ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡುವಂತೆ ಅಮೆರಿಕ ಸಲಹೆ

|
Google Oneindia Kannada News

ನವದೆಹಲಿ. ಮೇ 4: ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದ್ದು, ದೇಶಾದ್ಯಂತ ಸಂಪೂರ್ಣ ಲಾಕ್‌ಡೌನ್ ಮಾಡುವಂತೆ ಸಲಹೆ ನೀಡಿದೆ.

ಈ ಬಗ್ಗೆ ಶ್ವೇತ ಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ.ಆಂಥೋನಿ ಫೌಸಿ ತಿಳಿಸಿದ್ದು, ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಹೆಚ್ಚು ಮಾಡುವಂತೆ ಸಲಹೆ ನೀಡಿದ್ದಾರೆ. ಭಾರತದಲ್ಲಿ ಪರಿಸ್ಥಿತಿ ಗಂಭೀರವಾಗಿದೆ, ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಕೊರತೆ ಹೆಚ್ಚಾಗಿದ್ದು, ಇತರೆ ರಾಷ್ಟ್ರಗಳು ಭಾರತಕ್ಕೆ ಬೆಂಬಲವಾಗಬೇಕಿದೆ ಎಂದು ಡಾ.ಫೌಸಿ ತಿಳಿಸಿದ್ದಾರೆ.

ಭಾರತದಲ್ಲಿನ 2 ಲಸಿಕೆ ಹೊರತುಪಡಿಸಿ ಭಾರತ ಬೇರೆ ರಾಷ್ಟ್ರಗಳಲ್ಲಿನ ಲಸಿಕೆಯನ್ನು ಖರೀದಿಸಬೇಕು. ಜೊತೆಗೆ ದೇಶಾದ್ಯಂತ ಮತ್ತೆ ಸಂಪೂರ್ಣ ಲಾಕ್‌ಡೌನ್ ಮಾಡುವುದು ಉತ್ತಮ ಎಂದು ತಿಳಿಸಿದ್ದಾರೆ.

Coronavirus 2nd Wave: US Advises Complete Lockdown In India

ಲಾಕ್‌ಡೌನ್ ಒಂದೇ ದಾರಿ ಎಂದ ರಾಹುಲ್ ಗಾಂಧಿ

ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಕಡಿಮೆಯಾಗಬೇಕೆಂದರೆ ಲಾಕ್‌ಡೌನ್ ಒಂದೇ ದಾರಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರಕ್ಕೆ ಇದು ಅರ್ಥವಾಗುವುದಿಲ್ಲ. ದೇಶದಲ್ಲಿ ಕೊರೊನಾ ಸಂಪೂರ್ಣವಾಗಿ ತೊಲಗಬೇಕೆಂದರೆ ಮತ್ತೆ ಫುಲ್ ಲಾಕ್‌ಡೌನ್ ಮಾಡಬೇಕು. ಈ ವೇಳೆ ಬಡವರಿಗೆ ನ್ಯಾಯ್ ಯೋಜನೆಯಡಿಯಲ್ಲಿ ಆರ್ಥಿಕ ಸಹಾಯ ಮಾಡಬೇಕು. ಕೇಂದ್ರ ಸರ್ಕಾರ ಅಮಾಯಕ ಜನರನ್ನು ಕೊಲ್ಲುತ್ತಿದೆ ಎಂದು ಟೀಕಿಸಿದ್ದಾರೆ.

Coronavirus 2nd Wave: US Advises Complete Lockdown In India

2019ರಲ್ಲಿ ಕಾಂಗ್ರೆಸ್ ನ್ಯಾಯ್ ಯೋಜನೆ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಇದರ ಅಡಿಯಲ್ಲಿ ಪ್ರತಿ ಕುಟುಂಬಕ್ಕೂ ವಾರ್ಷಿಕ 75 ಸಾವಿರ ರೂ. ನೀಡುವ ಬಗ್ಗೆ ತಿಳಿಸಿತ್ತು ಎಂದು ತಿಳಿಸಿದ್ದಾರೆ.

ಭಾರತ ಸರ್ಕಾರದ ಕಾರ್ಯತಂತ್ರ ಸಂಪೂರ್ಣ ಕೊರತೆಯಿಂದಾಗಿ ಲಾಕ್‌ಡೌನ್ ಈಗ ಏಕೈಕ ಆಯ್ಕೆಯಾಗಿದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಕೊರೊನಾ ವೈರಸ್ ಅನ್ನು ತಡೆಯಲು ಬೇರೆ ದಾರಿಯಿಲ್ಲದೆ ಈ ಹಂತವನ್ನು ತಲುಪಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

English summary
The US has expressed concern over the increasing number of coronavirus cases in India and Advises a complete lockdown across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X