• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
LIVE

Coronavirus in India Live Updates: ಕೊರೊನಾ ಎಪೆಕ್ಟ್: ಕರ್ನಾಟಕದಲ್ಲಿ ಜಿಲ್ಲಾ ಉಸ್ತುವಾರಿಗಳ ಬದಲಾಯಿಸಿದ ಸಿಎಂ

|

ನವದೆಹಲಿ, ಏಪ್ರಿಲ್ 09 : ವಿಶ್ವದಾದ್ಯಂತ ಜನರಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಗೆ ಈಗಾಗಲೇ ಸಾವಿರಾರು ಮಂದಿ ಬಲಿಯಾಗಿದ್ದಾರೆ. ಚೀನಾದಿಂದ ಆರಂಭವಾದ ಕೊರೊನಾ ವೈರಸ್ ಸೋಂಕು ಭಾರತಕ್ಕೂ ಲಗ್ಗೆ ಇಟ್ಟಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಚನೆ ಮೇರೆಗೆ ಭಾರತಕ್ಕೆ ಭಾರತವೇ ಸ್ತಬ್ಧಗೊಂಡಿದೆ.

      ದಯವಿಟ್ಟು ಆಕೆಯನ್ನು ಬೆಂಗಳೂರಿಗೆ ಕರೆತನ್ನಿ ಎಂದು ಬೇಡಿಕೊಂಡ ಜಗ್ಗೇಶ್ | Jaggesh | Pregnant Women

      ಮಂಗಳವಾರ ಮಧ್ಯರಾತ್ರಿ 12 ಗಂಟೆಯಿಂದ 21 ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡುವಂತೆ ಪ್ರಧಾನಿ ಮನವಿ ಮಾಡಿಕೊಂಡಿದ್ದಾರೆ. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ. ಮಾರಕ ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವುದಕ್ಕೆ ಇರುವುದೊಂದೇ ಮಾರ್ಗ.

      Coronavirus In India Live Updates In Kannada

      ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಲಾಕ್ ಡೌನ್ ನಿರ್ಧಾರವೊಂದೇ ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಜನರು ಮನೆಗಳಿಂದ ಹೊರಗೆ ಬಾರದಂತೆ ಸೂಚನೆ ನೀಡಲಾಗಿದೆ. ದೇಶದಲ್ಲಿ ಲಾಕ್ ಡೌನ್ ಪರಿಸ್ಥಿತಿ ಹೇಗಿದೆ. ವಿಶ್ವದಲ್ಲಿ ಕೊರೊನಾ ವೈರಸ್ ಭೀತಿಯಲ್ಲಿ ನರಳುತ್ತಿರುವ ರಾಷ್ಟ್ರಗಳಲ್ಲಿನ ಚಿತ್ರಣ ಹೇಗಿದೆ. ಇದುವರೆಗೂ ಅದೆಷ್ಟು ಮಂದಿ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ ಎಂಬುದರ ಕ್ಷಣಕ್ಷಣದ ಮಾಹಿತಿ ನಿಮಗಾಗಿ.

      Newest First Oldest First
      10:56 PM, 9 Apr
      ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಬೆಂಗಳೂರು ನಗರ ಜಿಲ್ಲೆ ತಮ್ಮಲ್ಲಿಯೆ ಉಳಿಸಿಕೊಂಡ ಸಿಎಂ ಯಡಿಯೂರಪ್ಪ ಉಳಿದಂತೆ ಎಲ್ಲ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ
      9:58 PM, 9 Apr
      ಸೌದಿ ಅರೇಬಿಯಾ ರಾಜಮನೆತನದ ಸುಮಾರು 150 ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ
      9:49 PM, 9 Apr
      ಜಗತ್ತಿನಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 90 ಸಾವಿರ ತಲುಪಿದೆ. 16 ಲಕ್ಷ ಜನ ಸೋಂಕಿಗೆ ತುತ್ತಾಗಿದ್ದಾರೆ.
      9:22 PM, 9 Apr
      ಲಾಕ್‌ಡೌನ್ ನಡುವೆಯೂ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯಾದ್ಯಂತ ಕೋಳಿ ಮೊಟ್ಟೆ, ಕೋಳಿ ಮಾಂಸ ಹಾಗೂ ಮಟನ್ ಮಾರಾಟಕ್ಕೆ ಅನುಮತಿ ನೀಡಿದೆ. ಈ ಕುರಿತು ಸರ್ಕಾರ ಗುರುವಾರ ಸಂಜೆ ಆದೇಶ ಹೊರಡಿಸಿದೆ.
      9:13 PM, 9 Apr
      ಜನಧನ್ ಖಾತೆಗೆ ಮತ್ತೆ 1,000 ರೂ. ಜಮೆ ಎಂಬುದು ವದಂತಿ, ಅದನ್ನು ನಂಬದಿರಿ ಎಂದು ಕೇಂದ್ರ ಸರ್ಕಾರ ಹೇಳಿದೆ
      8:56 PM, 9 Apr
      ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವೇಗವಾಗಿ ಕಾಣಿಸಿಕೊಳ್ಳುತ್ತಿದೆ. ಇವತ್ತು ಒಂದೇ ದಿನ 229 ಜನರು ಸೋಂಕಿಗೆ ತುತ್ತಾಗಿದ್ದಾರೆ. 25 ಜನ ಸೋಂಕಿಗೆ ಮೃತರಾಗಿದ್ದಾರೆ.
      8:42 PM, 9 Apr
      ಇನ್ನುಂದೆ ದೇಶದ ಕೊರೊನಾ ಹಾಟ್‌ಸ್ಪಾಟ್‌ ನಗರಗಳಲ್ಲಿ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದವರನ್ನೂ ಹೊರತುಪಡಿಸಿ, ಜ್ವರ, ಕೆಮ್ಮು, ನೆಗಡಿ ಹಾಗೂ ಗಂಟಲು ಕೆರೆತ ಕಂಡು ಬಂದವರಿಗೂ ಕೊರೊನಾ ಪರೀಕ್ಷೆ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ.
      8:23 PM, 9 Apr
      ಕೊರೊನಾ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಬಡವರಿಗೆ ದುರ್ಬಲರಿಗೆ ಅತ್ಯಾವಶ್ಯಕ ವಸ್ತುಗಳನ್ನು ಕೊಂಡು ಕೊಳ್ಳಲು ಹಣ ಹಂಚಲಾಗುತ್ತಿದೆ. ಈ ಕುರಿತು ಸ್ವತಃ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.
      8:19 PM, 9 Apr
      ತೆಲಂಗಾಣದಲ್ಲಿ 473 ಜನರಿಗೆ ಕೊರೊನಾ ಸೋಂಕು ತಗುಲಿದೆ. ಕಳೆದ 24 ಗಂಟೆಯಲ್ಲಿ 18 ಜನರಿಗೆ ಪಾಸಿಟಿವ್ ಕಂಡು ಬಂದಿದೆ. ಇದುವರೆಗೆ ತೆಲಂಗಾಣದಲ್ಲಿ 18 ಜನ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
      6:32 PM, 9 Apr
      ಕೊರೊನಾ ತಡೆಗಟ್ಟುವಿಕೆಗಾಗಿ ವಿಶ್ವನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ಮುಂದುವರೆಸಿದ್ದಾರೆ. ಅವರು ಇಂದು ಉಗಾಂಡ ಪ್ರಧಾನಿ ಜೊತೆ ಮಾತುಕತೆ ನಡೆಸಿದ್ದಾರೆ
      6:15 PM, 9 Apr
      ಧಾರವಾಡದಲ್ಲಿ ಮತ್ತೊಂದು ಕೊರೊನಾ ಸೋಂಕಿತ ಪ್ರಕರಣ ಖಚಿತಪಟ್ಟಿದೆ. ದೆಹಲಿ ಟ್ರಾವೆಲ್ ಹಿಸ್ಟರಿ ಹೊಂದಿದ್ದ ವ್ಯಕ್ತಿಗೆ ಸೋಂಕು ತಗುಲಿದೆ. ಆತನನ್ನು ಕೀಮ್ಸ್‌ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.
      6:15 PM, 9 Apr
      ಧಾರವಾಡದಲ್ಲಿ ಮತ್ತೊಂದು ಕೊರೊನಾ ಸೋಂಕಿತ ಪ್ರಕರಣ ಖಚಿತಪಟ್ಟಿದೆ. ದೆಹಲಿ ಟ್ರಾವೆಲ್ ಹಿಸ್ಟರಿ ಹೊಂದಿದ್ದ ವ್ಯಕ್ತಿಗೆ ಸೋಂಕು ತಗುಲಿದೆ. ಆತನನ್ನು ಕೀಮ್ಸ್‌ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.
      6:13 PM, 9 Apr
      ಕೊರೊನಾದಿಂದ ಬಡ ವರ್ಗದ ಜನತೆ ತೀವ್ರ ಸಂಕಟಕ್ಕೆ ತುತ್ತಾಗಿದ್ದಾರೆ. ಅವರಿಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಹಣಕಾಸು ನೆರವನ್ನು ಪೂರೈಸುವ ಕೆಲಸವನ್ನು ಸರ್ಕಾರಗಳು ಮಾಡಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯಲ್ಲಿನ ಕೊರೊನಾ ಮೇಲಿನ ಉಸ್ತುವಾರಿ ಡೆವಿಡ್ ನಬಾರೋ ಹೇಳಿದ್ದಾರೆ.
      5:32 PM, 9 Apr
      SSLC ಮತ್ತು PUC ಪರೀಕ್ಷೆಗಳ ಬಗ್ಗೆ ಯಾವುದೇ ಸುಳ್ಳು ವದಂತಿಗಳನ್ನು ನಂಬಬೇಡಿ: ಶಿಕ್ಷಣ ಸಚಿವ ಸುರೇಶ್ ಕುಮಾರ್
      5:29 PM, 9 Apr
      ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 197 ಕ್ಕ ಏರಿಕೆ. ಒಂದೇ ದಿನದಲ್ಲಿ 16 ಪ್ರಕರಣಗಳು ವರದಿ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅಧಿಕೃತ ಮಾಹಿತಿ.
      4:57 PM, 9 Apr
      ಕೊರೊನಾ ಬಗೆಗಿನ ಭಯ ಒಂದೇ ಅದರ ವಿರುದ್ಧದ ಹೋರಾಕ್ಕೆ ಸಾಲುವುದಿಲ್ಲ. ಈ ಮಹಾಮಾರಿಯನ್ನು ಹೊಡೆದೋಡಿಸಲು ನಾವು ಆರೋಗ್ಯ ಸೇತು ಅಪ್ಲೀಕೇಷನ್ ಅಳವಡಿಸಿಕೊಳ್ಳಬೇಕು. ಯಾರಾರು ಆರೋಗ್ಯ ಸೇತು ಆಪ್ ಅಳವಡಿಸಿಕೊಂಡಿದ್ದೀರಾ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ
      4:47 PM, 9 Apr
      ಮುಂಬೈನ ಧಾರಾವಿ ಕೊಳಚೆ ಪ್ರದೇಶದಲ್ಲಿ ಕೊರೊನಾಕ್ಕೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾನೆ. ಇದುವರೆಗೆ ಧಾರಾವಿಯಲ್ಲಿ ಮೂವರನ್ನು ಕೊರೊನಾ ಬಲಿ ಪಡೆದುಕೊಂಡಿದೆ.
      4:36 PM, 9 Apr
      ದೇಶದಲ್ಲಿ ಕೊರೊನಾ ತುರ್ತು ಪರಿಸ್ಥಿತಿ ಇರುವುದರಿಂದ 49 ಸಾವಿರ ವೆಂಟಿಲೇಟರ್ ಖರೀದಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ. ಐದು ಸಾವಿರ ರೈಲು ಬೋಗಿಗಳನ್ನು ಐಸೋಲೇಷನ್ ವಾರ್ಡ್‌ ಆಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ.
      4:26 PM, 9 Apr
      ಕೊರೊನಾ ಪೀಡಿತ ರೋಗಿಗಳ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಆಂಧ್ರ ಸರ್ಕಾರ ವಿಶೇಷ ಆಸಕ್ತಿ. ರೋಗಿಗಳಿಗೆ ಹಣ್ಣು, ಒಣ ಹಣ್ಣು ಹಾಗೂ ಮೊಟ್ಟೆಯನ್ನು ನೀಡಲಾಗುತ್ತಿದೆ
      4:17 PM, 9 Apr
      ದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಟಿ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾದಿಂದ 17 ಜನ ಮೃತಪಟ್ಟಿದ್ದಾರೆ. ಇದುವರೆಗೆ 166 ಜನ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 5734 ಕ್ಕೆ ಏರಿಕೆಯಾಗಿದೆ ಎಂಬ ಮಾಹಿತಿ.
      3:54 PM, 9 Apr
      ಲಾಕ್‌ಡೌನ್ ಮುಂದುವರೆಸಬೇಕು ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಏಪ್ರಿಲ್ 11 ರಂದು ಪ್ರಧಾನಿ ಮೋದಿ ಅವರು ಸಿಎಂ ಗಳ ಸಭೆಯಲ್ಲಿ ಏನು ಹೇಳಲಿದ್ದಾರೆ ಎಂಬುದನ್ನು ನೋಡಿಕೊಂಡು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿನಲ್ಲಿ ಸಂಪುಟ ಸಭೆ ಬಳಿಕ ಹೇಳಿದ್ದಾರೆ
      3:44 PM, 9 Apr
      ವಿಧಾನ ಪರಿಷತ್ ಸದಸ್ಯರಾದ ಜಯಮಾಲ ಅವರು ಕೆಪಿಸಿಸಿ ಕೊರೊನ ವಿಪತ್ತು ಪರಿಹಾರ ನಿಧಿಗೆ ₹ 1,00,000 ದೇಣಿಗೆಯನ್ನು ನೀಡಿದ್ದಾರೆ
      3:42 PM, 9 Apr
      ದೇಶಾದ್ಯಂತ ಜನಸಾಮಾನ್ಯರ ಅವಶ್ಯಕ ಸರಕು ಸಾಗಾಣೆಗೆ ಭಾರತೀಯ ರೈಲ್ವೆ 109 ರೈಲುಗಳನ್ನು ಓಡಿಸಲು ತೀರ್ಮಾನಿಸಿದೆ
      3:26 PM, 9 Apr
      ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ ಆಗಲು ದೆಹಲಿ ನಿಜಾಮುದ್ದೀನ್ ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ಬಂದವರಿಂದ ಹಾಗೂ ನಂಜನಗೂಡಿನ ಜೂಬ್ಲಿಹಿಂಟ್ ಕಾರ್ಖಾನೆ ಕಾರಣ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಕೊಪ್ಪಳದಲ್ಲಿ ಹೇಳಿದ್ದಾರೆ
      3:16 PM, 9 Apr
      ರಾಜಸ್ಥಾನದಲ್ಲಿ 47 ಹೊಸೊ ಕೊರೊನಾ ಕೇಸ್‌ ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 430ಕ್ಕೆ ಏರಿದೆ.
      3:07 PM, 9 Apr
      ಹಾಕಿ ವಿಶ್ವಕಪ್ ತಂಡದ ಆಟಗಾರ ಅಶೋಕ್ ದಿವಾನ್ ಅಮೆರಿಕದಲ್ಲಿ ಸಿಲುಕಿಕೊಂಡಿದ್ದು, ಸ್ವದೇಶಕ್ಕೆ ವಾಪಸ್ ಆಗಲು ಸರ್ಕಾರದ ಸಹಾಯ ಕೋರಿದ್ದಾರೆ.
      2:57 PM, 9 Apr
      ಪಂಜಾಬ್‌ನಲ್ಲಿ ಹೊಸದಾಗಿ ಮೂವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
      2:43 PM, 9 Apr
      ಜರ್ಮನಿಯಲ್ಲಿ 1,13,296 ಜನರಿಗೆ ಕೊರೊನಾ ಸೋಂಕು ಹರಡಿದೆ. 2349 ಜನರು ಸಾವನ್ನಪ್ಪಿದ್ದಾರೆ. ಇಟಲಿ, ಸ್ಪೇನ್, ಯುಎಸ್, ಫ್ರಾನ್ಸ್ ದೇಶಗಳಿಗೆ ಹೋಲಿಸಿಕೊಂಡರೆ ಸಾವಿನ ಸಂಖ್ಯೆಯಲ್ಲಿ ಜರ್ಮನಿ ಬಹಳ ನಿಯಂತ್ರಣದಲ್ಲಿದೆ.
      2:27 PM, 9 Apr
      ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಮಾರಪ್ಪನಪಾಳ್ಯ ಬಡಾವಣೆಯಲ್ಲಿ ಉಚಿತ ಆಹಾರದ ಪೊಟ್ಟಣಗಳನ್ನು ವಿತರಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.
      2:16 PM, 9 Apr
      ಬಿಹಾರ್‌ನಲ್ಲಿ ಹೊಸದಾಗಿ 12 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 51ಕ್ಕೆ ಏರಿಕೆ.
      READ MORE

      English summary
      Coronavirus outbreak LIVE updates in Kannada: Check out the Live News, latest updates about confirmed and suspected coronavirus cases in india.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X
      We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
      X