• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕ ಬಿಟ್ಟರೆ ಭಾರತದಲ್ಲೇ ಹೆಚ್ಚು 'ಗಂಭೀರ' ಕೊರೊನಾ ಪ್ರಕರಣಗಳು

|
Google Oneindia Kannada News

ದೆಹಲಿ, ಜುಲೈ 7: ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ ಬಂದು ನಿಂತಿದೆ. ಅಮೆರಿಕ, ಬ್ರೆಜಿಲ್ ನಂತರ ಭಾರತವೇ ವಿಶ್ವದ ಕೊರೊನಾ ಹಾಟ್‌ಸ್ಪಾಟ್‌ ದೇಶವಾಗಿದೆ.

ಒಂದು ಹಂತದಲ್ಲಿ ಕೊರೊನಾ ವೈರಸ್‌ಗೆ ನಲುಗಿದ ಸ್ಪೇನ್, ಇಟಲಿ, ಫ್ರಾನ್ಸ್, ಜರ್ಮನಿ ಅಂತಹ ದೇಶಗಳಲ್ಲಿ ಈಗ ಹೊಸ ಕೇಸ್‌ಗಳು ಸಂಪೂರ್ಣವಾಗಿ ಇಳಿಮುಖ ಕಂಡಿದೆ. ಆದರೆ, ಭಾರತದಲ್ಲಿ ಈಗ ವೇಗ ಹೆಚ್ಚಿಸಿದೆ. ಹೊಸ ಕೇಸ್‌ಗಳ ಪಟ್ಟಿಯಲ್ಲಿ ಈಗ ಬ್ರೆಜಿಲ್ ಹಿಂದಿಕ್ಕಿರುವ ಭಾರತ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಒಂದೇ ದಿನ 22,252 ಕೇಸ್, ಭಾರತದಲ್ಲಿ 7 ಲಕ್ಷ ದಾಟಿದ ಕೊರೊನಾಒಂದೇ ದಿನ 22,252 ಕೇಸ್, ಭಾರತದಲ್ಲಿ 7 ಲಕ್ಷ ದಾಟಿದ ಕೊರೊನಾ

ಮತ್ತೊಂದಡೆ ಕೊವಿಡ್ ಗಂಭೀರ ಪ್ರಕರಣಗಳ ಪಟ್ಟಿಯಲ್ಲೂ ಭಾರತ ಆತಂಕಕಾರಿ ಸ್ಥಿತಿಯಲ್ಲಿದೆ. ಅಮೆರಿಕ ಬಿಟ್ಟರೆ ನಮ್ಮ ದೇಶದಲ್ಲಿ ಹೆಚ್ಚು ಗಂಭೀರ ಪ್ರಕರಣಗಳು ವರದಿಯಾಗಿದೆ. ಏನು ಹೇಳುತ್ತಿದೆ ಅಂಕಿ ಅಂಶಗಳು? ಮುಂದೆ ಓದಿ....

ಹೊಸ ಕೇಸ್‌ಗಳ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನ

ಹೊಸ ಕೇಸ್‌ಗಳ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನ

ಪ್ರಸ್ತುತ ಕೊರೊನಾ ವೈರಸ್ ಹೊಸ ಪ್ರಕರಣಗಳ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನಕ್ಕೆ ಜಿಗಿದಿದೆ. ಬ್ರೆಜಿಲ್ ದೇಶವನ್ನು ಹಿಂದಿಕ್ಕಿರುವ ಭಾರತ ಅಮೆರಿಕ ನಂತರದ ಸ್ಥಾನ ಪಡೆದುಕೊಂಡಿದೆ. ಬ್ರೆಜಿಲ್‌ನಲ್ಲಿ ನಿನ್ನೆ 21,486 ಹೊಸ ಕೇಸ್ ವರದಿಯಾಗಿದೆ. ಆದರೆ, ಭಾರತದಲ್ಲಿ 22,252ಕ್ಕೂ ಅಧಿಕ ಕೇಸ್ ದಾಖಲಾಗಿದೆ.

ಈಗಲೂ ಅಮೆರಿಕದಲ್ಲೇ ಹೆಚ್ಚು ಸೋಂಕು

ಈಗಲೂ ಅಮೆರಿಕದಲ್ಲೇ ಹೆಚ್ಚು ಸೋಂಕು

ಅಮೆರಿಕದಲ್ಲಿ ಈಗಲೂ ಹೊಸ ಕೇಸ್‌ಗಳ ಪ್ರಮಾಣದಲ್ಲಿ ಇಳಿಕೆ ಕಂಡಿಲ್ಲ. ದಿನದಿಂದ ದಿನಕ್ಕೆ ಯುಎಸ್‌ನಲ್ಲಿ ಸೋಂಕಿತರು ಹೆಚ್ಚುತ್ತಲೆ ಇದ್ದಾರೆ. ನಿನ್ನೆ ಅಮೆರಿಕದಲ್ಲಿ 50,586 ಜನರಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. ಪ್ರಸ್ತುತ ಜಗತ್ತಿನಲ್ಲಿ ಅತಿ ಹೆಚ್ಚು ಸೋಂಕು (3,040,833) ಹೊಂದಿರುವುದು, ಅತಿ ಹೆಚ್ಚು ಜನ ಸಾವನ್ನಪ್ಪಿರುವುದು (132,979) ಅಮೆರಿಕದಲ್ಲೇ.

ಅಮೆರಿಕದಲ್ಲಿ 30 ಲಕ್ಷ ಗಡಿ ದಾಟಿದ ಕೊರೊನಾ, ಎಷ್ಟು ಸಾವು?ಅಮೆರಿಕದಲ್ಲಿ 30 ಲಕ್ಷ ಗಡಿ ದಾಟಿದ ಕೊರೊನಾ, ಎಷ್ಟು ಸಾವು?

ಗಂಭೀರ ಪ್ರಕರಣದಲ್ಲಿ ಭಾರತಕ್ಕೆ ಎರಡನೇ ಸ್ಥಾನ

ಗಂಭೀರ ಪ್ರಕರಣದಲ್ಲಿ ಭಾರತಕ್ಕೆ ಎರಡನೇ ಸ್ಥಾನ

ವಿಶ್ವದಲ್ಲಿ 4,555,393 ಕೇಸ್‌ಗಳು ಆಕ್ಟಿವ್ ಆಗಿದೆ. ಅದರಲ್ಲಿ 57,978 ಜನರ ಸ್ಥಿತಿ ಗಂಭೀರವಾಗಿದೆ. ತೀವ್ರವಾಗಿ ಸೋಂಕಿಗೆ ತುತ್ತಾಗಿರುವ ಇವರು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಈ ಪೈಕಿ ಅಮೆರಿಕದಲ್ಲಿ (15,198) ಹೆಚ್ಚು ಗಂಭೀರ ಪ್ರಕರಣಗಳು ವರದಿಯಾಗಿದ್ದರೆ, ಭಾರತ (8,944) ಎರಡನೇ ಸ್ಥಾನದಲ್ಲಿದೆ.

ಭಾರತದಲ್ಲಿ ಒಟ್ಟು ಕೇಸ್ ಎಷ್ಟಿದೆ?

ಭಾರತದಲ್ಲಿ ಒಟ್ಟು ಕೇಸ್ ಎಷ್ಟಿದೆ?

ಭಾರತದಲ್ಲಿ ಇಲ್ಲಿಯವರೆಗೂ 7,19,665 ಜನರಿಗೆ ಕೊರೊನಾ ವೈರಸ್ ತಗುಲಿದೆ. ಅದರಲ್ಲಿ 4,39,948 ಜನರು ಗುಣಮುಖರಾಗಿದ್ದರೆ, 2,59,557 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 24 ಗಂಟೆಯಲ್ಲಿ 467 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈವರೆಗೂ ದೇಶದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 20,160ಕ್ಕೆ ಏರಿಕೆಯಾಗಿದೆ.

English summary
Coronavirus Pandemic: India on number two on new cases and serious cases in world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X