ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ತಿಂಗಳ ನಂತರ ಭಾರತ ಅತಿ ಕಡಿಮೆ ಕೊರೊನಾ ಪ್ರಕರಣ ಕಂಡ ವಾರವಿದು...

|
Google Oneindia Kannada News

ನವದೆಹಲಿ, ಜನವರಿ 18: ಭಾರತದಲ್ಲಿ ಈಗಾಗಲೇ ಕೊರೊನಾ ಸೋಂಕಿನ ವಿರುದ್ಧ ಲಸಿಕಾ ಕಾರ್ಯಕ್ರಮ ಆರಂಭಗೊಂಡಿದೆ. ಜೊತೆಗೆ ಈ ಜನವರಿ ತಿಂಗಳಿನಿಂದ ಭಾರತದಲ್ಲಿ ಕೊರೊನಾ ಸೋಂಕಿನ ದಿನನಿತ್ಯದ ಪ್ರಕರಣಗಳೂ ತಗ್ಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕಳೆದ ವರ್ಷದ ಜೂನ್ ನಿಂದ ಇದೇ ಮೊದಲ ಬಾರಿಗೆ ದೇಶದಲ್ಲಿ ಕೊರೊನಾ ವೈರಸ್ ದಿನನಿತ್ಯದ ಪ್ರಕರಣಗಳಲ್ಲಿ ಭಾರೀ ಇಳಿಕೆಯಾಗಿರುವುದಾಗಿ ತಿಳಿದುಬಂದಿದೆ. ವಾರದಿಂದೀಚೆಗೆ ದಿನನಿತ್ಯದ ಪ್ರಕರಣಗಳು ತಗ್ಗಿದ್ದು, ಲಸಿಕೆ ಕಾರ್ಯಕ್ರಮ ಆರಂಭಗೊಂಡಿರುವುದರಿಂದ ಪ್ರಕರಣಗಳು ಇನ್ನಷ್ಟು ತಗ್ಗುವ ಭರವಸೆಯನ್ನು ಇಲಾಖೆ ವ್ಯಕ್ತಪಡಿಸಿದೆ. ಮುಂದೆ ಓದಿ...

ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ? ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?

 ಜನವರಿ 12ರಿಂದ ಪ್ರಕರಣಗಳಲ್ಲಿ ಇಳಿಕೆ

ಜನವರಿ 12ರಿಂದ ಪ್ರಕರಣಗಳಲ್ಲಿ ಇಳಿಕೆ

ಭಾರತದಲ್ಲಿ ಜನವರಿ 12ರಂದು 12,584 ಪ್ರಕರಣಗಳು ಪತ್ತೆಯಾಗಿದ್ದು, ಇದು ಕಳೆದ ಜೂನ್ ತಿಂಗಳಿಂದಲೂ ದಾಖಲಾದ ದಿನನಿತ್ಯದ ಅತಿ ಕಡಿಮೆ ಪ್ರಕರಣ ಎನ್ನಲಾಗಿದೆ. ಜೊತೆಗೆ ಜನವರಿ 12ರಿಂದ ಆರಂಭವಾಗಿ ವಾರವಿಡೀ ದಿನನಿತ್ಯ ಕಡಿಮೆ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ. ಜನವರಿ 11ರಂದು 16,311, ಜನವರಿ 12ಕ್ಕೆ 12,584, ಜನವರಿ 13ಕ್ಕೆ 15,968, ಜನವರಿ 14ಕ್ಕೆ 16,946, ಜನವರಿ 15ಕ್ಕೆ 15,590, ಜನವರಿ 16ಕ್ಕೆ 15,158 ಹಾಗೂ ಜನವರಿ 17ಕ್ಕೆ 15,144 ಪ್ರಕರಣಗಳು ದಾಖಲಾಗಿವೆ.

 ಪ್ರಕರಣಗಳಲ್ಲಿ 14.73%ರಷ್ಟು ಇಳಿಕೆ

ಪ್ರಕರಣಗಳಲ್ಲಿ 14.73%ರಷ್ಟು ಇಳಿಕೆ

ಜನವರಿ 12ರಿಂದ ವಾರವಿಡೀ 20 ಸಾವಿರದ ಒಳಗೆ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದಕ್ಕೂ ಕಳೆದ ವಾರಕ್ಕೆ ಹೋಲಿಸಿದರೆ ಪ್ರಕರಣಗಳಲ್ಲಿ 14.73%ರಷ್ಟು ಇಳಿಕೆಯಾಗಿರುವುದು ಕಂಡುಬಂದಿದೆ. ಕಳೆದ ಹತ್ತು ದಿನಗಳಿಂದಲೂ ದೇಶದಲ್ಲಿ ದಿನನಿತ್ಯ ಇಪ್ಪತ್ತು ಸಾವಿರಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿದ್ದು, ಜನವರಿ ತಿಂಗಳಲ್ಲಿ ಇದುವರೆಗೂ ಎರಡು ದಿನಗಳಲ್ಲಿ, ಜನವರಿ 7 ಹಾಗೂ ಜನವರಿ 1ರಂದು ಇಪ್ಪತ್ತು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಇಲಾಖೆ ಮಾಹಿತಿ ನೀಡಿದೆ.

ನಮಗೆ ಕೋವ್ಯಾಕ್ಸಿನ್ ಬೇಡ; ಲಸಿಕೆ ಪಡೆಯಲು ದೆಹಲಿ ವೈದ್ಯರ ನಿರಾಕರಣೆನಮಗೆ ಕೋವ್ಯಾಕ್ಸಿನ್ ಬೇಡ; ಲಸಿಕೆ ಪಡೆಯಲು ದೆಹಲಿ ವೈದ್ಯರ ನಿರಾಕರಣೆ

 ಕೇರಳದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲು

ಕೇರಳದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲು

ದೇಶದ ಪ್ರಕರಣಗಳಲ್ಲಿ, ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 922 ಪ್ರಕರಣ ದಾಖಲಾಗಿದ್ದು, ಇದೇ ಗರಿಷ್ಠ ಪ್ರಕರಣ ಎನ್ನಲಾಗಿದೆ. ಮಧ್ಯ ಪ್ರದೇಶದಲ್ಲಿ 433 ಪ್ರಕರಣ ದಾಖಲಾಗಿದ್ದು, ಎರಡನೇ ಸ್ಥಾನದಲ್ಲಿದೆ.

 ತಗ್ಗಿದ ಮರಣ ಪ್ರಮಾಣ

ತಗ್ಗಿದ ಮರಣ ಪ್ರಮಾಣ

ಕೊರೊನಾ ಸೋಂಕಿನಿಂದ ಮೃತಪಟ್ಟ ಪ್ರಕರಣಗಳನ್ನು ನೋಡುವುದಾದರೆ, ಕಳೆದ ವಾರ ಸೋಂಕಿನಿಂದ 1,275 ಸಾವುಗಳು ಸಂಭವಿಸಿವೆ. ಅದಕ್ಕೂ ಹಿಂದಿನ ವಾರ 1,564 ಮರಣ ಸಂಖ್ಯೆ ದಾಖಲಾಗಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ, ವಾರದಲ್ಲಿ ಮರಣ ಪ್ರಮಾಣವು 18.47% ನಷ್ಟು ಇಳಿಕೆಯಾಗಿದೆ. ಕಳೆದ 23 ದಿನಗಳಿಂದಲೂ ದಿನನಿತ್ಯದ ಮರಣ ಪ್ರಮಾಣವು 300ಕ್ಕಿಂತ ಕಡಿಮೆ ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಸದ್ಯಕ್ಕೆ ಒಟ್ಟಾರೆ 10,557,985 ಪ್ರಕರಣಗಳು ದಾಖಲಾಗಿವೆ.

English summary
The country saw its lowest daily count of Covid-19 cases since June last-12,584 on January 12, according to the Union health ministry,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X