ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 40,000 ದಿಂದ 50,000ಕ್ಕೆ ಸೋಂಕಿತರ ಸಂಖ್ಯೆ ಏರಿಕೆಗೆ ನಾಲ್ಕೇ ದಿನ!

|
Google Oneindia Kannada News

ನವದೆಹಲಿ, ಮೇ.07: ವಿಶ್ವವ್ಯಾಪಿ ಹರಡಿರುವ ನೊವೆಲ್ ಕೊರೊನಾ ವೈರಸ್ ಭಾರತದಲ್ಲೂ ಶರವೇಗದಲ್ಲಿ ಹರಡುತ್ತಿದೆ. ಭಾರತ ಲಾಕ್ ಡೌನ್ ನಡುವೆಯೂ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

ಕಳೆದ ನಾಲ್ಕೇ ದಿನಗಳಲ್ಲಿ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 40,000 ದಿಂದ 50,000ಕ್ಕೆ ಏರಿಕೆಯಾಗಿದೆ. ನಾಲ್ಕು ದಿನಗಳಲ್ಲಿ 10,000ಕ್ಕೂ ಅಧಿಕ ಮಂದಿ ಕೊರೊನಾ ವೈರಸ್ ಬಲೆಗೆ ಸಿಲುಕಿದ್ದಾರೆ ಎಂದು ಅಂಕಿ-ಅಂಶಗಳು ಸ್ಪಷ್ಟವಾಗಿ ಹೇಳುತ್ತಿವೆ.

ಖಾಸಗಿ ವೈದ್ಯರನ್ನೇ ಬೆಚ್ಚಿ ಬೀಳಿಸುತ್ತೆ ಮಹಾರಾಷ್ಟ್ರದ ಹೊಸ ರೂಲ್ಸ್! ಖಾಸಗಿ ವೈದ್ಯರನ್ನೇ ಬೆಚ್ಚಿ ಬೀಳಿಸುತ್ತೆ ಮಹಾರಾಷ್ಟ್ರದ ಹೊಸ ರೂಲ್ಸ್!

ಜಾಗತಿಕ ಮಟ್ಟದಲ್ಲಿ ಪೆರು ಸೇರಿದಂತೆ 13 ರಾಷ್ಟ್ರಗಳಲ್ಲಿ ಇದುವರೆಗೂ 55,000ಕ್ಕಿಂತಲೂ ಅಧಿಕ ಮಂದಿಗೆ ನೊವೆಲ್ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಇನ್ನೊಂದೇ ದಿನದಲ್ಲಿ ಭಾರತ ಕೂಡಾ ಈ ರಾಷ್ಟ್ರಗಳ ಪಟ್ಟಿಗೆ ಸೇರುವ ಆತಂಕ ಎದುರಾಗಿದೆ.

ಕೊರೊನಾ ಸೋಂಕಿತರ ಏರಿಕೆ ಸಂಖ್ಯೆಯೇ ಅಚ್ಚರಿ

ಕೊರೊನಾ ಸೋಂಕಿತರ ಏರಿಕೆ ಸಂಖ್ಯೆಯೇ ಅಚ್ಚರಿ

ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ಲಾಕ್ ಡೌನ್ ಮೂಲಕ ಕಡಿವಾಣ ಹಾಕಲು ಮುಂದಾಗಿದ್ದರೂ ಸೋಂಕಿತರ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿದೆ. ಕಳೆದ ಒಂದೆರೆಡು ತಿಂಗಳಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 50,000ದ ಗಡಿ ದಾಟಿದೆ. ಕಳೆದ ನಾಲ್ಕೇ ದಿನಗಳಲ್ಲಿ 10,000 ಸೋಂಕಿತರ ಸಂಖ್ಯೆ ಏರಿಕೆ ಕಂಡು ಬಂದಿದೆ.

ಸೋಂಕಿತ ಪ್ರಕರಣಗಳ ದಿನಗಳು
03 - 100 14
100 - 1,000 14
1,000 - 10,000 16
10,000 - 50000 23
40,000 - 50000 04
ಭಾರತದ 7 ರಾಜ್ಯಗಳಲ್ಲಿ 3,000ಕ್ಕಿಂತ ಅಧಿಕ ಸೋಂಕಿತರು

ಭಾರತದ 7 ರಾಜ್ಯಗಳಲ್ಲಿ 3,000ಕ್ಕಿಂತ ಅಧಿಕ ಸೋಂಕಿತರು

ದೇಶದ 7 ರಾಜ್ಯಗಳಲ್ಲಿ 3,000ಕ್ಕಿಂತಲೂ ಅಧಿಕ ಮಂದಿ ಕೊರೊನಾ ವೈರಸ್ ಸೋಂಕಿತರಿದ್ದಾರೆ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರ, ಗುಜರಾತ್, ದೆಹಲಿ, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ, ಮತ್ತು ಉತ್ತರ ಪ್ರದೇಶ ರಾಜ್ಯಗಳು ಕೊರೊನಾ ವೈರಸ್ ದಾಳಿಗೆ ತತ್ತರಿಸಿವೆ.

ದೇಶದಲ್ಲಿ ಅತಿಹೆಚ್ಚು ಸೋಂಕಿತರಿರುವ ಟಾಪ್-10 ರಾಜ್ಯಗಳು

ದೇಶದಲ್ಲಿ ಅತಿಹೆಚ್ಚು ಸೋಂಕಿತರಿರುವ ಟಾಪ್-10 ರಾಜ್ಯಗಳು

ಭಾರತದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ದೇಶದಲ್ಲೇ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ಟಾಪ್-10 ರಾಜ್ಯಗಳ ಪಟ್ಟಿ ಇಲ್ಲಿದೆ ನೋಡಿ.

ರಾಜ್ಯ ಒಟ್ಟು ಪ್ರಕರಣ ಹೊಸ ಪ್ರಕರಣ ಒಟ್ಟು ಸಾವು(ಮೇ.06ರ ಪ್ರಕಾರ)
ಮಹಾರಾಷ್ಟ್ರ 16758 1233 651
ಗುಜರಾತ್ 6625 380 396
ನವದೆಹಲಿ 5532 428 65
ತಮಿಳುನಾಡು 4829 771 35
ರಾಜಸ್ಥಾನ 3224 129 93
ಮಧ್ಯಪ್ರದೇಶ 3138 89 185
ಉತ್ತರ ಪ್ರದೇಶ 2998 118 60
ಆಂಧ್ರ ಪ್ರದೇಶ 1777 60 36
ಪಂಜಾಬ್ 1526 75 27
ಪಶ್ಚಿಮ ಬಂಗಾಳ 1456 112 144
ಗುರುವಾರ ಒಂದೇ ದಿನ 3,561 ಮಂದಿಗೆ ಕೊರೊನಾ

ಗುರುವಾರ ಒಂದೇ ದಿನ 3,561 ಮಂದಿಗೆ ಕೊರೊನಾ

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,561 ಜನರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 52,952ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೂ ಮಹಾಮಾರಿಗೆ 1,783 ಮಂದಿ ಉಸಿರು ಚೆಲ್ಲಿದ್ದಾರೆ. 15,266 ಜನರು ಗುಣಮುಖರಾಗಿದ್ದರೆ, ಬಾಕಿ ಉಳಿದ 35,902 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಗುರುವಾರ ಒಂದೇ ದಿನ 1,084 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

English summary
Coronavirus Case Rise 40,000 To 50,000 In Just Four Days In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X