ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Coronavirus Updates; ಭಾರತದಲ್ಲಿ ಒಂದೇ ದಿನ 12,213 ಮಂದಿಗೆ ಕೊರೊನಾವೈರಸ್

|
Google Oneindia Kannada News

ನವದೆಹಲಿ, ಜೂನ್ 16: ಕೊರೊನಾವೈರಸ್ ಎಂಬ ಸಾಂಕ್ರಾಮಿಕ ಪಿಡುಗು ಅಲೆಗಳ ರೂಪದಲ್ಲಿ ಜನರನ್ನು ಕಾಡುವುದಕ್ಕೆ ಶುರು ಮಾಡಿದೆ. 2019ರಲ್ಲಿ ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೋವಿಡ್-19 ಸೋಂಕು ಜಾಗತಿಕ ಮಟ್ಟದಲ್ಲಿ ವ್ಯಾಪಿಸುವ ಮೂಲಕ ಸಾರ್ವಜನಿಕ ಬದುಕಿಗೆ ಪೆಟ್ಟು ಕೊಟ್ಟಿತು.

ಭಾರತದಲ್ಲಿ ಕೋವಿಡ್-19 ಮೊದಲ ಅಲೆಯು ಭಯವನ್ನು ಹುಟ್ಟು ಹಾಕಿತು. ಎರಡನೇ ಅಲೆಯು ಉಸಿರಾಟ ಸಮಸ್ಯೆಯ ಗಂಭೀರತೆಯಿಂದಾಗಿ ಅತಿಹೆಚ್ಚು ಸಾವಿನ ಪ್ರಕರಣಗಳಿಗೆ ಸಾಕ್ಷಿ ಆಯಿತು. ಅದೇ ರೀತಿ ಮೂರನೇ ಅಲೆಯು ದೇಶದಲ್ಲಿ ಜನರು ಯಾವ ರೀತಿ ಜಾಗೃತಿ ವಹಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಪಾಠವನ್ನು ಕಲಿಸಿದೆ.

ಕೊರೊನಾವೈರಸ್ ಸೋಂಕು ಮತ್ತು ಲಾಕ್ ಡೌನ್ ನಂತರದ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಭಾರತೀಯರು ಅಣಿ ಆಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೋವಿಡ್-19 ಸೋಂಕಿನ ಮತ್ತೊಂದು ಅಲೆಯು ಜನರಲ್ಲಿ ಭಯವನ್ನು ಹುಟ್ಟುಹಾಕುವ ಲಕ್ಷಣಗಳು ಗೋಚರಿಸುತ್ತಿವೆ. ದೇಶದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ.

ಕೋವಿಡ್-19 ಸೋಂಕಿತ ಪ್ರಕರಣಗಳ ಏರಿಳಿತ, ಸಾವು ಮತ್ತು ಸರ್ಕಾರಗಳು ಹೊರಡಿಸುವ ಮಾರ್ಗಸೂಚಿ ಹಾಗೂ ಶಿಷ್ಟಾಚಾರ ಪಾಲನೆಯ ಕುರಿತು ಕ್ಷಣಕ್ಷಣದ ಮಾಹಿತಿಯನ್ನು ಮುಂದೆ ಓದಿ ತಿಳಿದುಕೊಳ್ಳಿ.

Recommended Video

      Covid Vaccine ಹಂಚುವಿಕೆ ಬಗ್ಗೆ ಮುಖ್ಯಮಂತ್ರಿಗಳ ಸಭೆ ಕರೆದ Modi | Oneindia Kannada
      Coronavirus In India New Live Updates In Kannada

      Newest FirstOldest First
      9:49 AM, 16 Jun

      ಭಾರತ ಕಳೆದ 24 ಗಂಟೆಗಳಲ್ಲಿ 12,213 ಹೊಸ ಪ್ರಕರಣಗಳನ್ನು ದಾಖಲಿಸಿದೆ. 7,624 ಜನ ಸೋಂಕಿತರು ಗುಣಮುಖರಾಗಿದ್ದಾರೆ. ಒಂದು ದಿನದಲ್ಲಿ 58,215 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಪಾಸಿಟಿವಿಟಿ ದರ ಶೇ.2.35ರಷ್ಟಿದೆ.
      7:39 PM, 15 Jun

      ಮಹಾರಾಷ್ಟ್ರದಲ್ಲಿ ಒಂದೇ ದಿನ 4024 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಾತ್ರಿಯಾಗಿದೆ.
      10:27 AM, 15 Jun

      ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ (ಜೂನ್ 15) ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 5,718 ಜನ ಡಿಸ್ಚಾರ್ಜ್‌ ಆಗಿದ್ದಾರೆ. ಭಾರತದಲ್ಲಿ COVID-19 ನ ಒಟ್ಟು ಸಕ್ರಿಯ ಪ್ರಕರಣಗಳು 53,637 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಇಂದು ತೋರಿಸಿವೆ. ನಿನ್ನೆ 50,548 ಸಕ್ರಿಯ ಪ್ರಕರಣಗಳು ದಾಖಲಾಗಿವೆ.
      3:39 PM, 14 Jun

      ಕೊರೊನಾ ವೈರಸ್‌ನ ಓಮಿಕ್ರಾನ್ ಉಪ-ವೇರಿಯಂಟ್‌ಗಳಲ್ಲಿ BA.4ನ ಮೂರು ಪ್ರಕರಣಗಳು ಮತ್ತು BA.5 ಒಂದು ಪ್ರಕರಣ ಮುಂಬೈನಲ್ಲಿ ಸೋಮವಾರ ದಾಖಲಾಗಿವೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಎರಡು ಉಪ-ರೂಪಾಂತರಗಳು ಕೊರೊನವೈರಸ್‌ನ ಹೆಚ್ಚು-ಪ್ರಸರಣಶೀಲ ಓಮಿಕ್ರಾನ್ ಸ್ಟ್ರೈನ್‌ಗೆ ಸೇರಿವೆ. ಇದು ಈ ವರ್ಷದ ಆರಂಭದಲ್ಲಿ ಮೂರನೇ ತರಂಗಕ್ಕೆ ಕಾರಣವಾಗಬಹುದು ಎನ್ನಲಾಗುತ್ತಿದೆ.
      2:21 PM, 14 Jun

      ಭಾರತದಲ್ಲಿಂದು 6,594 ಹೊಸ ಕೊರೊನ ಪ್ರಕರಣಗಳು ದಾಖಲು

      ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 6,594 ಹೊಸ ಕೊರೊನವೈರಸ್ ಪ್ರಕರಣಗಳು ದಾಖಲಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ (ಜೂನ್ 14) ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 4,035 ಸೋಂಕಿತರು ಚೇತರಿಸಿಕೊಂಡು ಡಿಸ್ಚಾರ್ಜ್‌ ಆಗಿದ್ದಾರೆ. ಒಟ್ಟು ಚೇತರಿಕೆಯ ದರ ಸುಮಾರು 98.67 ರಷ್ಟಿದೆ. ಒಟ್ಟು ಚೇತರಿಕೆಯ 26,61,370 ಕ್ಕೆ ತಲುಪಿದೆ. ಭಾರತದಲ್ಲಿ COVID-19 ನ ಒಟ್ಟು ಸಕ್ರಿಯ ಪ್ರಕರಣಗಳು 50,548 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಇಂದು ತೋರಿಸಿವೆ.
      11:13 PM, 13 Jun

      ಕರ್ನಾಟಕದಲ್ಲಿ 415 ಹೊಸ ಕೋವಿಡ್ ಪ್ರಕರಣಗಳು ದಾಖಲು. 24 ಗಂಟೆಯಲ್ಲಿ ಯಾವುದೇ ಸೋಂಕಿತರು ಮೃತಪಟ್ಟಿಲ್ಲ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 3688.
      7:14 AM, 13 Jun

      ಭಾರತದಲ್ಲಿ ಭಾನುವಾರದಂದು 8,582 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ. ವೈರಸ್ ಸಂಬಂಧಿತ ಸಾವಿನ ಸಂಖ್ಯೆಯನ್ನು 5,24,761 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಸಕ್ರಿಯ ಪ್ರಕರಣಗಳು 44,513 ರಷ್ಟಿದ್ದು, ಸಂಚಿತ ಪ್ರಕರಣಗಳಲ್ಲಿ ಶೇ 0.1 ರಷ್ಟು ಒಳಗೊಂಡಿದೆ. ಚೇತರಿಕೆ ಪ್ರಮಾಣಾ ಶೇ 98.68ರಷ್ಟಿದೆ. ಸುಮಾರು 195 ಕೋಟಿ ಲಸಿಕೆ ನೀಡಲಾಗಿದೆ.
      Advertisement
      9:34 AM, 9 Jun

      ಭಾರತದಲ್ಲಿ 24 ಗಂಟೆಯಲ್ಲಿ 7240 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದ ಪಾಸಿಟಿವಿಟಿ ದರ ಶೇ 1.62ಕ್ಕೆ ಏರಿಕೆಯಾಗಿದೆ. ದೇಶದ ಸಕ್ರಿಯ ಪ್ರಕರಣಗಳು 32,498 ಆಗಿದೆ.
      9:10 PM, 8 Jun
      ಕರ್ನಾಟಕ

      ಬೆಂಗಳೂರಿನಲ್ಲಿ ಕೊರೊನಾವೈರಸ್ ಹೆಚ್ಚಳ; ಮಾಸ್ಕ್ ಕಡ್ಡಾಯ

      ಬೆಂಗಳೂರಿನಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವುದರ ಹಿನ್ನೆಲೆ ನಗರದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವಂತೆ ಬಿಬಿಎಂಪಿ ವಿಶೇಷ ಆಯುಕ್ತ ಕೆ ಹರೀಶ್ ಕುಮಾರ್ ಸೂಚನೆ ನೀಡಿದ್ದಾರೆ.
      2:09 PM, 26 May

      ಜರ್ಮನಿಯಲ್ಲಿ ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ

      ಜರ್ಮನಿ Covaxin COVID19 ಲಸಿಕೆಯನ್ನು ಅನುಮೋದಿಸಿದೆ. ಫೆಡರಲ್ ಕ್ಯಾಬಿನೆಟ್ ನಿರ್ಬಂಧಗಳನ್ನು ಸಡಿಲಿಸುವುದರಿಂದ ಪ್ರವೇಶಿಸುವವರಿಗೆ ಇನ್ನು ಮುಂದೆ ವ್ಯಾಕ್ಸಿನೇಷನ್ ಪುರಾವೆಗಳ ಅಗತ್ಯವಿರುವುದಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿದೆ.
      9:37 AM, 23 May

      ಭಾರತದಲ್ಲಿ 2022 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 24 ಗಂಟೆಯಲ್ಲಿ 2099 ಜನರು ಗುಣಮುಖಗೊಂಡಿದ್ದಾರೆ, 46 ಜನರು ಮೃತಪಟ್ಟಿದ್ದಾರೆ.
      5:10 PM, 21 May

      ಮಣಿಪುರದಲ್ಲಿ ಶೂನ್ಯ

      ಮಣಿಪುರ ರಾಜ್ಯದಲ್ಲಿ ಕೋವಿಡ್‌ನಿಂದ ಸಂಪೂರ್ಣ ಮುಕ್ತವಾಗಿದೆ. ನಿನ್ನೆಯವರೆಗೂ ಸೋಂಕಿತರಾಗಿದ್ದ ಮೂವರು ವ್ಯಕ್ತಿಗಳು ಇಂದು ಶನಿವಾರ ಗುಣಮುಖರಾಗಿದ್ದಾರೆ. ಇದರೊಂದಿಗೆ ಈ ಈಶಾನ್ಯ ರಾಜ್ಯದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಸೊನ್ನೆಗೆ ಇಳಿದಿದೆ. ಕಳೆದ ೨೬ ತಿಂಗಳಲ್ಲಿ ಇದೇ ಮೊದಲ ಬಾರಿಗೆ ಮಣಿಪುರ ರಾಜ್ಯದಲ್ಲಿ ಝೀರೋ ಆ್ಯಕ್ಟಿವ್ ಕೇಸ್ ಇರುವುದು. ನಿನ್ನೆ ಶುಕ್ರವಾರ ೭೧ ಮಂದಿಯ ಸ್ಯಾಂಪಲ್‌ಗಳನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಯಾವುದೂ ಪಾಸಿಟಿವ್ ಬಂದಿಲ್ಲ ಎನ್ನಲಾಗಿದೆ.
      Advertisement
      11:28 AM, 21 May

      ಸೌತ್ ಆಫ್ರಿಕಾದಿಂದ ಹೊಸ ರೂಪಾಂತರಿ

      ದಕ್ಷಿಣ ಆಫ್ರಿಕಾದಿಂದ ಸದ್ಯದಲ್ಲೇ ಹೊಸ ರೂಪಾಂತರಿ ಕೋವಿಡ್ ವೈರಸ್ ವ್ಯಾಪಿಸುವ ಸಾಧ್ಯತೆ ದಟ್ಟವಾಗಿದೆ. ಇದು ಹಿಂದಿನ ರೂಪಾಂತರಿ ವೈರಸ್‌ಗಳಿಗಿಂತಲೂ ಅತಿ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕಳೆದ ನಾಲ್ಕು ವಾರದಲ್ಲಿ ಆಫ್ರಿಕಾದ ಮಧ್ಯ ಮತ್ತು ಪೂರ್ವ ಪ್ರದೇಶಗಳಲ್ಲಿ ಹೊಸ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಬಹಳ ವೇಗವಾಗಿ ಹೆಚ್ಚುತ್ತಿದೆ.
      11:24 AM, 21 May

      ಈವರೆಗೆ ನೀಡಲಾಗಿರುವ ಕೋವಿಡ್ ಲಸಿಕೆಗಳ ಪ್ರಮಾಣ 192.12 ಕೋಟಿ ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
      11:21 AM, 21 May

      ಕಳೆದ 24 ಗಂಟೆಯಲ್ಲಿ ಸುಮಾರು ಐದು ಲಕ್ಷದಷ್ಟು ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರೊಂದಿಗೆ ಈವರೆಗೆ ಮಾಡಲಾಗಿರುವ ಪರೀಕ್ಷೆಗಳ ಸಂಖ್ಯೆ 84.63 ಕೋಟಿ ದಾಟಿದಂತಾಗಿದೆ.
      11:19 AM, 21 May

      ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 25 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟಾರೆ ಸಾವು 5,24,348 ಆಗಿದೆ. ಭಾರತದಲ್ಲಿ ಒಟ್ಟಾರೆ ಪ್ರಕರಣಗಳಿಗೆ ಹೋಲಿಸಿದ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ. 0.03 ಮಾತ್ರ ಇದೆ. ಅಂದರೆ ದಾಖಲಾದ ಪ್ರತೀ 10 ಸಾವಿರ ಪ್ರಕರಣಗಳಲ್ಲಿ ಸದ್ಯ ಸಕ್ರಿಯವಾಗಿರುವುವು ಕೇವಲ ಮೂರು ಮಾತ್ರ. ಗುಣಮುಖರಾಗುವವರ ಸಂಖ್ಯೆ ಶೇ. 98.75 ಇದೆ. ಇದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯಾಗಿದೆ.
      11:19 AM, 21 May

      ಮೇ 20-21ರ ಪ್ರಕರಣಗಳು

      ಭಾರತದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 2,323 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಭಾರತದಲ್ಲಿ ಇಂದು ಬೆಳಗ್ಗೆಯವರೆಗೆ ಇದೂವರೆಗೆ ದಾಖಲಾದ ಒಟ್ಟು ಕೊರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 4,31,145 ತಲುಪಿದೆ. ಹಾಗೆಯೇ ಬಹಳಷ್ಟು ಮಂದಿ ಸೋಂಕಿತರು ಚೇರಿಸಿಕೊಂಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 48 ಕಡಿಮೆ ಆಗಿದೆ. ಈಗ ಭಾರತದಲ್ಲಿ ಆ್ಯಕ್ವಿವ್ ಕೇಸ್‌ಗಳ ಸಂಖ್ಯೆ 14996 ಇದೆ.
      9:45 PM, 14 May

      ಕರ್ನಾಟಕದಲ್ಲಿ ಮೇ 14ರಂದು ಶುಕ್ರವಾರ 103 ಕೋವಿಡ್ 19 ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ ಬೆಂಗಳೂರಿನಲ್ಲಿ 96 ಪ್ರಕರಣಗಳು ಇವೆ. ರಾಜ್ಯದ ಪಾಸಿಟಿವಿಟಿ ದರ ಶೇ 0.56 ಇದೆ. ರಾಜ್ಯದಲ್ಲಿ ಒಟ್ಟಾರೆ 1868 ಸಕ್ರಿಯ ಪ್ರಕರಣಗಳು ಇದ್ದು, ಇದರಲ್ಲಿ 1792 ಪ್ರಕರಣಗಳು ಬೆಂಗಳೂರಿನಲ್ಲಿಯೇ ಇವೆ. ಕಳೆದ 24 ಗಂಟೆಗಳಲ್ಲಿ 19,045 ಜನರಿಗೆ ಕೋವಿಡ್ ತಪಾಸಣೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ಹಂಚಿಕೊಂಡಿದ್ದಾರೆ.
      8:57 PM, 13 May

      ಕರ್ನಾಟಕದಲ್ಲಿ ಮೇ 13ರಂದು ಶುಕ್ರವಾರ 156 ಕೋವಿಡ್ 19 ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ ಬೆಂಗಳೂರಿನಲ್ಲಿ 143 ಪ್ರಕರಣಗಳು ಇವೆ. ರಾಜ್ಯದ ಪಾಸಿಟಿವಿಟಿ ದರ ಶೇ 0.80 ಇದೆ. ರಾಜ್ಯದಲ್ಲಿ ಒಟ್ಟಾರೆ 1884 ಸಕ್ರಿಯ ಪ್ರಕರಣಗಳು ಇದ್ದು, ಇದರಲ್ಲಿ 1793 ಪ್ರಕರಣಗಳು ಬೆಂಗಳೂರಿನಲ್ಲಿಯೇ ಇವೆ. ಕಳೆದ 24 ಗಂಟೆಗಳಲ್ಲಿ 19,500 ಜನರಿಗೆ ಕೋವಿಡ್ ತಪಾಸಣೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ಹಂಚಿಕೊಂಡಿದ್ದಾರೆ.
      11:14 AM, 6 May

      ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 191 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,854ಕ್ಕೆ ಏರಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಕೂ ಮಾಡಿದ್ದಾರೆ. ಈ ಅವಧಿಯಲ್ಲಿ ಕೋವಿಡ್‌ನಿಂದ ಯಾರು ಮೃತಪಟ್ಟಿದ್ದಾರೆ. 138 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, 11,380 ಕೋವಿಡ್ ಟೆಸ್ಟ್ ನಡೆಸಲಾಗಿದೆ. ದೈನಂದಿನ ಕೋವಿಡ್ ಪಾಸಿಟಿವಿಟಿ ದರ ಶೇಕಡ 1.61ರಷ್ಟಿದ್ದು, ಬೆಂಗಳೂರು ನಗರದಲ್ಲಿ 171 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,763 ಇದೆ.
      10:59 AM, 6 May

      ಕಳೆದ 24 ಗಂಟೆಗಳಲ್ಲಿ 3545 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆ. ದೇಶದಲ್ಲಿ ಸದ್ಯ ಸಕ್ರಿಯ ಪ್ರಕಣಗಳ ಸಂಖ್ಯೆ 19,688 ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕೋವಡ್‌ನಿಂದಾಗಿ ದೇಶದಲ್ಲಿ 27 ಮಂದಿ ಮೃತಪಟ್ಟಿದ್ದಾರೆ.
      11:28 PM, 4 May

      ಜಗತ್ತಿನಲ್ಲಿ ಈವರೆಗೂ 514,760,016 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ ಈವರೆಗೂ 6,266,165 ಮಂದಿ ಪ್ರಾಣ ಬಿಟ್ಟಿದ್ದಾರೆ. 469,488,566 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇನ್ನೂ 39,005,285 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
      11:27 PM, 4 May

      ಕರ್ನಾಟಕದಲ್ಲಿ ಒಂದೇ ದಿನ 148 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1801ಕ್ಕೆ ಏರಿಕೆಯಾಗಿದೆ.
      12:17 AM, 4 May

      ಕಳೆದ ಏಪ್ರಿಲ್ 28ರ 2022ರ ಪ್ರಕಾರ, ಭಾರತದಲ್ಲಿ ಕೊರೊನಾವೈರಸ್ ಸೋಂಕಿನಿಂದ ಒಟ್ಟು 5,23,693 ಜನರು ಪ್ರಾಣ ಬಿಟ್ಟಿದ್ದಾರೆ ಎಂದು CRS ವರದಿ ಮಾಡಿದೆ
      7:28 PM, 3 May

      ಕರ್ನಾಟಕದಲ್ಲಿ ಒಂದೇ ದಿನ 107 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1815ಕ್ಕೆ ಏರಿಕೆಯಾಗಿದೆ.
      12:51 PM, 3 May

      ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2568 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಒಟ್ಟಾರೆ ಕೋವಿಡ್ ಪ್ರಕರಣಗಳ ಸಂಖ್ಯೆ 4,30,84,913ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 19,137ಕ್ಕೆ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ 363 ಪ್ರಕರಣಗಳು ಕಡಿಮೆಯಾಗಿವೆ.
      9:36 AM, 2 May

      ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,157 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಾಗಿವೆ. ಇದು ನಿನ್ನೆಗಿಂತ 5% ಕಡಿಮೆಯಾಗಿದೆ. ಇದು ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 4,30,82,345ಕ್ಕೆ ಏರಿಕೆಯಾಗಿದೆ. ಭಾರತದ ಸಕ್ರಿಯ ಪ್ರಕರಣ 19,500 ಆಗಿದ್ದು, ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳು 408ರಷ್ಟು ಹೆಚ್ಚಾಗಿದೆ.
      10:06 PM, 1 May

      ಕೋವಿಡ್ ಸೋಂಕಿಗೆ ಒಬ್ಬರು ಬಲಿಯಾಗಿದ್ದು, ಈವರೆಗೆ ರಾಜ್ಯದಲ್ಲಿ ಸೋಂಕಿನಿಂದ 40060 ಮಂದಿ ಸಾವನ್ನಪ್ಪಿದ್ದಾರೆ.
      10:05 PM, 1 May

      ರಾಜ್ಯದಲ್ಲಿ ಇಂದು 108 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟು ಚೇತರಿಕೆ ಪ್ರಮಾಣ 3905844 ಆಗಿದೆ.
      10:01 PM, 1 May

      ಕರ್ನಾಟಕ ರಾಜ್ಯದಲ್ಲಿ ಇಂದು 104 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3947726ಕ್ಕೆ ಏರಿಕೆ ಕಂಡಿದೆ.
      READ MORE

      English summary
      COVID-19 Vaccination in India Live Updates in Kannada: coronavirus vaccine programmes launched in India by PM Narendra Modi as vaccination drive on Jan 16.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X