ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 6 ತಿಂಗಳಿನಲ್ಲೇ ಮಾಯವಾಗುತ್ತಾ ಕೊರೊನಾವೈರಸ್!?

|
Google Oneindia Kannada News

ನವದೆಹಲಿ, ಸಪ್ಟೆಂಬರ್ 15: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಮುಂದಿನ ಆರು ತಿಂಗಳಿನಲ್ಲಿ ಬಹುಪಾಲು ನಿಯಂತ್ರಣಕ್ಕೆ ಬರಲಿದೆ ಎಂದು ಸೂಕ್ಷ್ಮ ರೋಗಾಣುಶಾಸ್ತ್ರಜ್ಞ ಸುಜೀತ್ ಸಿಂಗ್ ಹೇಳಿದ್ದಾರೆ. ಕೊವಿಡ್-19 ಒಂದು ರೂಪಾಂತರವು ಮೂರನೇ ಅಲೆಯನ್ನು ಸೃಷ್ಟಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ಕೊರೊನಾವೈರಸ್ ಪಿಡುಗು ನಮ್ಮೆಲ್ಲ ನಿರೀಕ್ಷೆಗಳನ್ನು ಮೀರಿ ಬೆಳೆದಿರುವುದು ನಿಜ. ಆದರೆ, ಮುಂದಿನ ಆರು ತಿಂಗಳಿನಲ್ಲಿ ಪರಿಸ್ಥಿತಿ ಸ್ಥಳೀಯ ಮಟ್ಟಕ್ಕೆ ಇಳಿಯಲಿದೆ ಎಂದು ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಸುಜೀತ್ ಸಿಂಗ್ ತಿಳಿಸಿದ್ದಾರೆ. ಎನ್ ಡಿ ಟಿವಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

3ನೇ ಅಲೆ ಎನ್ನುವ ಪೆಡಂಭೂತ: ಸಿಹಿಸುದ್ದಿ ನೀಡಿದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ3ನೇ ಅಲೆ ಎನ್ನುವ ಪೆಡಂಭೂತ: ಸಿಹಿಸುದ್ದಿ ನೀಡಿದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ

ಕೊವಿಡ್-19 ಸ್ಥಳೀಯವಾಗುತ್ತಿದೆ ಎಂಬುದರ ಅರ್ಥ ಅದನ್ನು ನಾವು ಸಮರ್ಥವಾಗಿ ನಿರ್ವಹಿಸಬಹುದು ಹಾಗೂ ವಾಸ್ತವದ ಆರೋಗ್ಯ ಸೌಲಭ್ಯಗಳನ್ನು ಬಳಸಿಕೊಂಡು ನಿಯಂತ್ರಿಸಬಹುದು ಎಂದು ತಿಳಿಸಿದ್ದಾರೆ. "ಒಂದು ವೇಳೆ ಸೋಂಕಿನ ಹರಡುವಿಕೆ ಪ್ರಮಾಣ ಮತ್ತು ಸಾವಿನ ಸಂಖ್ಯೆ ಇಳಿಮುಖವಾದಲ್ಲಿ ನಾವು ಕೊವಿಡ್-19 ಸೋಂಕನ್ನು ನಿರ್ವಹಿಸಬಹುದು. ಕಳೆದ ಕೆಲ ವಾರಗಳ ಹಿಂದೆಯಷ್ಟೇ ಅತಿಹೆಚ್ಚು ಹೊಸ ಪ್ರಕರಪಣಗಳನ್ನು ವರದಿ ಮಾಡುತ್ತಿದ್ದ ಕೇರಳ ರಾಜ್ಯವನ್ನು ಉಹಾದರಣೆಯಾಗಿ ತೆಗೆದುಕೊಂಡು ಈ ಮಾತನ್ನು ಉಲ್ಲೇಖಿಸಿದ್ದಾರೆ.

ಕೊರೊನಾವೈರಸ್ ಲಸಿಕೆಯಿಂದ ಸುರಕ್ಷತೆ ಹೆಚ್ಚು

ಕೊರೊನಾವೈರಸ್ ಲಸಿಕೆಯಿಂದ ಸುರಕ್ಷತೆ ಹೆಚ್ಚು

ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವುದಕ್ಕೆ ಮತ್ತು ಸೋಂಕಿನ ಒತ್ತಡದಿಂದ ತಪ್ಪಿಸಿಕೊಳ್ಳುವುದಕ್ಕೆ ಲಸಿಕೆಯೊಂದೇ ಉತ್ತಮ ಮಾರ್ಗ ಎಂದು ಹೇಳಿದ್ದಾರೆ. ದೇಶದಲ್ಲಿ 75 ಕೋಟಿ ಮಂದಿ ಲಸಿಕೆ ಪಡೆದುಕೊಂಡಿದ್ದು, ಶೇ.70ರಷ್ಟು ಜನರು ಅಂದರೆ 50 ಕೋಟಿಗೂ ಅಧಿಕ ಮಂದಿಯಲ್ಲಿ ಪ್ರತಿಕಾಯ ಶಕ್ತಿ ಹೆಚ್ಚಾಗಿದೆ. ಒಂದು ಡೋಸ್ ಲಸಿಕೆ ಪಡೆದವರಲ್ಲಿ ಶೇ.30 ರಿಂದ 31ರಷ್ಟು ಪ್ರತಿಕಾಯ ಅದರಂತೆ 30 ಕೋಟಿ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಲಸಿಕೆ ಹಾಕಿಸಿಕೊಂಡ ಮಾತ್ರಕ್ಕೆ ಶಿಷ್ಟಾಚಾರ ಉಲ್ಲಂಘಿಸುವಂತಿಲ್ಲ

ಲಸಿಕೆ ಹಾಕಿಸಿಕೊಂಡ ಮಾತ್ರಕ್ಕೆ ಶಿಷ್ಟಾಚಾರ ಉಲ್ಲಂಘಿಸುವಂತಿಲ್ಲ

ಕೊವಿಡ್-19 ಲಸಿಕೆ ಪಡೆದುಕೊಂಡ ಮಾತ್ರಕ್ಕೆ ಸಾರ್ವಜನಿಕರು ಮಾರ್ಗಸೂಚಿಗಳನ್ನು ಮತ್ತು ಶಿಷ್ಟಾಚಾರಗಳನ್ನು ಉಲ್ಲಂಘನೆ ಮಾಡುವಂತ್ತಿಲ್ಲ. ಏಕೆಂದರೆ ಎರಡೂ ಡೋಸ್ ಲಸಿಕೆಯನ್ನು ಹಾಕಿಸಿಕೊಂಡ ಶೇ.20 ರಿಂದ 30ರಷ್ಟು ಜನರಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕೊರೊನಾವೈರಸ್ ಲಸಿಕೆಯನ್ನು ಪಡೆದ ಹೊರತಾಗಿಯೂ ಹೊಸ ರೂಪಾಂತರಗಳಿಂದ ಸೋಂಕು ಹರಡುತ್ತಿದೆ. ಏಕೆಂದರೆ ಲಸಿಕೆ ಪಡೆದುಕೊಂಡ ವ್ಯಕ್ತಿಯಲ್ಲಿ 70 ರಿಂದ 100 ದಿನಗಳ ನಂತರ ರೋಗನಿರೋಧಕ ಶಕ್ತಿಯು ಇಳಿಮುಖವಾಗುತ್ತಾ ಹೋಗುತ್ತದೆ ಎಂದು ಹೇಳಿದ್ದಾರೆ.

ಹೊಸ ರೂಪಾಂತರ ವೈರಸ್ ಭೀತಿ ಇಲ್ಲ ಎಂದ ಸುಜೀತ್ ಸಿಂಗ್

ಹೊಸ ರೂಪಾಂತರ ವೈರಸ್ ಭೀತಿ ಇಲ್ಲ ಎಂದ ಸುಜೀತ್ ಸಿಂಗ್

ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಗೆ ಕಾರಣವಾಗಬಲ್ಲಂತಹ ಯಾವುದೇ ಹೊಸ ರೂಪಾಂತರ ವೈರಸ್ ಪತ್ತೆಯಾಗಿಲ್ಲ. ಭಾರತದಲ್ಲಿ ಪ್ರಸ್ತುತ C.1.2 ಮತ್ತು Mu ತಳಿಗಳು ಹೆಚ್ಚಾಗಿ ಹರಡುತ್ತಿರುವುದು ಇತ್ತೀಚಿನ ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಹೊಸ ರೂಪಾಂತರದಿಂದ ಮೂರನೇ ಅಲೆಯು ಆರಂಭವಾಗುವ ಆತಂಕವಿಲ್ಲ. ಆದರೆ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಸಾರ್ವಜನಿಕರು ಸ್ವಲ್ಪ ಜಾಗೃತವಾಗಿರಬೇಕು ಎಂದು ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಸುಜೀತ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಪ್ರಮಾಣ

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಪ್ರಮಾಣ

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ಕಳೆದ 24 ಗಂಟೆಗಳಲ್ಲಿ 61,15,690 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 242 ದಿನಗಳಾಗಿದ್ದು, ಈವರೆಗೂ 75,89,12,277 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಲಿತ ಪ್ರದೇಶಗಳಿಗೆ ಈವರೆಗೂ 74,25,94,875 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಪೂರೈಕೆ ಎಷ್ಟಿದೆ?

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಪೂರೈಕೆ ಎಷ್ಟಿದೆ?

2021ರ ಸೆಪ್ಟೆಂಬರ್ 15ರ ಅಂಕಿ-ಅಂಶಗಳ ಪ್ರಕಾರ, 74,25,94,875 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕಳುಹಿಸಲಾಗಿರುವ ಲಸಿಕೆಯ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವ ಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.

* ಪೂರೈಕೆಯಾದ ಲಸಿಕೆ ಪ್ರಮಾಣ - 74,25,94,875

* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 1,80,83,000

* ಕೊವಿಡ್-19 ಲಸಿಕೆಯ ಲಭ್ಯತೆ - 4,62,75,955

ಕಳೆದೊಂದು ದಿನದಲ್ಲಿ 27,176 ಮಂದಿಗೆ ಕೊವಿಡ್-19

ಕಳೆದೊಂದು ದಿನದಲ್ಲಿ 27,176 ಮಂದಿಗೆ ಕೊವಿಡ್-19

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 27,176 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 38,012 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 284 ಜನರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಬುಧವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,33,16,755ಕ್ಕೆ ಏರಿಕೆಯಾಗಿದೆ. ಇದುವರೆಗೂ 3,25,22,171 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ ಬಲಿಯಾದವರ ಸಂಖ್ಯೆ 4,43,497 ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ದೇಶದಲ್ಲಿ 3,51,087 ಸಕ್ರಿಯ ಪ್ರಕರಣಗಳು ವರದಿಯಾಗಿವೆ.

English summary
Coronavirus Expected To Become Endemic In India In 6 Months: Health Body Chief Sujeet Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X