ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಚಿತ ಪರೀಕ್ಷೆ: ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ಅಡ್ಡಿ?

|
Google Oneindia Kannada News

ನವದೆಹಲಿ, ಏಪ್ರಿಲ್ 9: ಕೊರೊನಾ ವೈರಸ್‌ಗೆ ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳು ಉಚಿತವಾಗಿ ಪರೀಕ್ಷೆ ಮಾಡಬೇಕು ಎಂದು ಹೇಳಿರುವ ಸುಪ್ರೀಂಕೋರ್ಟ್ ಸೂಚನೆಯಿಂದ ಮುಂಬರುವ ದಿನಗಳಲ್ಲಿ ಪರೀಕ್ಷೆಯಲ್ಲಿ ಇಳಿಮುಖ ಕಂಡುಬರಲಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Recommended Video

ಕೊನೆಗೂ ವಿಕ್ಟೋರಿಯಾ ಆಸ್ಪತ್ರೆ ಮುಂದೆ ಬಂತು ಟೈಟ್ ಸೆಕ್ಯೂರಿಟಿ..! Victoria Hospital Bangalore

ಭಾರತದಲ್ಲಿ ಈಗಾಗಲೇ ಸಾಕಷ್ಟು ವ್ಯವಹಾರಗಳಲ್ಲಿ ನಷ್ಟ ಉಂಟಾಗುತ್ತಿದೆ. ಹಾಗೆಯೇ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೂಡ ಆರ್ಥಿಕವಾಗಿ ಕಷ್ಟಪಡುತ್ತಿದೆ. ಹಣಕಾಸಿನ ನೆರವು ಇಲ್ಲದೆ ಉಚಿತವಾಗಿ ಪರೀಕ್ಷಿಸಿದರೆ ಕೆಲವೇ ದಿನಗಳಲ್ಲಿ ಪ್ರಯೋಗಾಲಯದಲ್ಲಿ ಸಿಬ್ಬಂದಿಗಳೇ ಇರದೆ ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಲಿದೆ.

ಮಾನವೀಯತೆ ದೃಷ್ಟಿಯಿಂದ ಕೋರ್ಟ್ ಹೇಳಿರುವುದು ಸತ್ಯ ಆದರೆ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಂಬಳ ನೀಡ ಬೇಕಲ್ಲ ಅದೆಲ್ಲಿಂದ ತರುವುದು ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ ಮುಂಜುಂದಾರ್ ಶಾ ಪ್ರಶ್ನಿಸಿದ್ದಾರೆ.

ಖಾಸಗಿ ಪ್ರಯೋಗಾಲಯದಲ್ಲಿ ದೊಡ್ಡ ಲಾಭವಿಲ್ಲ

ಖಾಸಗಿ ಪ್ರಯೋಗಾಲಯದಲ್ಲಿ ದೊಡ್ಡ ಲಾಭವಿಲ್ಲ

ಖಾಸಗಿ ಪ್ರಯೋಗಾಲಯದಲ್ಲಿ ದೊಡ್ಡ ಲಾಭವನ್ನಿಟ್ಟುಕೊಂಡು ಅವರು ಕೆಲಸ ಮಾಡುತ್ತಿಲ್ಲ, ಅಲ್ಲಿ ಕೆಲಸ ಮಾಡುವವರಿಗೆ ಸಂಬಳ ನೀಡಬೇಕಲ್ಲ ಆ ದೃಷ್ಟಿಯಿಂದ ಹಣ ಪಡೆಯುತ್ತಾರೆ.ಇದೀಗ ಉಚಿತವಾಗಿ ಪರೀಕ್ಷೆ ನಡೆಸಿದರೆ ಅವರಿಗೆ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು

ದೇಶದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು

ದೇಶದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕಿದೆ. 166 ಮಂದಿ ಇರುವರೆಗೆ ಮೃತಪಟ್ಟಿದ್ದಾರೆ. ಬುಧವಾರ ಒಂದೇ ದಿನದಲ್ಲಿ 460 ಹೊಸ ಪ್ರಕರಣಗಳು ದಾಖಲಾಗಿತ್ತು. ಸ್ಪೇನ್ ಹಾಗೂ ಇಟಲಿಗೆ ಹೋಲಿಸಿದರೆ ಈ ಸಂಖ್ಯೆಗಳು ಕಡಿಮೆ, ಆದರೆ ಹೆಚ್ಚಾಗುವ ಸಾಧ್ಯತೆ ಇದೆ.

ಸ್ಕ್ರೀನಿಂಗ್, ಮೂಲ ಸೌಕರ್ಯಗಳ ಅಭಿವೃದ್ಧಿ

ಸ್ಕ್ರೀನಿಂಗ್, ಮೂಲ ಸೌಕರ್ಯಗಳ ಅಭಿವೃದ್ಧಿ

ಸ್ಕ್ರೀನಿಂಗ್‌ಗಾಗಿ ಮೂಲಸೌಕರ್ಯಗಳನ್ನು ಬಲಪಡಿಸಲು, ಸರ್ಕಾರವು ನಡೆಸುವ 136 ಲ್ಯಾಬ್‌ಗಳ ಜೊತೆಗೆ 56 ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲು ಈಗಾಗಲೇ ಅನುಮತಿ ನೀಡಲಾಗಿದೆ. ಪ್ರತಿ ಪರೀಕ್ಷೆಗೆ 4,500 ರೂ. ನೀಡಬೇಕಾಗುತ್ತದೆ.

ಸ್ಲಂಗಳಿಗೆ ಹೋಗಲು ಆರೋಗ್ಯ ಕಾರ್ಯಕರ್ತರಿಗೆ ಭಯ

ಸ್ಲಂಗಳಿಗೆ ಹೋಗಲು ಆರೋಗ್ಯ ಕಾರ್ಯಕರ್ತರಿಗೆ ಭಯ

ಮುಂಬೈನಲ್ಲಿ 857 ಮಂದಿ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಧಾರಾವಿಯಲ್ಲಿ ಜನರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಆರೋಗ್ಯ ಕಾರ್ಯಕರ್ತರು ಅಲ್ಲಿಗೆ ಹೋಗಲು ಭಯ ಪಡುತ್ತಿದ್ದಾರೆ. ಯಾರೂ ಕೂಡ ಮುಂದೆ ಬರುತ್ತಿಲ್ಲ. ಹೀಗಿರುವಾಗ ಉಚಿತವಾಗಿ ಪರೀಕ್ಷೆ ಮಾಡಿ ಎಂದು ಹೇಳಿದರೆ ಕಷ್ಟವಾಗುತ್ತದೆ ಎಂದು ನಗರ ಹೆಲ್ತ್ ಇನ್‌ಸ್ಪೆಕ್ಟರ್‌ ಹೇಳಿದ್ದಾರೆ.

English summary
A decision by the Supreme Court to make testing for coronavirus free places an unfair financial burden on medical firms and could see a reduction in testing, already among the world's lowest, said business leaders and health experts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X