ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Coronavirus Effect: ಚೀನಾದ ಅಪಾರ್ಟ್ ಮೆಂಟ್ ನಲ್ಲಿ ಇರೋದೇ ಇಬ್ಬರು!

|
Google Oneindia Kannada News

ಬೀಜಿಂಗ್, ಫೆಬ್ರವರಿ.17: ಜಾಗತಿಕ ಮಟ್ಟದಲ್ಲಿ ಭೀತಿ ಹುಟ್ಟಿಸಿರುವ ಮಾರಕ ರೋಗವೇ ಕೊರೊನಾ ವೈರಸ್. ಚೀನಾದ ವುಹಾನ್ ನಲ್ಲಿ ಮೊದಲಿಗೆ ಕಾಣಿಸಿಕೊಂಡ ಸೋಂಕು, ಇಂದು ಇಡೀ ನಗರವನ್ನೇ ಸ್ಮಶಾನವನ್ನಾಗಿ ಮಾಡಿ ಬಿಟ್ಟಿದೆ.

ಈಗ ಇದೇ ವುಹಾನ್ ನಗರದ ಅಪಾರ್ಟ್ ಮೆಂಟ್ ಒಂದರಲ್ಲಿ ಭಾರತೀಯ ದಂಪತಿ ಸಿಲುಕಿಕೊಂಡಿದ್ದು, ತಮ್ಮನ್ನು ರಕ್ಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶ ಮೂಲದ ಆಶಿಶ್ ಯಾದವ್ ವುಹಾನ್ ನಗರದ ಟೆಕ್ಸ್ ಟೈಲ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಶಿಶ್ ಯಾದವ್ ಅವರ ಪತ್ನಿ ನೇಹಾ ಪಿಹೆಚ್ ಡಿ ಪದವೀಧರೆಯಾಗಿದ್ದಾರೆ.

ವುಹಾನ್ ನಗರ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಿರುವ ದಂಪತಿ ತಮ್ಮನ್ನು ಭಾರತಕ್ಕೆ ವಾಪಸ್ ಕರೆದುಕೊಂಡು ಹೋಗುವಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Coronavirus: Indian Couple Request For Save Them From Wuhan City

ಇಡೀ ಅಪಾರ್ಟ್ ಮೆಂಟ್ ನಲ್ಲಿ ಇರುವುದೇ ಇಬ್ಬರು:

ಚೀನಾದ ವುಹಾನ್ ನಗರದಲ್ಲಿ ಇರುವ ಈ ಅಪಾರ್ಟ್ ಮೆಂಟ್ ನಿಂದ ಎಲ್ಲರೂ ಬೇರೆಡೆಗೆ ತೆರಳಿದ್ದಾರೆ. ಇಂದು ಇಡೀ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿರುವುದೇ ನಾವಿಬ್ಬರು. ನಮ್ಮ ಹೆತ್ತವರು ಕೂಡಾ ಆತಂಕದಲ್ಲೇ ದಿನ ಕಳೆಯುವಂತಾಗಿದೆ. ದಯವಿಟ್ಟು ನಮ್ಮನ್ನು ಆದಷ್ಟು ಬೇಡ ದೇಶಕ್ಕೆ ವಾಪಸ್ ಕರೆಸಿಕೊಳ್ಳುವ ಪ್ರಯತ್ನ ಮಾಡಿ ಎಂದು ವಿಡಿಯೋದಲ್ಲಿ ಆಶಿಶ್ ದಂಪತಿ ಮನವಿ ಮಾಡಿಕೊಂಡಿದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ ವುಹಾನ್ ನಗರದಲ್ಲಿರುವ ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲು ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅಂದು ತಮ್ಮ ಪತ್ನಿ ನೇಹಾ ವೈದ್ಯಕೀಯ ಸರ್ಜರಿಗೆ ಒಳಗಾಗಿದ್ದರಿಂದ ವಿಮಾನದಲ್ಲಿ ಬರಲು ಸಾಧ್ಯವಾಗಲಿಲ್ಲ ಎಂದು ಆಶಿಶ್ ತಿಳಿಸಿದ್ದಾರೆ.

English summary
Coronavirus: Indian Couple Request For Save Them From Wuhan City To Evacuate Soonest. A Video Viral In Social Media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X