• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಯುದ್ಧಗಳ ಸಾವಿಗಿಂತಲೂ ಕೊರೊನಾ ಸಾವಿನ ಸಂಖ್ಯೆ ಹೆಚ್ಚು

|

ನವದೆಹಲಿ, ಸೆಪ್ಟೆಂಬರ್ 25: ಭಾರತದಲ್ಲಿ ಕೊರೊನಾ ವೈರಸ್ ಸಾವಿನ ಸಂಖ್ಯೆ 92,290ಕ್ಕೆ ಏರಿದೆ. ಪ್ರತಿದಿನ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ನೋಡಿದಾಗ ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಕೋವಿಡ್ ಸಂಬಂಧಿ ಮರಣಗಳ ಪ್ರಮಾಣ ಒಂದು ಲಕ್ಷ ದಾಟುವ ಸಾಧ್ಯತೆ ಇದೆ.

ಕೋವಿಡ್‌ನಿಂದ ಮೃತಪಟ್ಟ ಜನರ ಸಂಖ್ಯೆಯು ಭಾರತ ಇದುವರೆಗೆ ನಡೆಸಿದ ಪ್ರಮುಖ ಯುದ್ಧಗಳಲ್ಲಿ ಉಂಟಾದ ಜೀವ ಹಾನಿಗಿಂತಲೂ ಅಧಿಕ. 1947, 1961-1962, 1965, 1971 ಮತ್ತು 1999ರ ಯುದ್ಧಗಳಲ್ಲಿ ಮೃತಪಟ್ಟ ಸೈನಿಕರ ಸಂಖ್ಯೆಗಿಂತ ಏಳೂವರೆ ಪಟ್ಟು ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

4 ಮಗುವಿಗೆ ಜನ್ಮ ನೀಡಿದ ಕೋವಿಡ್ ಸೋಂಕಿತ ಮಹಿಳೆ: ಒಂದು ಮಗು ವೆಂಟಿಲೇಟರ್‌ನಲ್ಲಿ..!

ಕೋವಿಡ್ ಸಂಖ್ಯೆ ಅತ್ಯಧಿಕವಾಗಿರುವ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮರಣ ಪ್ರಮಾಣ ಕಡಿಮೆ ಇದೆ. ಆದರೆ ಒಟ್ಟಾರೆ ಸಂಖ್ಯೆಯನ್ನು ನೋಡಿದಾಗ ಭಾರತವು ಸೋಂಕಿತರು ಹಾಗೂ ಕೊರೊನಾ ವೈರಸ್ ಮರಣ ಸಂಖ್ಯೆಯಲ್ಲಿ ಅಮೆರಿಕವನ್ನು ಹಿಂದಿಕ್ಕುವ ಭೀತಿ ಮೂಡಿಸಿದೆ.

ಮೈಸೂರಲ್ಲಿ ಇನ್ನು ಮುಂದೆ ಮಾಸ್ಕ್ ಧರಿಸದಿದ್ದರೆ ಕಠಿಣ ಕ್ರಮ

   MamataBanerjee ಕೊಟ್ರು ಭರ್ಜರಿ ಉಡುಗೊರೆ | Oneindia Kannada

   ಅಮೆರಿಕದಲ್ಲಿ ಕೊರೊನಾ ವೈರಸ್ ಸಾವಿನ ಸಂಖ್ಯೆ ಎರಡು ಲಕ್ಷ ದಾಟಿದೆ. ಇದು ಜಗತ್ತಿನಲ್ಲಿಯೇ ಅತ್ಯಧಿಕ. ಜಗತ್ತಿನ ಜನಸಂಖ್ಯೆಯಲ್ಲಿ ಅಮೆರಿಕವು ಶೇ 4ರಷ್ಟು ಪಾಲು ಹೊಂದಿದೆ. ಆದರೆ ಕೊರೊನಾ ವೈರಸ್ ಸಂಬಂಧಿ ಮರಣ ಸಂಖ್ಯೆಯನ್ನು ಲೆಕ್ಕಹಾಕಿದರೆ ಅದು ವಿಶ್ವದ ಕೊರೊನಾ ವೈರಸ್ ಮರಣ ಸಂಖ್ಯೆಯ ಶೇ 20ರಷ್ಟಿದೆ.

   English summary
   India have crossed 92,000 coronavirus deaths on Sep 25. This is more than all our wars together.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X