ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಗೆ Anti-HIV ಡ್ರಗ್ಸ್ ಮದ್ದು: ಆರೋಗ್ಯ ಸಚಿವಾಲಯ ಶಿಫಾರಸ್ಸು!

|
Google Oneindia Kannada News

ಇಟಲಿಯ ದಂಪತಿ ಸೇರಿದಂತೆ ಒಟ್ಟು ಮೂವರ ಮೇಲೆ ಪ್ರಯೋಗ ಯಶಸ್ವಿಯಾಗಿರುವುದರಿಂದ, 60 ವರ್ಷ ಮೇಲ್ಪಟ್ಟ ಕೊರೊನಾ ಪೀಡಿತರಿಗೆ ಔಷಧಿಯಾಗಿ Anti-HIV ಡ್ರಗ್ಸ್ ನೀಡಬಹುದಾಗಿದೆ.

ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳ ಅನಾರೋಗ್ಯ ಸ್ಥಿತಿಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ಕೇಸ್ ಟು ಕೇಸ್ ಆಧಾರದ ಮೇಲೆ Lopinavir ಮತ್ತು Ritonavir ಒಳಗೊಂಡ Anti-HIV ಡ್ರಗ್ ಕಾಂಬಿನೇಶನ್ ಬಳಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಶಿಫಾರಸ್ಸು ಮಾಡಿದೆ.

ಪ್ರಯೋಗ ಫಲಪ್ರದ: ಕೊರೊನಾ ವೈರಸ್ ವಿರುದ್ಧ ಸೆಣಸಾಡಿ ಗೆದ್ದ Anti-HIV ಡ್ರಗ್ಸ್!ಪ್ರಯೋಗ ಫಲಪ್ರದ: ಕೊರೊನಾ ವೈರಸ್ ವಿರುದ್ಧ ಸೆಣಸಾಡಿ ಗೆದ್ದ Anti-HIV ಡ್ರಗ್ಸ್!

ನಿನ್ನೆ ಮಂಗಳವಾರ (ಮಾರ್ಚ್ 17) ಹೊರಡಿಸಲಾದ 'ಕ್ಲಿನಿಕಲ್ ಮ್ಯಾನೇಜ್ಮೆಂಟ್ ಆಫ್ ಕೋವಿಡ್-19' ಮಾರ್ಗಸೂಚಿಯಲ್ಲಿ ಕೊರೊನಾ ಸೋಂಕು ತಗುಲಿರುವ ಡಯಾಬಿಟೀಸ್, ಮೂತ್ರಪಿಂಡ ವೈಫಲ್ಯ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟ ಹೈ-ರಿಸ್ಕ್ ಇರುವ ರೋಗಿಗಳಿಗೆ Lopinavir ಮತ್ತು Ritonavir ಒಳಗೊಂಡ Anti-HIV ಡ್ರಗ್ಸ್ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.

ಏಮ್ಸ್ ನ ವೈದ್ಯರು, ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (NCDC) ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಒಳಗೊಂಡ ಸಮಿತಿ ಕೊರೊನಾ ಪೀಡಿತರ ಚಿಕಿತ್ಸೆಗೆ ಸಹಕಾರಿಯಾಗಲು ಮಾರ್ಗಸೂಚಿಗಳನ್ನು ಮರು ಪರಿಶೀಲಿಸಿದ್ದು, ಪರಿಷ್ಕೃತ ಮಾರ್ಗಸೂಚಿ ಹೊರಬಿದ್ದಿದೆ.

Anti-HIV ಡ್ರಗ್ಸ್ ಕೊಡಿ

Anti-HIV ಡ್ರಗ್ಸ್ ಕೊಡಿ

ಕೊರೊನಾ ಸೋಂಕಿತರಿಗೆ ಅಥವಾ ಶಂಕಿತರಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನಿರ್ದಿಷ್ಟ Anti-Viral ಗಳನ್ನು ಶಿಫಾರಸ್ಸು ಮಾಡಿಲ್ಲ. ಹೀಗಿರುವಾಗ, Hypoxia, Hypotension, Organ Dysfunction ನಿಂದ ಬಳಲುತ್ತಿರುವ ಕೊರೊನಾ ಪೀಡಿತರಿಗೆ Lopinavir ಮತ್ತು Ritonavir ಒಳಗೊಂಡ Anti-HIV ಡ್ರಗ್ಸ್ ನೀಡಲು ಆರೋಗ್ಯ ಸಚಿವಾಲಯ ಸೂಚಿಸಿದೆ.

ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಬಳಕೆ

ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಬಳಕೆ

Lopinavir ಮತ್ತು Ritonavir ಬಳಕೆಯಿಂದ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಕೆಲವೊಮ್ಮೆ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಬೇಕಾಗುತ್ತದೆ. ಹೀಗಾಗಿ, Lopinavir ಮತ್ತು Ritonavir ಅನ್ನು ತೀವ್ರ ಪ್ರಕರಣಗಳಿಗೆ ಸಹಾಯಕ ಚಿಕಿತ್ಸೆಯೊಂದಿಗೆ ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಬಳಸಬೇಕು ಎಂದು ಅರೋಗ್ಯ ಸಚಿವಾಲಯ ತಿಳಿಸಿದೆ. ಅಂದ್ಹಾಗೆ, HIV ಸೋಂಕನ್ನು ತಡೆಗಟ್ಟಲು Lopinavir ಮತ್ತು Ritonavir ಅನ್ನು ಬಳಸಲಾಗುತ್ತದೆ.

ಭಾರತದಲ್ಲಿ ಕೊರೊನಾ ಪೀಡಿತ ದಂಪತಿ ಮೇಲೆ anti-HIV ಡ್ರಗ್ಸ್ ಪ್ರಯೋಗಭಾರತದಲ್ಲಿ ಕೊರೊನಾ ಪೀಡಿತ ದಂಪತಿ ಮೇಲೆ anti-HIV ಡ್ರಗ್ಸ್ ಪ್ರಯೋಗ

Anti-HIV ಡ್ರಗ್ಸ್ ಪ್ರಯೋಗ ಯಶಸ್ವಿ

Anti-HIV ಡ್ರಗ್ಸ್ ಪ್ರಯೋಗ ಯಶಸ್ವಿ

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಭಾರತದಲ್ಲಿರುವ ಇಟಲಿಯ ದಂಪತಿ ಮೇಲೆ Anti-HIV ಡ್ರಗ್ಸ್ ಪ್ರಯೋಗ ಮಾಡಲಾಗಿದ್ದು, ಅದು ಫಲಪ್ರದವಾಗಿದೆ. ಕೊರೊನಾ ವೈರಸ್ ಸೋಂಕಿನಿಂದ ಕಂಗೆಟ್ಟಿದ್ದ ಇಟಲಿಯ ದಂಪತಿ Anti-HIV ಡ್ರಗ್ಸ್ ನಿಂದಾಗಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇಟಲಿಯ ದಂಪತಿಯ ಜೊತೆಗೆ ದುಬೈನಿಂದ ವಾಪಸ್ ಆಗಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 85 ವರ್ಷ ವಯಸ್ಸಿನ ವ್ಯಕ್ತಿಯ ಮೇಲೂ Anti-HIV ಡ್ರಗ್ಸ್ ಪ್ರಯೋಗಿಸಲಾಗಿದೆ. ಅಚ್ಚರಿ ಅಂದ್ರೆ, ಈ ವ್ಯಕ್ತಿಯೂ ಇದೀಗ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!

ಸಮಯೋಚಿತ ಚಿಕಿತ್ಸೆ ಅವಶ್ಯಕ

ಸಮಯೋಚಿತ ಚಿಕಿತ್ಸೆ ಅವಶ್ಯಕ

''ಕೊರೊನಾ ಸೋಂಕು ಪೀಡಿತರಲ್ಲಿ ಅನಾರೋಗ್ಯದ ತೀವ್ರತೆ ವಿವಿಧ ಹಂತಗಳಲ್ಲಿ ಕಾಣಿಸಿಕೊಳ್ಳಬಹುದು. ಬಹುಬೇಗ ಚಿಕಿತ್ಸೆ ಪಡೆದರೆ, ಸೋಂಕನ್ನು ತಡೆಗಟ್ಟಬಹುದು. ತೀವ್ರ ಅನಾರೋಗ್ಯಕ್ಕೀಡಾಗದವರು ಜಾಗರೂಕತೆ ವಹಿಸಿ ಮನೆಯಲ್ಲೇ ಇರಬಹುದು. ಆದ್ರೆ, ಆರೋಗ್ಯ ಪರಿಸ್ಥಿತಿ ಕೈಮೀರುವ ಮೊದಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಕೊರೊನಾ ಪೀಡಿತರಿಗೆ ಸಮಯೋಚಿತ, ಪರಿಣಾಮಕಾರಿ ಮತ್ತು ಸುರಕ್ಷಿತ ಚಿಕಿತ್ಸೆ ಅವಶ್ಯಕ'' ಎಂದು ಆರೋಗ್ಯ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?

English summary
Coronavirus: Health Ministry recommends anti-HIV drug combination on case to case basis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X