ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಿಕ್ಕಟ್ಟು: ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ವಿಸ್ತರಣೆ

|
Google Oneindia Kannada News

ನವದೆಹಲಿ, ಮಾರ್ಚ್ 27: ಕೊರೊನಾ ಬಿಕ್ಕಟ್ಟು ದೇಶದಲ್ಲಿ ಇನ್ನೂ ಮುಂದುವರೆದಿದ್ದು, ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಷೇಧವನ್ನು ಏಪ್ರಿಲ್ 14ರವರೆಗೆ ವಿಸ್ತರಣೆ ಮಾಡಲಾಗಿದೆ.

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೆಟ್ರೋ, ರೈಲು, ಅಂತರ್ ರಾಜ್ಯ ಬಸ್ ಸೇವೆ ಎಲ್ಲವನ್ನೂ ಸರ್ಕಾರ ನಿಲ್ಲಿಸಿದೆ. ಕ್ಯಾಬ್, ಆಟೋಗಳು, ಸ್ವಂತ ವಾಹನಗಳಲ್ಲಿ ಓಡಾಡುವುದಕ್ಕೂ ತಡೆ ಬಿದ್ದಿದೆ. ಹೀಗಾಗಿ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಏಪ್ರಿಲ್ 14ರವರೆಗೂ ಮುಂದೂ ನಾಗರಿಕ ವಿಮಾನ ಯಾನ ಸಚಿವಾಲಯ ನಿರ್ಧರಿಸಿದೆ.

Live Updates: ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿಗೆ 3ನೇ ಬಲಿLive Updates: ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿಗೆ 3ನೇ ಬಲಿ

ಸರಕುಸಾಗಣೆ ವಿಮಾನಗಳಿಗೆ ನಿಷೇಧ ಅನ್ವಯವಾಗುವುದಿಲ್ಲ ಎಂದು ತಿಳಿಸಿತ್ತು. ದೇಶೀಯ ವಿಮಾನ ಹಾರಾಟವನ್ನೂ ಮಾರ್ಚ್ 31ರವರೆಗೆ ನಿಷೇಧಿಸಿ ಆದೇಶಿಸಿತ್ತು. ದೇಶದಲ್ಲಿ ಇದುವರೆಗೆ ಕೊರೊನಾ ವೈರಸ್‌ನಿಂದ 17 ಮಂದಿ ಮೃತಪಟ್ಟಿದ್ದಾರೆ, 734 ಮಂದಿಗೆ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

Corona Crisis: Ban On International Flights Extended To April 14

ಭಾರತ ಆರಂಭದಲ್ಲೇ ಚೀನಾ, ಹಾಂಕಾಂಗ್ ಗೆ ವಿಮಾನ ಸೇವೆಯನ್ನು ನಿಷೇಧಿಸಿತ್ತು. ಬಳಿಕ ಯುರೋಪಿಯನ್ ರಾಷ್ಟ್ರಗಳಿಗೆ ನಿಷೇಧಿಸಿತ್ತು. ಆದರೆ ವಿದೇಶಿ ಪ್ರಯಾಣಿಕರು ಬರುತ್ತಿರುವ ಅಂಶಗಳನ್ನು ಪರಿಗಣಿಸಿ ಈ ಅಧ್ಯಯನವನ್ನು ತಯಾರಿಸಲಾಗಿದ್ದ ಕಾರಣ ಮುಂದೆ ದತ್ತಾಂಶಗಳು ಬದಲಾಗಬಹುದು.

ಕೇಂದ್ರ ಸರ್ಕಾರ ವಿಮಾನ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಯನ್ನು ಮಾರ್ಚ್ ಮೊದಲ ವಾರದಲ್ಲಿ ಆರಂಭಿಸಿತ್ತು. ಆದರೆ ಈ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಯಿಂದ ಪಾರಾಗಲು ವಿಮಾನ ಲ್ಯಾಂಡಿಂಗ್ ಆಗುವ ಮೊದಲ ಒಂದು ಗಂಟೆ ಪ್ರಯಾಣಿಕರು ಪ್ಯಾರಾಸಿಟಮೋಲ್ ಮಾತ್ರೆ ಸೇವಿಸುತ್ತಿದ್ದ ವಿಚಾರವೂ ಈಗ ಬೆಳಕಿಗೆ ಬಂದಿದೆ.

ಇದರ ಜೊತೆ ಗೃಹ ಬಂಧನದಲ್ಲಿರಬೇಕಾದ ವ್ಯಕ್ತಿಗಳು ಸಾರ್ವಜನಿಕವಾಗಿ ಓಡಾಡಿ ನಂತರ ಪಾಸಿಟಿವ್ ಬಂದಿದೆ. ಹೀಗಾಗಿ ಕೊರೊನಾ ಪೀಡಿತರ ಸಂಖ್ಯೆ ಭಾರತದಲ್ಲಿ ಮುಂದೆ ಇಟಲಿ, ಸ್ಪೇನ್, ಅಮೆರಿಕಂತೆ ಏರಿಕೆ ಆಗುತ್ತಾ ಅಥವಾ ಕಡಿಮೆ ಆಗುತ್ತಾ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

English summary
International flights will remain banned till April 14, the government announced on Thursday amid a complete national lockdown to fight coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X