• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋವಿಡ್19: ಏಪ್ರಿಲ್ 15ರ ತನಕ ಪ್ರವಾಸಿಗರಿಗೆ ವೀಸಾ ಸಿಗಲ್ಲ

|

ನವದೆಹಲಿ, ಮಾರ್ಚ್ 12: ಜಾಗತಿಕ ಮಾರಿ ಕೋವಿಡ್19 ಮೇಲೆ ನಿಯಂತ್ರಣ ಹೊಂದಲು ಭಾರತ ಸರ್ಕಾರ ಹೆಣಗಾಡುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಕೊರೊನಾವೈರಸ್ ನಿಯಂತ್ರಣಕ್ಕಾಗಿ ವಿಮಾನಯಾನ, ಪ್ರವಾಸಿಗರ ಮೇಲೆ ನಿರ್ಬಂಧವನ್ನು ಸರ್ಕಾರ ಹೇರುತ್ತಿದೆ. ಏಪ್ರಿಲ್ 15ರ ತನಕ ಎಲ್ಲಾ ಮಾದರಿಯ ಪ್ರವಾಸಿಗರ ವೀಸಾ ರದ್ದುಗೊಳಿಸಲಾಗಿದೆ.

   karnataka ban selling offood cut fruits on footpaths | Street food Banned | Bangalore

   ಮಾರ್ಚ್ 13ರ 12.00 ಜಿಎಂಟಿ ಅವಧಿಯಂತೆ ಎಲ್ಲಾ ವೀಸಾ ರದ್ದುಗೊಳಿಸಲಾಗಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದೆ.

   ಕೋವಿಡ್ 19; ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಘೋಷಣೆ

   ಯಾರಿಗೆ ವಿನಾಯಿತಿ?: ರಾಯಭಾರಿ, ದೇಶದ ರಾಯಭಾರಿ ಕಚೇರಿ ಪ್ರತಿನಿಧಿ, ವಿಶ್ವಸಂಸ್ಥೆ/ಅಂತಾರಾಷ್ಟ್ರೀಯ ಸಂಸ್ಥೆ ಉದ್ಯೋಗಿ, ಪ್ರಾಜೆಕ್ಟ್ ವೀಸಾ ಹೊಂದಿರುವವರನ್ನು ಬಿಟ್ಟರೆ ಮಿಕ್ಕವರಿಗೆ ವೀಸಾ ಸಿಗುವುದಿಲ್ಲ. ಅನಿವಾಸಿ ಭಾರತೀಯರು OCI ಕಾರ್ಡ್ ಹೊಂದಿರುವವರಿಗೂ ಉಚಿತ ವೀಸಾ ಪ್ರಯಾಣ ಸೌಲಭ್ಯವನ್ನು ಏಪ್ರಿಲ್ 15ರ ತನಕ ನಿರ್ಬಂಧಿಸಲಾಗಿದೆ.

   ಇಟಲಿ, ಜಪಾನ್‌, ಇರಾನ್‌ನಿಂದ ಬರುವವರಿಗೆ ಭಾರತ ವೀಸಾ ಕೊಡಲ್ಲ

   ಬೇರೆ ದೇಶದ ನಾಗರಿಕರು ವೈದ್ಯಕೀಯ ವಿಷಯಕ್ಕಾಗಿ ತುರ್ತು ವೀಸಾ ಅಗತ್ಯವಿದ್ದರೆ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು. ಚೀನಾ, ಇಟಲಿ, ಇರಾನ್, ಕೊರಿಯಾ ರಿಪಬ್ಲಿಕ್, ಫ್ರಾನ್, ಸ್ಪೇನ್ ಹಾಗೂ ಜರ್ಮನಿಗೆ ಹೋಗಿ ಭಾರತಕ್ಕೆ ಬರುತ್ತಿರುವ ಎಲ್ಲಾ ಪ್ರಯಾಣಿಕರನ್ನು ಫೆಬ್ರವರಿ 15ರಿಂದ ಪ್ರತ್ಯೇಕಿಸಿ ಕೊರೊನಾವೈರಸ್ ಸೋಂಕಿನ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ.

   English summary
   India on Wednesday suspended all tourist visas till April 15 in a bid to contain spread of novel coronavirus, according to an official statement.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X