ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮ್ಮುಖ ಪರಿಣಾಮ ಬೀರಲಿದೆ ಕೊರೊನಾ; ಮಕ್ಕಳೇ ಹುಷಾರ್ ಎನ್ನುತ್ತಿದ್ದಾರೆ ತಜ್ಞರು

|
Google Oneindia Kannada News

ನವದೆಹಲಿ, ಏಪ್ರಿಲ್ 5: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಮತ್ತೆ ಲಕ್ಷದ ಗಡಿ ದಾಟಿದ್ದು, ಏಪ್ರಿಲ್ 15-20ರವರೆಗೆ ಸೋಂಕಿನ ಪ್ರಮಾಣ ದುಪ್ಪಟ್ಟಾಗುವ ಸೂಚನೆಯನ್ನು ತಜ್ಞರು ನೀಡಿದ್ದಾರೆ. ಭಾನುವಾರ ಒಂದೇ ದಿನ ಭಾರತದಲ್ಲಿ 1,03,558 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸೋಂಕಿನ ಎರಡನೇ ಅಲೆ ಹೆಚ್ಚು ಆತಂಕ ತಂದೊಡ್ಡಿದೆ.

ಆದರೆ ಇನ್ನೂ ಆತಂಕ ತರುವ ವಿಷಯವೆಂದರೆ, ಎರಡನೇ ಅಲೆಯಲ್ಲಿ ಮಕ್ಕಳು ಸೋಂಕಿಗೆ ಹೆಚ್ಚೆಚ್ಚು ಒಳಗಾಗುತ್ತಿರುವುದು. ಈ ಬಾರಿ ಸೋಂಕು ಹಿಮ್ಮುಖವಾಗಲಿದೆ. ವಯಸ್ಕರಿಗಿಂತ ಮಕ್ಕಳು ಅತಿ ಬೇಗನೆ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ಮುಂಬೈ ರಿಲಯನ್ಸ್ ಹಾಗೂ ಫೋರ್ಟಿಸ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಸುಭಾಷ್ ರಾವ್ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಅವರು ಇನ್ನಷ್ಟು ಹೆಚ್ಚಿನ ಮಾಹಿತಿ ನೀಡಿದ್ದಾರೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸೋಂಕಿನ ಗುಣಲಕ್ಷಣವನ್ನೂ ವಿವರಿಸಿದ್ದಾರೆ. ಮುಂದೆ ಓದಿ...

 ಮಕ್ಕಳ ಕುರಿತು ಎಚ್ಚರಿಕೆ ನೀಡಿದ ವೈದ್ಯ

ಮಕ್ಕಳ ಕುರಿತು ಎಚ್ಚರಿಕೆ ನೀಡಿದ ವೈದ್ಯ

ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿ ಸೋಂಕಿನ ರೂಪಾಂತರವು ದುಪ್ಪಟ್ಟಾಗಿದೆ. ಈಗಿನ ಈ ರೂಪಾಂತರ ಹೆಚ್ಚು ಪರಿಣಾಮಕಾರಿಯಾಗಿದ್ದು, ಅತಿ ವೇಗವಾಗಿ ಜನರಿಗೆ ತಗುಲುತ್ತಿದೆ. ಬಹುಮುಖ್ಯವಾಗಿ ಮಕ್ಕಳಿಗೆ ಅತಿ ಬೇಗನೆ ಸೋಂಕು ತಗುಲುತ್ತಿದೆ.1ರಿಂದ 10ನೇ ವಯಸ್ಸಿನ ಮಕ್ಕಳಿಗೆ ಕೊರೊನಾ ತಗುಲುವ ಸಾಧ್ಯತೆ ಹೆಚ್ಚು ಎಂದು ಎಚ್ಚರಿಕೆ ನೀಡಿದ್ದಾರೆ. ಎಂದು ಎಚ್ಚರಿಕೆ ನೀಡಿದ್ದಾರೆ. ಮಕ್ಕಳಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಕುರಿತು ಹಲವು ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ಹಿಮ್ಮುಖವಾಗಿ ಪರಿಣಾಮ ಬೀರಲಿದೆ. ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳಿಗೆ ಈ ಸೋಂಕು ಬೇಗ ತಗುಲಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ; ಮಕ್ಕಳಲ್ಲಿ ಹೆಚ್ಚು ಪ್ರಕರಣಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ; ಮಕ್ಕಳಲ್ಲಿ ಹೆಚ್ಚು ಪ್ರಕರಣ

 ಮಕ್ಕಳಲ್ಲಿ ಯಾವ್ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ?

ಮಕ್ಕಳಲ್ಲಿ ಯಾವ್ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ?

ಕೊರೊನಾ ಮೊದಲ ಅಲೆಗಿಂತ ಎರಡನೆ ಅಲೆಯು ಮಕ್ಕಳಲ್ಲಿ ಹೆಚ್ಚಿನ ಪರಿಣಾಮ ಬೀರುವುದಾಗಿ ತಿಳಿದುಬಂದಿದೆ. ಮೊದಲು ಮಕ್ಕಳಲ್ಲಿ ಲಕ್ಷಣಗಳು ಕಾಣಿಸಿಕೊಂಡು, ಅವರಿಂದ ವಯಸ್ಕರಿಗೆ ಬೇಗ ತಗುಲಬಹುದಾಗಿದೆ. ಕೊರೊನಾ ಮೊದಲ ಅಲೆಯಲ್ಲಿ ಮಕ್ಕಳಿಗೆ ಲಕ್ಷಣಗಳಿಲ್ಲದೇ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಲಕ್ಷಣಗಳೊಂದಿಗೆ ಸೋಂಕು ಕಾಣಿಸಿಕೊಳ್ಳುತ್ತದೆ. ಜ್ವರ, ಶೀತ, ಒಣಕೆಮ್ಮು, ಬೇಧಿ, ವಾಂತಿ, ಊಟ ಸೇರದೇ ಇರುವುದು, ಸುಸ್ತು ಈ ಸಾಮಾನ್ಯ ಲಕ್ಷಣಗಳೊಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಉಸಿರಾಟದಲ್ಲಿಯೂ ತೊಂದರೆ ಕಾಣಿಸಿಕೊಳ್ಳುತ್ತದೆ ಎಂದು ವಿವರಿಸಿದ್ದಾರೆ.

 ಪೋಷಕರಿಗೆ ವೈದ್ಯರ ಸಲಹೆ

ಪೋಷಕರಿಗೆ ವೈದ್ಯರ ಸಲಹೆ

ಮಕ್ಕಳಲ್ಲಿ ಸೋಂಕು ಹೆಚ್ಚಾಗಲು ಪ್ರಮುಖ ಕಾರಣ ಎಂದರೆ, ಹೊರಗೆ ಹೆಚ್ಚು ಮಂದಿ ಸೇರಿ ಆಟ ಆಡುತ್ತಿರುವುದು. ಪ್ರಯಾಣ ಮಾಡುತ್ತಿರುವುದು. ಸೋಂಕಿನ ಕುರಿತು ಲಕ್ಷ್ಯ ಇಲ್ಲದೇ ಇರುವುದು. ಕೊರೊನಾ ತಡೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಎಂದಿದ್ದಾರೆ ವೈದ್ಯರು. ಮಕ್ಕಳಿಗೆ ಈ ಯಾವುದೇ ಲಕ್ಷಣ ಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಸೋಂಕು ಕಾಣಿಸಿಕೊಂಡ ಎರಡನೇ ದಿನಕ್ಕೆ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು ಎಂದು ಸಲಹೆ ನೀಡಿದ್ದಾರೆ.

ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಆರಂಭಿಸಿದ ಮಾಡೆರ್ನಾಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಆರಂಭಿಸಿದ ಮಾಡೆರ್ನಾ

"ಮಕ್ಕಳೇ ಸೂಪರ್‌ಸ್ಪ್ರೆಡರ್‌ಗಳಾಗಬಹುದು"

ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಯಾವುದೇ ಭಯ ಬೇಡ. ಹದಿನಾಲ್ಕು ದಿನಗಳ ಕಾಲ ಮನೆಯಲ್ಲೇ ಐಸೊಲೇಷನ್‌ನಲ್ಲಿರಲು ಸೂಚಿಸಲಾಗುತ್ತದೆ. ಮಕ್ಕಳು ಸೂಪರ್‌ ಸ್ಪ್ರೆಡರ್‌ಗಳಾಗಬಹುದು ಎಂಬ ಅಂಶವನ್ನು ಕೊರೊನಾ ಎರಡನೇ ಅಲೆಯಲ್ಲಿ ತಳ್ಳಿಹಾಕುವಂತಿಲ್ಲ ಎಂದು ತಿಳಿಸಿದ್ದಾರೆ. ಐದು ದಿನಗಳಿಗಿಂತ ಹೆಚ್ಚು ದಿನ ಜ್ವರ ಕಾಣಿಸಿಕೊಂಡರೆ ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ ಎಂದಿದ್ದಾರೆ.

English summary
Coronavirus 2nd wave in country is affecting children more than in first wave says pediatrician
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X