ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪರಿಣಾಮ; ಬಾಸ್ಮತಿ ಅಕ್ಕಿ ರಫ್ತು ಇಳಿಕೆ

|
Google Oneindia Kannada News

ಬೆಂಗಳೂರು, ಮಾರ್ಚ್ 02 : ಕೊರೊನಾ ವೈರಸ್ ಪರಿಣಾಮ ಭಾರತೀಯ ಬಾಸ್ಮತಿ ಅಕ್ಕಿ ಮೇಲೆಯೂ ಉಂಟಾಗಲಿದೆ. ಹೌದು, ವಿವಿಧ ದೇಶಗಳು ಬಾಸ್ಮತಿ ಅಕ್ಕಿ ಆಮದನ್ನು ಕಡಿಮೆ ಮಾಡಿದ್ದು, ಇದರಿಂದಾಗಿ ಬೆಲೆ ಇಳಿಕೆಯಾಗಲಿದೆ.

ಇರಾನ್ ಈಗಾಗಲೇ ಭಾರತದ ಬಾಸ್ಮತಿ ಅಕ್ಕಿ ಆಮದು ಸ್ಥಗಿತಗೊಳಿಸಿದೆ. ಇದರಿಂದಾಗಿ ಈ ಆರ್ಥಿಕ ವರ್ಷದಲ್ಲಿ ಶೇ 18 ರಿಂದ 20ರಷ್ಟು ರಫ್ತು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇರಾನ್ ಮತ್ತು ಪಶ್ಚಿಮ ಏಷ್ಯಾದ ದೇಶಗಳೇ ಹೆಚ್ಚಾಗಿ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತಿದ್ದವು.

ಕೊರೊನಾ; 300ರ ಗಡಿದಾಟಿದ ಸಾವಿನ ಸಂಖ್ಯೆಕೊರೊನಾ; 300ರ ಗಡಿದಾಟಿದ ಸಾವಿನ ಸಂಖ್ಯೆ

ಕಳೆದ 5 ವರ್ಷಗಳಿಗೆ ಹೋಲಿಕೆ ಮಾಡಿದರೆ 2019-20ರಲ್ಲಿ ಬಾಸ್ಮತಿ ಅಕ್ಕಿಯ ಉತ್ಪಾದನೆ ಹೆಚ್ಚಿದೆ. 117 ಮಿಲಿಯನ್ ಟನ್ ಅಕ್ಕಿಯ ಉತ್ಪಾದನೆ ನಿರೀಕ್ಷೆ ಇದ್ದು, ಆರ್ಥಿಕ ವರ್ಷದ ಆರಂಭದಲ್ಲಿಯೇ ಆಮದು ಕಡಿಮೆಯಾಗಿದೆ.

ಕೊರೊನಾ ಜಾಗೃತಿಗಾಗಿ ಸಾರ್ವಜನಿಕ ಸಭೆಯಲ್ಲೇ ಚಿಕನ್ ಪೀಸ್ ತಿಂದ ಸಚಿವಕೊರೊನಾ ಜಾಗೃತಿಗಾಗಿ ಸಾರ್ವಜನಿಕ ಸಭೆಯಲ್ಲೇ ಚಿಕನ್ ಪೀಸ್ ತಿಂದ ಸಚಿವ

Coronavirus Effect Hits Indian Basmati Rice Export

2010 ರಿಂದ 2019ಕ್ಕೆ ಹೋಲಿಕೆ ಮಾಡಿದರೆ ಅಕ್ಕಿಯ ರಫ್ತು ಶೇ 14ರಷ್ಟು ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಕಾರಣ ಬಾಸ್ಮತಿ ಅಕ್ಕಿಯ ರಫ್ತಿನ ಪ್ರಮಾಣ ಕಡಿಮೆಯಾಗುವ ಆತಂಕ ಎದುರಾಗಿತ್ತು. ಈ ಕೊರೊನಾದಿಂದಾಗಿ ರಫ್ತು ಕಡಿಮೆಯಾಗಲಿದೆ.

ಕೊರೊನಾ ವೈರಸ್ ಎಫೆಕ್ಟ್: ಚಿಕನ್ ಮಾರುಕಟ್ಟೆ ತತ್ತರಕೊರೊನಾ ವೈರಸ್ ಎಫೆಕ್ಟ್: ಚಿಕನ್ ಮಾರುಕಟ್ಟೆ ತತ್ತರ

ಮಾರುಕಟ್ಟೆಯಲ್ಲಿ ಉತ್ತಮ ದರ್ಜೆಯ ಬಾಸ್ಮತಿ ಅಕ್ಕಿ ಕ್ವಿಂಟಾಲ್‌ಗೆ 3030 ರೂ. ಆಗಿತ್ತು. ಕೊರೊನಾ ವೈರಸ್ ಪರಿಣಾದ ಇರಾನ್ ಅಕ್ಕಿ ಆಮದು ಸ್ಥಗಿತಗೊಳಿಸಿದ್ದು, ಬೆಲೆ ಇಳಿಕೆಯಾಗುತ್ತಿದೆ. 4 ರಿಂದ 6 ವಾರದಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂದು ಅಂದಾಜಿಸಲಾಗಿದೆ.

ಮುಂಬೈನ ವರ್ತಕರು ಮುಂದಿನ 1 ರಿಂದ 2 ತಿಂಗಳಿನಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂಬ ಆಶಾಭಾವನೆ ಹೊಂದಿದ್ದಾರೆ. ಬ್ರೆಜಿಲ್ ಅಕ್ಕಿ ಮತ್ತು ಗೋಧಿಯನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿದರೆ ಬಾಸ್ಮತಿ ಅಕ್ಕಿಗೆ ಬೆಲೆ ಸಿಗಲಿದೆ.

English summary
Iran has stopped Indian basmati shipments due to coronavirus effect. Iran and the rest of West Asia account for the largest imports of Indian basmati rice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X