ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಹೆಚ್ಚು ಕಾಲ ರಕ್ಷಣೆ ನೀಡುತ್ತದೆಯೇ? ಅಧ್ಯಯನ ಹೇಳುವುದಿದು...

|
Google Oneindia Kannada News

ನವದೆಹಲಿ, ಜುಲೈ 27: ಕೊರೊನಾ ಸೋಂಕಿನ ವಿರುದ್ಧ, ಸೋಂಕಿನಿಂದಲೇ ಉತ್ಪತ್ತಿಯಾದ ನೈಸರ್ಗಿಕ ರೋಗನಿರೋಧಕ ಶಕ್ತಿ ಸುದೀರ್ಘ ರಕ್ಷಣೆ ನೀಡುತ್ತದೆಯೇ ಅಥವಾ ಲಸಿಕೆಗಳು ಹೆಚ್ಚು ಕಾಲ ರಕ್ಷಣೆ ನೀಡುತ್ತವೆಯೇ ಎಂಬ ಚರ್ಚೆ ನಡುವೆ, ಲಕ್ನೋದಲ್ಲಿನ ವೈದ್ಯಕೀಯ ಕಾಲೇಜು ಅಧ್ಯಯನವೊಂದನ್ನು ನಡೆಸಿದೆ.

ಕೊರೊನಾ ಸೋಂಕಿನ ವಿರುದ್ಧ ಲಸಿಕೆಗಳು ದೀರ್ಘಕಾಲ ಉತ್ತಮ ರಕ್ಷಣೆ ನೀಡುತ್ತವೆ ಎಂದು ತಿಳಿಸಿದೆ. ಕೊರೊನಾ ರೋಗಿಯ ದೇಹದಲ್ಲಿ ರೂಪುಗೊಂಡ ನೈಸರ್ಗಿಕ ರೋಗನಿರೋಧಕ ಶಕ್ತಿ ಮೂರರಿಂದ ನಾಲ್ಕು ತಿಂಗಳುಗಳವರೆಗೆ ಇರುತ್ತದೆ. ಕ್ರಮೇಣ ತಗ್ಗುತ್ತಾ ಹೋಗುತ್ತದೆ. ಆದರೆ ಲಸಿಕೆಗಳು ದೀರ್ಘಕಾಲ ರಕ್ಷಣೆ ನೀಡುತ್ತವೆ ಎಂದು ಅಧ್ಯಯನ ಉಲ್ಲೇಖಿಸಿದೆ. ಕೊರೊನಾ ಲಸಿಕೆ ಸಂಬಂಧ ಇನ್ನಷ್ಟು ಮಾಹಿತಿಗಳನ್ನು ಈ ಅಧ್ಯಯನ ಪ್ರಚುರ ಪಡಿಸಿದೆ. ಮುಂದೆ ಓದಿ...

 ಎರಡು ಡೋಸ್ ಲಸಿಕೆ ಹಾಕಿಸಿಕೊಂಡರೆ ದೀರ್ಘಕಾಲ ರಕ್ಷಣೆ

ಎರಡು ಡೋಸ್ ಲಸಿಕೆ ಹಾಕಿಸಿಕೊಂಡರೆ ದೀರ್ಘಕಾಲ ರಕ್ಷಣೆ

ಸಂಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡವರು, ಅಂದರೆ ಅನುಮೋದಿತ ಕೊರೊನಾ ಲಸಿಕೆಗಳ ಎರಡೂ ಡೋಸ್ ತೆಗೆದುಕೊಂಡವರಲ್ಲಿ ಕೊರೊನಾ ವಿರುದ್ಧ ದೀರ್ಘಕಾಲ ಪ್ರತಿಕಾಯಗಳು ಇರುತ್ತವೆ ಎಂಬುದನ್ನು ಅಧ್ಯಯನ ಸಾಬೀತುಗೊಳಿಸಿದೆ.

ಕೊರೊನಾ ಸೋಂಕಿತ ತಾಯಿಯಿಂದ ಭ್ರೂಣಕ್ಕೆ ತೊಂದರೆಯೇ?; ವೈದ್ಯರಿಂದ ಸ್ಪಷ್ಟನೆಕೊರೊನಾ ಸೋಂಕಿತ ತಾಯಿಯಿಂದ ಭ್ರೂಣಕ್ಕೆ ತೊಂದರೆಯೇ?; ವೈದ್ಯರಿಂದ ಸ್ಪಷ್ಟನೆ

 ಆರೋಗ್ಯ ಕಾರ್ಯಕರ್ತರ ರಕ್ತ ಮಾದರಿಯ ಪರೀಕ್ಷೆ

ಆರೋಗ್ಯ ಕಾರ್ಯಕರ್ತರ ರಕ್ತ ಮಾದರಿಯ ಪರೀಕ್ಷೆ

ಉತ್ತರ ಪ್ರದೇಶದ ಲಕ್ನೋನಲ್ಲಿ ಸರ್ಕಾರದ ರಕ್ತ ಸಂಗ್ರಹ ವಿಭಾಗವು ಸೋಂಕಿನ ವಿರುದ್ಧ ದೇಹದಲ್ಲಿನ ಪ್ರತಿಕಾಯಗಳ ಉಪಸ್ಥಿತಿ ಕುರಿತು ಒಂದೂವರೆ ತಿಂಗಳ ಕಾಲ ಅಧ್ಯಯನ ನಡೆಸಿದ್ದು, ಈ ಅಧ್ಯಯನಕ್ಕಾಗಿ ಎರಡು ಸಾವಿರ ಆರೋಗ್ಯ ಕಾರ್ಯಕರ್ತರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತ್ತು.

 ಲಸಿಕೆಯಿಂದ ಪ್ರತಿಕಾಯಗಳ ಉತ್ಪತ್ತಿ

ಲಸಿಕೆಯಿಂದ ಪ್ರತಿಕಾಯಗಳ ಉತ್ಪತ್ತಿ

ಅಧ್ಯಯನದ ಭಾಗವಾಗಿ, ಹೆಚ್ಚು ನಿಖರ ಫಲಿತಾಂಶಗಳಿಗಾಗಿ ಎರಡೂ ಡೋಸ್ ಕೊರೊನಾ ಲಸಿಕೆ ಪಡೆದ ಮೂರು ತಿಂಗಳ ನಂತರ ಅಧ್ಯಯನಕ್ಕೆ ಒಳಪಟ್ಟವರ ಪ್ರತಿಕಾಯ ಮಟ್ಟವನ್ನು ಪರೀಕ್ಷಿಸಲಾಗಿದೆ. ಆಗ ಲಸಿಕೆಯಿಂದ ಪ್ರತಿಕಾಯ ಉತ್ಪತ್ತಿಯಾಗಿ ದೀರ್ಘಕಾಲ ರಕ್ಷಣೆ ನೀಡುವ ಸಂಗತಿ ತಿಳಿದುಬಂದಿದೆ ಎಂದು ವಿಭಾಗ ಮುಖ್ಯಸ್ಥ ಡಾ. ತುಲಿಕಾ ಚಂದ್ರ ತಿಳಿಸಿದ್ದಾರೆ.

ಕೋವಿಡ್‌ ಲಸಿಕೆ ನೀಡಿಕೆ ವೇಗ ಇಳಿಕೆ: ಜುಲೈ ಗುರಿ ತಪ್ಪುವ ಸಾಧ್ಯತೆಕೋವಿಡ್‌ ಲಸಿಕೆ ನೀಡಿಕೆ ವೇಗ ಇಳಿಕೆ: ಜುಲೈ ಗುರಿ ತಪ್ಪುವ ಸಾಧ್ಯತೆ

 90% ಮಂದಿಯಲ್ಲಿ ಪ್ರತಿಕಾಯ ಉತ್ಪತ್ತಿ

90% ಮಂದಿಯಲ್ಲಿ ಪ್ರತಿಕಾಯ ಉತ್ಪತ್ತಿ

ಅಧ್ಯಯನದ ಪ್ರಕಾರ, ಆಸ್ಪತ್ರೆಯಲ್ಲಿ ಪರೀಕ್ಷಿಸಿದ ಶೇ. 90ರಷ್ಟು ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ನೌಕರರಲ್ಲಿ ಪ್ರತಿಕಾಯಗಳ ಉತ್ಪತ್ತಿ ಕಂಡುಬಂದಿದೆ.
* ಈ ಪೈಕಿ 68% ಜನರು ಲಸಿಕೆಯ ಎರಡೂ ಡೋಸ್ ಪಡೆದಿದ್ದರೆ, 11% ಜನರು ಒಂದು ಡೋಸ್ ಲಸಿಕೆ ಪಡೆದಿದ್ದರು.
* ಲಸಿಕೆ ಪಡೆಯದ ಸುಮಾರು 11% ಮಂದಿಯಲ್ಲಿಯೂ ಪ್ರತಿಕಾಯ ಉತ್ಪತ್ತಿ ಕಂಡುಬಂದಿದೆ.
*ಎರಡೂ ಲಸಿಕೆ ಪಡೆದಿದ್ದ 5% ಮಂದಿಯಲ್ಲಿ ಯಾವುದೇ ಪ್ರತಿಕಾಯ ಉತ್ಪತ್ತಿ ಕಂಡುಬಂದಿಲ್ಲ.
* ಮೊದಲನೇ ಡೋಸ್ ಲಸಿಕೆ ಪಡೆದವರಲ್ಲಿ 2% ಮಂದಿಯಲ್ಲಿ ಪ್ರತಿಕಾಯ ಉತ್ಪತ್ತಿಯಾಗಿಲ್ಲ.
* ಎರಡೂ ಡೋಸ್ ಲಸಿಕೆ ಪಡೆದ 41% ಮಂದಿ ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾಗಿಲ್ಲ.
* ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡ 26% ಮಂದಿ ಮತ್ತೆ ಸೋಂಕಿಗೆ ತುತ್ತಾಗಿದ್ದಾರೆ.

English summary
A study conducted at Lucknow's King George's Medical College has found that vaccine gives better protection against Covid-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X