೆ ನೀಡಿದೆ.

ವಿಶ್ವದಾದ್ಯಂತ 5 ಸಾವಿರ ಮೀರಿದ ಸಾವಿನ ಸಂಖ್ಯೆ

ವಿಶ್ವದಾದ್ಯಂತ 5 ಸಾವಿರ ಮೀರಿದ ಸಾವಿನ ಸಂಖ್ಯೆ

ಈಗಾಗಲೇ ಕೊರೊನಾ ವೈರಸ್ ಒಂದು ಸಾಂಕ್ರಾಮಿಕ ಪಿಡುಗು ಎಂದು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಘೋಷಿಸಿದೆ. ಇದರ ಮಧ್ಯೆ ಸಾವಿನ ಸಂಖ್ಯೆ 5 ಸಾವಿರದ ಗಡಿ ದಾಟಿದ್ದು, ಶುಕ್ರವಾರದ ಅಂಕಿ-ಅಂಶಗಳ ಪ್ರಕಾರ ಸಾವಿನ ಸಂಖ್ಯೆ 5,088 ಇದ್ದರೆ, ಸೋಂಕಿತರ ಸಂಖ್ಯೆ 1,37,445ರಷ್ಟಿದೆ. ಇದುವರೆಗೂ ಸೋಂಕು ತಗಲಿ ಚೇತರಿಸಿಕೊಂಡವರ ಸಂಖ್ಯೆ 69,779 ಎಂದು ಹೇಳಲಾಗುತ್ತಿದೆ. ಚೀನಾವೊಂದರಲ್ಲೇ 3,062 ಮಂದಿ ಮಾರಕ ಸೋಂಕಿನಿಂದ ಪ್ರಾಣ ಬಿಟ್ಟಿದ್ದು, 80,945 ಜನರು ಕೊರೊನಾ ವೈರಸ್ ನಿಂದ ಬಳಲುತ್ತಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಇಟಲಿಯಲ್ಲೂ ಸಾವಿನ ಸಂಖ್ಯೆ 1 ಸಾವಿರದ ಗಡಿ ದಾಟಿದೆ. 1,016 ಮಂದಿ ಕೊರೊನಾದಿಂದ ಮೃತಪಟ್ಟಿದ್ದರೆ, 15,113 ಮಂದಿ ಸೋಂಕಿತರಿದ್ದಾರೆ ಎಂದು ತಿಳಿದು ಬಂದಿದೆ.

English summary
Coronavirus Isoalated In Pune's NIV Lab; India In Top 5 List. Maximum Two Years For India To Develop A Vaccine For Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X