• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾದ 3ನೇ ಹಂತದಲ್ಲಿ ಭಾರತ: 5-10 ದಿನ ತುಂಬಾ ಎಚ್ಚರದಿಂದಿರಿ

|

ನವದೆಹಲಿ, ಮಾರ್ಚ್ 28: ಹೌದು ಈಗ ಭಾರತ ಕೊರೊನಾ ವೈರಸ್ ಭೀಕರತೆಯ 3ನೇ ಹಂತದಲ್ಲಿದೆ. ದೇಶದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ ಎಂದು ಡಾ. ಗಿರಿಧರ್ ಗ್ಯಾನಿ ಎಚ್ಚರಿಕೆ ನೀಡಿದ್ದಾರೆ.

ಗಿರಿಧರ್ ಕೊವಿಡ್ 19 ಆಸ್ಪತ್ರೆಗಳ ಟಾಸ್ಕ್ ಫೋರ್ಸ್ ಕನ್‌ವೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಸೋಸಿಯೇಷನ್ ಆಫ್‌ ಹೆಲ್ತ್ ಕೇರ್ ಸಂಸ್ಥಾಪಕರೂ ಆಗಿದ್ದಾರೆ.

ಮಾರ್ಚ್ 24ರಂದು ಪ್ರಧಾನಿ ಮೋದಿಯವರೊಂದಿಗೆ ನಡೆದ ವಿಡಿಯೋ ಸಂವಾದದ ಬಳಿಕ ಕೊವಿಡ್ 19 ಹಾಸ್ಪಿಟರ್ ಟಾಸ್ಕ್ ಫೋರ್ಸ್ ಆರಂಭವಾಯಿತು. ನೀತಿ ಆಯೋಗವು ಈ ಟಾಸ್ಕ್ ಫೋರ್ಸ್ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದೆ.

ಡಾ. ಗ್ಯಾನಿ ಅವರು ಕ್ವಾಲಿಟಿ ಮ್ಯಾನೇಜ್‌ಮೆಂಟ್‌ನಲ್ಲಿ ಪಿಎಚ್‌ಡಿ ಮಾಡಿದ್ದಾರೆ.ನಾವು ಕೊರೊನಾ 3ನೇ ಹಂತವನ್ನು ತಲುಪಿದ್ದೇವೆ. ಆದರೆ ತರಬೇತಿ ಹೊಂದಿರುವ ವೈದ್ಯಕೀಯ ಸಿಬ್ಬಂದಿಯಿಲ್ಲ ಎಂಬ ಮಾತುಗಳನ್ನು ಅವರು ಆಡಿದ್ದಾರೆ.

ಈಗ ಮೂರನೇ ಹಂತವನ್ನು ತಲುಪಿದ್ದೇವೆ. ಈಗ ನೇರವಾಗಿ ವಿದೇಶದಿಂದ ಬಂದಿರುವವರೊಂದಿಗೆ ಸಂಪರ್ಕ ಇಲ್ಲದವರಿಗೂ ಕೊರೊನಾ ಹರಡಿದೆ. ಇದು ಅತಿ ಕೆಟ್ಟ ಸಮಯ ಎಂದು ಹೇಳಿದ್ದಾರೆ.

ಮುಂದಿನ 5-10 ದಿನ ನಿರ್ಣಾಯಕ, ಕೊರೊನಾ ಕಡಿಮೆಯಾಗುವ ಹಂತಕ್ಕೆ ಬಂದಿದೆಯೇ ಅಥವಾ ಇನ್ನೂ ಹೆಚ್ಚಾಗುತ್ತದೋ ಎಂದು ತಿಳಿಯುವ ಸಮಯ ಇದಾಗಿದೆ. ಆದರೆ ಮುಂದಿನ ಒಂದು ವಾರ ತುಂಬಾ ಜಾಗರೂಕರಾಗಿರಬೇಕು ಎಂದು ತಿಳಿಸಿದ್ದಾರೆ.

English summary
Corona Enter to Stage 3 In India. next five to 10 days would be crucial to control the epidemic as those who are asymptomatic may start showing symptoms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X