• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
LIVE

Covid-19 in India Live Updates: ಕರ್ನಾಟಕದಲ್ಲಿ 24 ಗಂಟೆಗಳಲ್ಲಿ 31,830 ಮಂದಿಗೆ ಕೊರೊನಾವೈರಸ್ ಸೋಂಕು

|

ನವದೆಹಲಿ, ಏಪ್ರಿಲ್ 27: ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಫೆಬ್ರವರಿ ತಿಂಗಳ ನಂತರ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಒಂದು ವರ್ಷದ ನಂತರ ಮತ್ತೆ ಕೊರೊನಾ ಅಲೆ ಆರಂಭವಾಗಿದ್ದು, ಮಾರ್ಚ್ ತಿಂಗಳಿನ ಮಧ್ಯದಿಂದ ಪ್ರಕರಣಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಹತ್ತು ರಾಜ್ಯಗಳಲ್ಲಿ ಅತಿ ಹೆಚ್ಚಿನ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ.

ಇದರೊಂದಿಗೆ ಲಸಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ. ಮಾರ್ಚ್ 1ರಿಂದ 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಏಪ್ರಿಲ್ ತಿಂಗಳಿನಿಂದ 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲು ಆರಂಭಿಸಲಾಗಿದೆ. ಸದ್ಯಕ್ಕೆ ಲಾಕ್‌ಡೌನ್ ಮಾಡುವುದಿಲ್ಲ. ಆದರೆ ಸೋಂಕು ಹೆಚ್ಚಿರುವ ಕಡೆಗಳಲ್ಲಿ ಸ್ಥಳೀಯ ಕಂಟೇನ್ಮೆಂಟ್ ವಲಯಗಳನ್ನು ಸೃಷ್ಟಿಸುವುದಾಗಿ ತಿಳಿಸಿದೆ.

Newest First Oldest First
11:44 PM, 27 Apr
ದೆಹಲಿ ಸರಕಾರ ಅಶೋಕ್ ಹೋಟೆಲ್‌ನ 100 ಕೋಣೆಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಲಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
11:21 PM, 27 Apr
ಛತ್ತೀಸ್‌ಗಢ್‌ನಲ್ಲಿ 14,893 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 236 ಜನರು ಮೃತಪಟ್ಟಿದ್ದಾರೆ. 14,434 ಜನರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.
10:50 PM, 27 Apr
ದೆಹಲಿಯ ಕೋವಿಡ್ ಪ್ರಕರಣಗಳ ಸಂಖ್ಯೆ
10:23 PM, 27 Apr
ಅಸ್ಸಾಂನಲ್ಲಿ 132 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 18 ಜನರು ಮೃತಪಟ್ಟಿದ್ದು, 955 ಜನರು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 19,923.
9:45 PM, 27 Apr
ಮಹಾರಾಷ್ಟ್ರದಲ್ಲಿ 66,358 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 24 ಗಂಟೆಯಲ್ಲಿ 895 ಜನರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,72,434ಕ್ಕೆ ಏರಿಕೆಯಾಗಿದೆ.
9:21 PM, 27 Apr
ಲಾಕ್ ಡೌನ್ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಬಿಎಂಟಿಸಿ 150 ಬಸ್‌ಗಳನ್ನು ಓಡಿಸಲಿದೆ. 96 ಮಾರ್ಗಗಳಲ್ಲಿ ಬೆಳಗ್ಗೆ 6 ರಿಂದ ಸಂಜೆ 7 ಗಂಟೆಯ ತನಕ ಏಪ್ರಿಲ್ 27 ರಿಂದ ಮೇ 12ರ ತನಕ ಬಸ್‌ಗಳನ್ನು ಓಡಿಸಲಾಗುತ್ತದೆ. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಉದ್ಯೋಗಿಗಳು ಈ ಸೇವೆ ಬಳಸಿಕೊಳ್ಳಬಹುದು.
8:55 PM, 27 Apr
16,403 ಹೊಸ ಕೋವಿಡ್ ಪ್ರಕರಣಗಳು ಪಶ್ಚಿಮ ಬಂಗಾಳದಲ್ಲಿ ದಾಖಲಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 7,76,345ಕ್ಕೆ ಏರಿಕೆಯಾಗಿದೆ. 73 ರೋಗಿಗಳು ಮೃತಪಟ್ಟಿದ್ದು, ಒಟ್ಟು ಸಂಖ್ಯೆ 11,082ಕ್ಕೆ ಏರಿಕೆಯಾಗಿದೆ.
8:27 PM, 27 Apr
ಕೊರೋನ ಕರ್ಫ್ಯೂ ಅಂಗವಾಗಿ ಮಂಗಳವಾರ ರಾತ್ರಿ 9 ಗಂಟೆಯಿಂದ ಮೇ 12 ರ ಬೆಳಗ್ಗೆ 6 ಗಂಟೆಯವರೆಗೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
8:03 PM, 27 Apr
ಕರ್ನಾಟಕದಲ್ಲಿ 24 ಗಂಟೆಗಳಲ್ಲಿ 31,830 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 180 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, ಇದೇ ಅವಧಿಯಲ್ಲಿ 10793 ಸೋಂಕಿತರು ಗುಣಮುಖರಾಗಿದ್ದಾರೆ
6:43 PM, 27 Apr
ರಾಜಸ್ಥಾನದಲ್ಲಿ ಒಂದೇ ದಿನ 16089 ಜನರಿಗೆ ಕೊವಿಡ್-19 ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 5,46,964ಕ್ಕೆ ಏರಿಕೆಯಾಗಿದೆ.
6:16 PM, 27 Apr
ಕೇರಳದಲ್ಲಿ ಒಂದೇ ದಿನ 32819 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,47,181ಕ್ಕೆ ಏರಿಕೆಯಾಗಿದೆ.
6:15 PM, 27 Apr
ಉತ್ತರಾಖಂಡದಲ್ಲಿ ಒಂದೇ ದಿನ 5703 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 43,032ಕ್ಕೆ ಏರಿಕೆಯಾಗಿದೆ.
5:24 PM, 27 Apr
ಅಸ್ಸಾಂನಲ್ಲಿ ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದ್ದು, ಈ ಆದೇಶವು ತಕ್ಷಣದಿಂದ ಜಾರಿಗೆ ಬರುತ್ತದೆ ಮತ್ತು ಮೇ 1 ರವರೆಗೆ ಜಾರಿಯಲ್ಲಿರುತ್ತದೆ.
5:15 PM, 27 Apr
ರೈಲ್ವೆ ಸಚಿವಾಲಯವು ಸುಮಾರು 4000 ಕೋವಿಡ್ ಆರೈಕೆ ತರಬೇತುದಾರರನ್ನು ನೇಮಕ ಮಾಡಿದೆ, ಸುಮಾರು 64,000 ಹಾಸಿಗೆಗಳು ರಾಜ್ಯಗಳ ಬಳಕೆಗೆ ಸಿದ್ಧವಾಗಿವೆ. ಪ್ರಸ್ತುತ 169 ಬೋಗಿಗಳನ್ನು ವಿವಿಧ ರಾಜ್ಯಗಳಿಗೆ ಹಸ್ತಾಂತರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
5:14 PM, 27 Apr
ರಾಜ್ಯಗಳ ಬೇಡಿಕೆಯಂತೆ ರೈಲ್ವೆ ಇಲಾಖೆ ಇಂದೋರ್ ಬಳಿಯ ನಾಗಪುರ, ಭೋಪಾಲ್, ತಿಹಿಯಲ್ಲಿ ಕೋವಿಡ್ ಆರೈಕೆ ತರಬೇತುದಾರರನ್ನು ಸಜ್ಜುಗೊಳಿಸಿದೆ. ನಾಗ್ಪುರದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮತ್ತು ನಾಗ್ಪುರ ಮಹಾನಗರ ಪಾಲಿಕೆಯ ಆಯುಕ್ತರ ನಡುವೆ 11 ಕೋವಿಡ್ ಆರೈಕೆ ತರಬೇತುದಾರರಿಗಾಗಿ ಒಪ್ಪಂದಕ್ಕೆ ಸಹಿ ಹಾಕಲಾಯಿತು: ರೈಲ್ವೆ ಸಚಿವಾಲಯ
5:12 PM, 27 Apr
ಹೊಸ ಕೋವಿಡ್-19 ಪ್ರಕರಣಗಳಲ್ಲಿ 10 ರಾಜ್ಯಗಳಲ್ಲಿ ಶೇ.69.1 ರಷ್ಟಿದೆ: ಆರೋಗ್ಯ ಸಚಿವಾಲಯ
3:05 PM, 27 Apr
ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ರೈತನೊಬ್ಬ ತನ್ನ ಮಗಳ ಮದುವೆಗೆ ಕೂಡಿಟ್ಟ 2ಲಕ್ಷ ಹಣವನ್ನು ಜೀವಸಂರಕ್ಷಕ ಆಮ್ಲಜನಕ ಖರೀದಿಸಲು ದಾನ ಮಾಡಿದ್ದಾರೆ.
1:20 PM, 27 Apr
ಉತ್ತರಾಖಂಡದಲ್ಲಿ ಕಳೆದ 25 ದಿನಗಳಿಂದ ಕುಂಭಮೇಳದಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ ತೀವ್ರವಾಗಿದೆ. ಮಾ.31 ರಿಂದ ಏ.24 ವರೆಗೆ ಕುಂಭಮೇಳಕ್ಕೆ ಭೇಟಿ ನೀಡುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ತತ್ಪರಿಣಾಮವಾಗಿ ಕೋವಿಡ್-19 ಸೋಂಕು ಪ್ರಸರಣ ಸಂಖ್ಯೆಯಲ್ಲಿಯೂ ಭಾರಿ ಏರಿಕೆ ಕಂಡಿದೆ.
12:00 PM, 27 Apr
ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ತೆರಳುವ ಪ್ರಯಾಣಿಕರ ವಿಮಾನಗಳಿಗೆ ಆಸ್ಟ್ರೇಲಿಯಾ ನಿರ್ಬಂಧ ವಿಧಿಸಿದೆ. ಮೇ 15ರವರೆಗೆ ಭಾರತದಿಂದ ಯಾವುದೇ ಪ್ರಯಾಣಿಕ ವಿಮಾನ ಆಸ್ಟ್ರೇಲಿಯಾಗೆ ಬರದಂತೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.
11:24 AM, 27 Apr
ಕೊರೊನಾ ಲಸಿಕೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ಸಿಕ್ಕಿದ್ದರಿಂದ ಉತ್ತೇಜಿತವಾಗಿರುವ ಭಾರತ್ ಬಯೋಟೆಕ್ ಕಂಪನಿ ಇದೀಗ ಇಂಟ್ರಾನೇಸಲ್ ಕೊರೊನಾ ಲಸಿಕೆಯ ಪ್ರಯೋಗವನ್ನು ಮುಂದುವರೆಸಿದೆ.
11:03 AM, 27 Apr
ಭಾರತದಲ್ಲಿನ ಕೋವಿಡ್ ಬಿಕ್ಕಟ್ಟಿನ ಕುರಿತು ಆಸ್ಟ್ರೇಲಿಯನ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವನ್ನು ಭಾರತ ಖಂಡಿಸಿದೆ. ಭಾರತ ಸರ್ಕಾರವು ಕೊರೊನಾ ಎರಡನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ, ಇಂತಹ ಸಂದರ್ಭದಲ್ಲಿ ಪ್ರಧಾನಿ ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ದೇಶ ಈ ಪರಿಸ್ಥಿತಿಗೆ ಬಂದಿದೆ, ಇನ್ನೂ ಸೋಂಕಿನ ಗಂಭೀರತೆ ಅರ್ಥಮಾಡಿಕೊಂಡಿಲ್ಲ ಎಂದು ಪತ್ರಿಕೆಯಲ್ಲಿ ಬರೆಯಲಾಗಿತ್ತು.
11:00 AM, 27 Apr
ಮಂಗಳವಾರ ಬೆಳಿಗ್ಗೆವರೆಗೂ ಭಾರತೀಯ ರೈಲ್ವೆಯಿಂದ 450 ಟನ್ ಆಮ್ಲಜನಕ ಪೂರೈಸಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
10:52 AM, 27 Apr
ಭಾರತದಲ್ಲಿ ಕೊರೊನಾ ಪ್ರಕರಣಗಳು ಆತಂಕಕಾರಿಯಾಗಿ ಏರಿಕೆಯಾಗುತ್ತಿರುವ ಕಾರಣ ಮೇ 15ರವರೆಗೂ ಭಾರತದಿಂದ ಆಗಮಿಸುವ ನೇರ ಪ್ರಯಾಣಿಕ ವಿಮಾನಗಳನ್ನು ಆಸ್ಟ್ರೇಲಿಯಾ ರದ್ದುಗೊಳಿಸಿದೆ.
10:50 AM, 27 Apr
ದೇಶದಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಚುನಾವಣಾ ವಿಜಯೋತ್ಸವ ಮೆರವಣಿಗೆಯನ್ನು ಚುನಾವಣಾ ಆಯೋಗ ರದ್ದುಗೊಳಿಸಿದೆ. ಮೇ 2 ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ವಿಜಯೋತ್ಸವಕ್ಕೆ ಆಯೋಗ ಬ್ರೇಕ್ ಹಾಕಿದೆ
10:49 AM, 27 Apr
ಕಾಂಗ್ರೆಸ್ ಹಿರಿಯ ನಾಯಕಿ ಹಾಗೂ ಮಾಜಿ ಸಂಸದೆ ಕರುಣಾ ಶುಕ್ಲಾ ಅವರು ಕೊರೊನಾ ಸೋಂಕಿನಿಂದ ಮಂಗಳವಾರ ಬೆಳಗ್ಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 70 ವರ್ಷವಾಗಿತ್ತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸೊಸೆಯೂ ಆಗಿದ್ದ ಅವರು ಛತ್ತೀಸ್‌ಗಡದಲ್ಲಿನ ರಾಯ್ಪುರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೊರೊನಾ ಸೋಂಕಿಗೆ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
10:23 AM, 27 Apr
ತೆಲಂಗಾಣದಲ್ಲಿ ಕಳೆದ 24 ಗಂಟೆಗಳಲ್ಲಿ 10,122 ಕೊರೊನಾ ಪ್ರಕರಣಗಳು ದಾಖಲಾಗಿವೆ. 6446 ಮಂದಿ ಗುಣಮುಖರಾಗಿದ್ದು, 52 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
10:22 AM, 27 Apr
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ ಹೆಚ್ಚಾಗುತ್ತಿದ್ದು, ಆಮ್ಲಜನಕ ಕೊರತೆಯಿಂದಾಗಿ ಸಾಕಷ್ಟು ರೊಗಿಗಳು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಜನರೇಟರ್‌ಗಳು, ಲಿಕ್ವಿಡ್ O2, ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಲಾಗುತ್ತಿದೆ. ಫ್ರಾನ್ಸ್ 8 ಅತ್ಯಧಿಕ, 2 ಸಾವಿರ ಮಂದಿಗೆ ಐದು ದಿನ ನೀಡಬಹುದಾದ ಲಿಕ್ವಿಡ್ ಆಕ್ಸಿಜನ್ , 28 ವೆಂಟಿಲೇಟರ್ಸ್ ಹಾಗೂ ಐಸಿಯುಗಳ ಉಪಕರಣಗಳನ್ನು ಒದಗಿಸುತ್ತಿದೆ.
9:45 AM, 27 Apr
ಭಾರತದಲ್ಲಿ 24 ಗಂಟೆಯಲ್ಲಿ 3,23,144ಹೊಸ ಕೋವಿಡ್ ಪ್ರಕರಣ ದಾಖಲು 24 ಗಂಟೆಯಲ್ಲಿ ಭಾರತದಲ್ಲಿ 2771 ಜನರು ಸಾವು, 2,51,827 ಜನರು ಡಿಸ್ಚಾರ್ಜ್ ಭಾರತದ ಒಟ್ಟು ಪ್ರಕರಣಗಳ ಸಂಖ್ಯೆ 1,76,36,307 ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 28,82,204
9:07 AM, 27 Apr
ರಾಜ್ಯದಲ್ಲಿ ಕಡಿಮೆ ನೌಕರರೊಂದಿಗೆ ಗಾರ್ಮೆಂಟ್‌ಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಬಿಸಿಐಸಿ ರಾಜ್ಯ ಸರ್ಕಾರವನ್ನು ಕೇಳಿಕೊಂಡಿದೆ.
9:06 AM, 27 Apr
ಮಹಾರಾಷ್ಟ್ರದಲ್ಲಿ ಮೇ 1ರವರೆಗೂ ಲಾಕ್‌ಡೌನ್ ಮುಂದುವರೆದಿದ್ದು, ಅಲ್ಲಿನ ಚಿತ್ರಣ ಹೀಗಿದೆ...
READ MORE

English summary
COVID-19 Vaccination in India Live Updates in Kannada: coronavirus vaccine programmes will begin in India with PM Narendra Modi launching the vaccination drive at 10.30 am on Jan 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X