ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾದಲ್ಲಿ ಇಲ್ಲ ಕೊರೊನಾ ಭೀತಿ: ರಾಜ್ಯದ ಸರ್ಕಾರಿ ಕಚೇರಿಗಳೆಲ್ಲ ಓಪನ್!

|
Google Oneindia Kannada News

ವಾಸ್ಕೋ, ಏಪ್ರಿಲ್.13: ಭಾರತಕ್ಕೆ ಭಾರತವೇ ಕೊರೊನಾ ವೈರಸ್ ಭೀತಿಯಲ್ಲಿ ದಿನ ಕಳೆಯುತ್ತಿದ್ದರೆ ಗೋವಾದಲ್ಲಿ ಈಗಾಗಲೇ ಪರಿಸ್ಥಿತಿ ಹತೋಟಿಗೆ ಬಂದಂತೆ ಕಾಣುತ್ತಿದೆ. ದೇಶಾದ್ಯಂತ ಲಾಕ್ ಡೌನ್ ಘೋಷಣೆ ನಡುವೆ ಸರ್ಕಾರಯ ಎಲ್ಲ ಇಲಾಖೆಗಳ ಕಚೇರಿಗಳೆಲ್ಲ ಓಪನ್ ಆಗಿವೆ.

ದೇಶದ ಪುಟ್ಟ ರಾಜ್ಯ ಗೋವಾದಲ್ಲಿ ಸರ್ಕಾರಿ ಇಲಾಖೆಗಳು ಸೋಮವಾರದಿಂದ ಯಥಾಸ್ಥಿತಿಯಲ್ಲಿ ಕೆಲಸ ಆರಂಭಿಸಲಿವೆ. ಶೇ.50ರಷ್ಟು ಸಿಬ್ಬಂದಿಯನ್ನು ಬಳಸಿಕೊಂಡು ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಕಾರ್ಯಗಳನ್ನು ಮುಂದುವರಿಸಲು ಸರ್ಕಾರವು ತೀರ್ಮಾನಿಸಿದೆ.

ಅಮೆರಿಕಾಗೆ ತಲುಪಿತು ಭಾರತ ಕಳುಹಿಸಿದ ಕೊರೊನಾ ವೈರಸ್ ಔಷಧಿಅಮೆರಿಕಾಗೆ ತಲುಪಿತು ಭಾರತ ಕಳುಹಿಸಿದ ಕೊರೊನಾ ವೈರಸ್ ಔಷಧಿ

ಏಪ್ರಿಲ್.12ರಂದು ಈ ಸಂಬಂಧ ಜನರಲ್ ಅಡ್ಮಿನಿಸ್ಟ್ರೇಷನ್ ಡಿಪಾರ್ಟ್ ಮೆಂಟ್ ಸೆಕ್ರಟರಿ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಆದೇಶ ಹೊರಡಿಸಿದ್ದಾರೆ. ಅಗತ್ಯವಿರುವ ಸಿಬ್ಬಂದಿ ಮನೆಯಿಂದಲೇ ಕೆಲಸ ನಿರ್ವಹಿಸಲು ಅನುಮತಿ ನೀಡಿದ್ದು, ಅನಿವಾರ್ಯವಾಗಿ ಕಚೇರಿಗೆ ಆಗಮಿಸುವವರು ದಿನದ ಲೆಕ್ಕದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ.

Coronavireus: Goa Government Offices Resume Work From April.13

ಮೂರು ಶಿಫ್ಟ್ ಗಳಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಣೆ:

ಇನ್ನು, ಮೂರು ಶಿಫ್ಟ್ ಗಳಲ್ಲಿ ಸರ್ಕಾರಿ ಸಿಬ್ಬಂದಿ ಕೂಡಾ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಇದರ ಮಧ್ಯೆ ಕೊರೊನಾ ವೈರಸ್ ಹರಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಸಿಬ್ಬಂದಿ ನಡುವೆ ಸಾರ್ವಜನಿಕ ಅಂತರವನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಪದೇ ಪದೆ ಕೈಗಳನ್ನು ತೊಳೆದುಕೊಳ್ಳುವುದು, ಸ್ಯಾನಿಟೈಸರ್ ವ್ಯವಸ್ಥೆ, ಮುಖಕ್ಕೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಏಪ್ರಿಲ್.30ರವರೆಗೂ ಈ ಆದೇಶವು ಜಾರಿಯಲ್ಲಿ ಇರಲಿದೆ.

ದೇಶಾದ್ಯಂತ ಕೊರೊನಾ ವೈರಸ್ ದಾಳಿಗೆ 273 ಜನರು ಬಲಿಯಾಗಿದ್ದರೆ 8,447 ಮಂದಿ ಸೋಂಕಿತರಿದ್ದಾರೆ. ಆದರೆ ಗೋವಾದಲ್ಲಿ ಇದುವರೆಗೂ ಏಳು ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಐವರು ಗುಣಮುಖರಾಗಿದ್ದಾರೆ. ಉಳಿದ ಇಬ್ಬರು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

English summary
Coronavireus: Goa Government Offices Resume Work From April.13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X