ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 14 ದಿನದಲ್ಲೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಡಬಲ್!

|
Google Oneindia Kannada News

ನವದೆಹಲಿ, ಮೇ.21: ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಭಾರತ ಲಾಕ್ ಡೌನ್ 4.0 ನಡುವೆ ದೇಶದಲ್ಲಿ ಏರಿಕೆಯಾಗುತ್ತಿರುವ ಕೊವಿಡ್-19 ಸೋಂಕಿತರ ಸಂಖ್ಯೆ 1.12 ಲಕ್ಷದ ಗಡಿ ದಾಟಿದೆ.

Recommended Video

ಕರ್ನಾಟಕದಲ್ಲಿ ಒಂದೇ ದಿನಕ್ಕೆ 149 ಕೊರೊನಾ‌ ಕೇಸ್!! | Suresh Kumar

ಬುಧವಾರದ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 5,609 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1,06,750 ರಿಂದ 1,12,359ಕ್ಕೆ ಏರಿಕೆಯಾಗಿದೆ.

50 ದಿನ ಲಾಕ್‌ಡೌನ್, 30 ದಿನ ರಿಲ್ಯಾಕ್ಸ್: ಈ ಸೂತ್ರದಿಂದ ಕೊರೊನಾ ಓಡಿಸಬಹುದೆ?50 ದಿನ ಲಾಕ್‌ಡೌನ್, 30 ದಿನ ರಿಲ್ಯಾಕ್ಸ್: ಈ ಸೂತ್ರದಿಂದ ಕೊರೊನಾ ಓಡಿಸಬಹುದೆ?

ಬುಧವಾರ ಒಂದೇ ದಿನ ಭಾರತದಲ್ಲಿ 132 ಮಂದಿ ಕೊವಿಡ್-19ಗೆ ಬಲಿಯಾಗಿದ್ದು, ಮೃತರ ಸಂಖ್ಯೆ 3,435ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 3,134 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಎಲ್ಲ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.

ಪ್ರತಿದಿನವೂ ಮಹಾರಾಷ್ಟ್ರದಲ್ಲಿ ಕನಿಷ್ಠ 2,000 ಕೇಸ್

ಪ್ರತಿದಿನವೂ ಮಹಾರಾಷ್ಟ್ರದಲ್ಲಿ ಕನಿಷ್ಠ 2,000 ಕೇಸ್

ಭಾರತದಲ್ಲೇ ಅತಿಹೆಚ್ಚು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳಿರುವ ರಾಜ್ಯವೇ ಮಹಾರಾಷ್ಟ್ರ. ಈ ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಪ್ರತಿನಿತ್ಯ ಕನಿಷ್ಠ 2,000 ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯ ಶೇ.22ರಷ್ಟು ಸೋಂಕಿತ ಪ್ರಕರಣಗಳು ಕಳೆದ ನಾಲ್ಕು ದಿನಗಳಲ್ಲೇ ವರದಿಯಾಗಿವೆ. ಬುಧವಾರದ ಅಂಕಿ-ಅಂಶಗಳ ಪ್ರಕಾರ ಮಹಾರಾಷ್ಟ್ರದಲ್ಲಿ 39,297 ಸೋಂಕಿತ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ 10,318 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಈವರೆಗೂ 1,390 ಮಂದಿ ಪ್ರಾಣ ಬಿಟ್ಟಿದ್ದರೆ, 27,589 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ತಮಿಳುನಾಡಿನಲ್ಲೂ ಅಬ್ಬರಿಸಿದ ಕೊರೊನಾ ವೈರಸ್

ತಮಿಳುನಾಡಿನಲ್ಲೂ ಅಬ್ಬರಿಸಿದ ಕೊರೊನಾ ವೈರಸ್

ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕೊರೊನಾ ವೈರಸ್ ನಿಂದ ನಲುಗಿದ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ಬುಧವಾರ ರಾಜ್ಯದಲ್ಲಿ 743 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಕಳೆದ 17 ದಿನಗಳಲ್ಲಿ ಪ್ರತಿನಿತ್ಯ ಕನಿಷ್ಠ 400 ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು 13,191ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 88 ಇರುವುದು ಕೊಂಚ ನೆಮ್ಮದಿ ತಂದಿದೆ. ಉಳಿದಂತೆ ಇದುವರೆಗೂ ರಾಜ್ಯದಲ್ಲಿ 5,882 ಮಂದಿ ಗುಣಮುಖರಾಗಿದ್ದರೆ, ಉಳಿದ 7,221 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

11,000 ಕೊರೊನಾ ವೈರಸ್ ಸೋಂಕಿತರ ಗಡಿ ದಾಟಿದ ದೆಹಲಿ

11,000 ಕೊರೊನಾ ವೈರಸ್ ಸೋಂಕಿತರ ಗಡಿ ದಾಟಿದ ದೆಹಲಿ

ನವದೆಹಲಿಯಲ್ಲೂ ಕಳೆದ ಎರಡು ದಿನಗಳಿಂದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು 500ರ ಗಡಿ ದಾಟಿದೆ. ಬುಧವಾರ 543 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 11,088ಕ್ಕೆ ಏರಿಕೆಯಾಗಿದೆ. ಮೂರನೇ ಸ್ಥಾನದಲ್ಲಿರುವ ಗುಜರಾತ್ ನಲ್ಲಿ 12,539 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಶೇಕಡಾವಾರು ಏರಿಕೆ ಪ್ರಯಾಣದಲ್ಲಿ ಮಣಿಪುರ್(178%), ಅಸ್ಸಾಂ(20%), ಹಿಮಾಚಲ ಪ್ರದೇಶ(20%), ಛತ್ತೀಸ್ ಗಢ(14%), ಬಿಹಾರ(12%), ಉತ್ತರಾಖಂಡ್(10%) ರಾಜ್ಯಗಳಿವೆ.

13.5 ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಡಬಲ್!

13.5 ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಡಬಲ್!

ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಪ್ರತಿನಿತ್ಯ 4 ಸಾವಿರದ ಗಡಿ ದಾಟುತ್ತಿದೆ. ಒಂದು ಲಕ್ಷಣದ ಗಡಿ ದಾಟಿರುವ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಇಮ್ಮಡಿಯಾಗಲು ಈ ಮೊದಲು ಈ ಹಿಂದೆ ಸೋಂಕಿತರ ಸಂಖ್ಯೆ ಡಬಲ್ ಆಗುವುದಕ್ಕೆ 12.8 ದಿನ ಬೇಕಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ 1 ಲಕ್ಷವಿರುವ ಸೋಂಕಿತರ ಸಂಖ್ಯೆ 2 ಲಕ್ಷ ಆಗುವುದಕ್ಕೆ 13.5 ದಿನ ಅಂದರೆ 13 ದಿನ 12 ಗಂಟೆಗಳೇ ಸಾಕು

English summary
Coronavirus Cases Rise 1 Lakh To 2 Lakh In Just 14 Days In India: Data Release.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X