ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ Boredom ಕೊಲ್ಲುವ Corona Yuga ಬೋರ್ಡ್ ಗೇಮ್

|
Google Oneindia Kannada News

ವಿಶಾಖಪಟ್ಟಣಂ, ಜೂನ್ 12: ಕೊರೊನಾವೈರಸ್ ಮಹಾಮಾರಿ ಹರಡದಂತೆ ಎಲ್ಲೆಡೆ ಲಾಕ್ಡೌನ್ ವಿಧಿಸಿದ್ದರಿಂದ ಒಂದು ರೀತಿ ಎಲ್ಲೆಡೆ ಬೋರ್ ಡಂ ಸೃಷ್ಟಿಯಾಗಿದ್ದು ಸುಳ್ಳಲ್ಲ. ಆದರೆ, ಸಿಕ್ಕ ಸಮಯವನ್ನು ಸೂಕ್ತವಾಗಿ ಬಳಸಿಕೊಂಡು ಸೃಜನಾತ್ಮಕ ರೀತಿಯಲ್ಲಿ ತನ್ನ ಪ್ರತಿಭೆಯನ್ನು 10 ವರ್ಷದ ಬಾಲಕ ತೋರಿದ್ದಾನೆ.

ವಿಶಾಖಪಟ್ಟಣಂನ 10 ವರ್ಷದ ಬಾಲಕ ವೀರ್ ಕಶ್ಯಪ್ ಈ ಲಾಕ್ಡೌನ್ ಅವಧಿಯಲ್ಲಿ ಸಮಯ ಕಳೆಯಲು ಗೇಮ್ ಬೇಕೆನಿಸಿದೆ. ಬೇರೆಯವರು ಮಾಡಿರೋ ಗೇಮ್ ಗಿಂತ ತಾನೆ ಒಂದು ಗೇಮ್ ಯಾಕೆ ಸೃಷ್ಟಿಸಬಾರದು ಎಂದೆನಿಸಿದೆ. ಅದರಲ್ಲೂ ಸಮಕಾಲೀನ ಆಟವೊಂದನ್ನು ವೀರ್ ರಚಿಸಿದ್ದಾನೆ.

Corona Yuga: This board game created by a 10 year old captures the lockdown experience

ಈ ಹೊಸ ಬೋರ್ಡ್ ಗೇಮ್ ಗೆ "ಕೊರೊನಾ ಯುಗ'' ಎಂದು ಹೆಸರಿಟ್ಟಿದ್ದಾನೆ. ಕೊರೊನಾ ಅವಧಿಯಲ್ಲಿ ನಾಗರೀಕರ ಅನುಭವವನ್ನು ಇದರಲ್ಲಿ ದಾಖಲಿಸಬಹುದು. ವೈರಸ್ ವಿರುದ್ಧ ಹೋರಾಡುವುದು ಹೇಗೆ? ಯಾವ ರೀತಿ ಹೊಸ ಮಾದರಿ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂಬುದನ್ನು ಇದರಲ್ಲಿ ಆಟದ ಮೂಲಕ ಕಲಿಯಬಹುದು.

ಈ ಆಟಕ್ಕೆ ಇಂತಿಷ್ಟೇ ಜನರು ಬೇಕು ಎಂದೇನಿಲ್ಲ. ಎಷ್ಟು ಜನ ಆಟಗಾರರು ಬೇಕಾದರೂ ಒಮ್ಮೆಗೆ ಆಡಬಹುದು. ಪ್ರಿಂಟ್ ಆಗಿರುವ ಬೋರ್ಡ್ ಒಂದಿದ್ದರೆ ಸಾಕು, ದಾಳ ಹಾಗೂ ಕಾಯಿ ಇದ್ದರೆ ಪಗಡೆ ರೀತಿಯಲ್ಲಿ ಆಡಬಹುದು.

ಮಾಸ್ಕ್ ಧರಿಸುವುದು, ಕೈ ತೊಳಿಯುವುದು, ಸ್ಯಾನಿಟೈಸರ್ ಬಳಕೆ , ಗೃಹಬಳಕೆ ದಿನಸಿ ಖರೀದಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ನಿಯಮ ಮೀರಿದರೆ ಕಟ್ಟಬೇಕಾದ ದಂಡ ಎಲ್ಲವನ್ನು ಈ ಆಟ ಒಳಗೊಂಡಿದೆ.

ಇದಲ್ಲದೆ, ಯೋಗ ಅಭ್ಯಾಸ ಮಾಡಲು ಆಟವು ಪ್ರೇರೇಪಿಸುತ್ತದೆ. ಒಮ್ಮೆ ನಿಮಗೆ ರೋಗ ಲಕ್ಷಣ ಕಂಡು ಬಂದರೆ ಆಸ್ಪತ್ರೆಗೆ ದಾಖಲಿಸುವ ಪ್ರಕ್ರಿಯೆ ಬಗ್ಗೆಯೂ ಇದೆ.

Corona Yuga: This board game created by a 10 year old captures the lockdown experience

ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರ ಪುತ್ರ, ದೆಹಲಿಯ ಆರ್ಮಿ ಪಬ್ಲಿಕ್ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ವೀರ್ ತನ್ನ ಅಜ್ಜಿ, ಅಜ್ಜನ ಊರಿಗೆ ಹೋದಾಗ ಆಡಲು ಹೊರಗಡೆ ಮೈದಾನ ಇಲ್ಲದಿದ್ದಾಗ ಈ ಬೋರ್ಡ್ ಗೇಮ್ ಬಗ್ಗೆ ಆಲೋಚನೆ ಬಂದಿದೆ.

ಸಣ್ಣದಾಗಿ ಚಿತ್ರ ಬರೆದು ಆರಂಭಿಸಿದ ಈ ಆಟ ಈಗ ಉತ್ತಮ ರೀತಿಯಲ್ಲಿ ರೂಪುಗೊಂಡಿದೆ. ಈಗ ಈ ಆಟದ ಕಾಪಿರೈಟ್ ಪಡೆದುಕೊಂಡಿರುವ ವೀರ್ ಎಂಎಸ್ ಟೆಕ್ ಟೀಂ ಸಲ್ಯೂಷನ್ಸ್ ಜೊತೆ ಕಾರ್ಯ ನಿರ್ವಹಿಸುತ್ತಿದ್ದಾನೆ. ದೊಡ್ಡ ಮಟ್ಟದಲ್ಲಿ ಗೇಮಿಂಗ್ ಲೋಕಕ್ಕೆ ತನ್ನ ಕೊಡುಗೆ ನೀಡಲು ವೀರ್ ಮುಂದಾಗಿದ್ದಾನೆ. ಇದರಲ್ಲಿ ಬರುವ ಲಾಭವನ್ನು ಪಿಎಂ ಕೇರ್ಸ್ ಫಂಡ್ ಗೆ ನೀಡಲು ವೀರ್ ಕಶ್ಯಪ್ ಬಯಸಿದ್ದಾನೆ. (ಇಂಗ್ಲೀಷ್ ನಲ್ಲಿ ಓದಿ)

English summary
The outbreak of the coronavirus outbreak has kept all of us at home and this has led to boredom. Veer Kashyap, a ten year old boy from Visakhapatnam has created a board game called 'Corona Yuga'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X