ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಕೊವಿಡ್-19 ಕಥೆ

|
Google Oneindia Kannada News

ನವದೆಹಲಿ, ಜುಲೈ.07: ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾವೈರಸ್ ಭಾರತದಲ್ಲಿ ಲಗ್ಗೆಯಿಟ್ಟು ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ. ಕೊವಿಡ್-19 ಮಹಾಮಾರಿಯ ಹೊಡೆತಕ್ಕೆ ದಕ್ಷಿಣ ಭಾರತಕ್ಕೆ ದಕ್ಷಿಣ ಭಾರತವೇ ದಂಗು ಬಡಿದಂತೆ ಆಗಿದೆ.

Recommended Video

ಬೆಂಗಳೂರಿನಿಂದ ಬರುವವರಿಗೆ ಇಲ್ಲ ಪ್ರವೇಶ | Oneindia Kannada

ಭಾರತದಲ್ಲಿ ಒಂದೇ ದಿನ 22,252 ಮಂದಿಗೆ ಕೊರೊನಾವೈರಸ್ ಸೋಂಕಿತರು ಪತ್ತೆಯಾಗಿದ್ದು, ಇದುವರೆಗೂ ದೇಶದಲ್ಲಿ 7,19,665 ಜನರಿಗೆ ಕೊರೊನಾವೈರಸ್ ತಗಲಿರುವುದು ದೃಢಪಟ್ಟಿದೆ. 20,160 ಜನರು ಕೊರೊನಾವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ 4,39,948 ಜನರು ಗುಣಮುಖರಾಗಿದ್ದು, 2,59,557 ಕೊರೊನಾವೈರಸ್ ಸೋಂಕಿತರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಬ್ಬಬ್ಬಾ.. ಒಂದೇ ದಿನ ಕರ್ನಾಟಕದಲ್ಲಿ ಇಷ್ಟೊಂದು ಮಂದಿಗೆ ಸೋಂಕು!ಅಬ್ಬಬ್ಬಾ.. ಒಂದೇ ದಿನ ಕರ್ನಾಟಕದಲ್ಲಿ ಇಷ್ಟೊಂದು ಮಂದಿಗೆ ಸೋಂಕು!

ಕಳೆದ 24 ಗಂಟೆಯಲ್ಲಿ 467 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈವರೆಗೂ ದೇಶದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 20,160ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೂ 1,02,11,092 ಮಾದರಿಗಳನ್ನು ಪರೀಕ್ಷಿಸಲಾಗಿದೆ. ನಿನ್ನೆ ಒಂದೇ ದಿನ 2,41,430 ಜನರನ್ನು ಪರೀಕ್ಷೆ ಮಾಡಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಪ್ರಮಾಣ ರೀತಿಯಾಗಿದ್ದರೆ ದಕ್ಷಿಣ ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಹಲವು ರಾಜ್ಯಗಳನ್ನು ದಂಗು ಬಡಿಸಿದೆ. ಅದರಲ್ಲೂ ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ತೆಲಂಗಾಣ ಹಾಗೂ ಕೇರಳದಲ್ಲಿ ಕಂಡೀಷನ್ ಹೇಗಿದೆ ಎನ್ನುವುದರ ಕುರಿತು ವಿಶೇಷ ವರದಿ ಇಲ್ಲಿದೆ.

ಕೊರೊನಾವೈರಸ್ ಮಹಾಸ್ಫೋಟಕ್ಕೆ ಮಹಾರಾಷ್ಟ್ರ ಹೈರಾಣ

ಕೊರೊನಾವೈರಸ್ ಮಹಾಸ್ಫೋಟಕ್ಕೆ ಮಹಾರಾಷ್ಟ್ರ ಹೈರಾಣ

ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಮಹಾಸ್ಫೋಟ ಸಂಭವಿಸಿದೆ. ಒಂದೇ ದಿನ ರಾಜ್ಯದಲ್ಲಿ 5134 ಮಂದಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿದ್ದು, 224 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯು 2,17,121ಕ್ಕೆ ಏರಿಕೆಯಾಗಿದ್ದು, ಈ ಪೈಕಿ 1,18,558 ಮಂದಿ ಗುಣಮುಖರಾಗಿದ್ದಾರೆ. ಬಾಕಿ ಉಳಿದ 89,294 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 9250ಕ್ಕೆ ಏರಿಕೆಯಾಗಿದೆ.

ಕೊರೊನಾವೈರಸ್ ಅಟ್ಟಹಾಸಕ್ಕೆ ತಮಿಳುನಾಡು ತತ್ತರ

ಕೊರೊನಾವೈರಸ್ ಅಟ್ಟಹಾಸಕ್ಕೆ ತಮಿಳುನಾಡು ತತ್ತರ

ತಮಿಳುನಾಡಿನಲ್ಲಿ ಒಂದೇ ದಿನ 3616 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆಯು 1,18,594ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 65 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 1636ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 45,839 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ.

ಕೊರೊನಾವೈರಸ್ ಓಟಕ್ಕೆ ತೆಲಂಗಾಣದಲ್ಲೂ ಇಲ್ಲ ಕಡಿವಾಣ

ಕೊರೊನಾವೈರಸ್ ಓಟಕ್ಕೆ ತೆಲಂಗಾಣದಲ್ಲೂ ಇಲ್ಲ ಕಡಿವಾಣ

ತೆಲಂಗಾಣದಲ್ಲಿ ಇಂದು 11 ಸಾವುಗಳು ಮತ್ತು 1831 ಹೊಸ ಕೋವಿಡ್ -19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಒಟ್ಟು ಸಕಾರಾತ್ಮಕ ಪ್ರಕರಣಗಳ ಸಂಖ್ಯೆ 25,733 ಆಗಿದ್ದು, ಇದರಲ್ಲಿ 10,646 ಸಕ್ರಿಯ ಪ್ರಕರಣಗಳು, 14,781 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಮತ್ತು 306 ಮಂದಿ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ಕೊರೊನಾವೈರಸ್ ರಣಕೇಕೆ

ಕರ್ನಾಟಕದಲ್ಲಿ ಕೊರೊನಾವೈರಸ್ ರಣಕೇಕೆ

ರಾಜ್ಯದಲ್ಲಿನ ಕೊರೊನಾವೈರಸ್ ಸೋಂಕಿತರ ಅಂಕಿ-ಸಂಖ್ಯೆಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ ಬರೋಬ್ಬರಿ 1498 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 26815ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನಿಂದ ಬಲಿಯಾಗುತ್ತಿರುವವರ ಸಂಖ್ಯೆಯೂ ಅದೇ ರೀತಿ ಏರಿಕೆಯಾಗುತ್ತಿದೆ. ಸೋಮವಾರ ಒಂದೇ ದಿನ ಮಹಾಮಾರಿಗೆ ರಾಜ್ಯದಲ್ಲಿ 15 ಮಂದಿ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 416ಕ್ಕೆ ಏರಿಕೆಯಾಗಿದೆ.

ಬೆಂಗಳೂರು ನಗರವೊಂದರಲ್ಲೇ 800 ಮಂದಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿದೆ. ಉಳಿದಂತೆ ದಕ್ಷಿಣ ಕನ್ನಡ 83, ಧಾರವಾಡ 57, ಕಲಬುರಗಿ 51, ಬೀದರ್ 51, ಮೈಸೂರು 49, ಬಳ್ಳಾರಿ 45, ರಾಮನಗರ 37, ಉತ್ತರ ಕನ್ನಡ 35, ಶಿವಮೊಗ್ಗ 33, ಮಂಡ್ಯ 29, ಉಡುಪಿ 28, ಹಾಸನ 26, ಬಾಗಲಕೋಟೆ 26, ರಾಯಚೂರು 23, ವಿಜಯಪುರ 20, ತುಮಕೂರು 16, ಕೊಡಗು 14, ಯಾದಗಿರಿ 10 ಮಂದಿಗೆ ಹಾಗೂ ದಾವಣಗೆರ, ಹಾವೇರಿ, ಕೋಲಾರ, ಚಾಮರಾಜನಗರ, ಚಿಕ್ಕಮಗಳೂರಿನಲ್ಲಿ ತಲಾ 6 ಮಂದಿಗೆ ಮಹಾಮಾರಿ ಅಂಟಿಕೊಂಡಿರುವುದು ದೃಢಪಟ್ಟಿದೆ.

ಕೇರಳದಲ್ಲಿ ಹಾವಳಿ ಎಬ್ಬಿಸಿರುವ ಕೊರೊನಾವೈರಸ್

ಕೇರಳದಲ್ಲಿ ಹಾವಳಿ ಎಬ್ಬಿಸಿರುವ ಕೊರೊನಾವೈರಸ್

ಕೇರಳದಲ್ಲೂ ಕೊರೊನಾವೈರಸ್ ಸೋಂಕು ಹರಡುವಿಕೆಯ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲೇ 272 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, 111 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ 5894ಕ್ಕೆ ಏರಿಕೆಯಾಗಿದೆ. 2411 ಸಕ್ರಿಯ ಪ್ರಕರಣಗಳಿದ್ದು, ಕೇರಳದಲ್ಲಿ 169 ಕೊರೊನಾವೈರಸ್ ಹಾಟ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ.

English summary
Coronavirus Condition In South India: Karnataka, Maharashtra, Tamil nadu, Kerala, Telangana Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X