ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಕೊರೊನಾ ಲಸಿಕೆಗೆ ಪಟಾಕಿ ಸಿಡಿಸಿ, ಹೂವು ಚೆಲ್ಲಿ ಅದ್ಧೂರಿ ಸ್ವಾಗತ!

|
Google Oneindia Kannada News

ರಾಯಪುರ್, ಜನವರಿ.16: ಜಗತ್ತು ಎದುರು ನೋಡುತ್ತಿದ್ದ ಕೊರೊನಾ ಲಸಿಕೆಯು ಬಿಡುಗಡೆಯಾಗಿದೆ. ದೇಶಾದ್ಯಂತ ಈಗಾಗಲೇ ಹಲವು ರಾಜ್ಯಗಳಲ್ಲಿ ಲಸಿಕೆ ವಿತರಣೆಯೂ ನಡೆದಿದೆ. ಇದರ ಮಧ್ಯೆ ಛತ್ತೀಸ್ ಗಢದಲ್ಲಿ ಕೊರೊನಾ ಲಸಿಕೆಯನ್ನು ಸ್ವಾಗತಿಸಿರುವ ರೀತಿ ಸಖತ್ ಸದ್ದು ಮಾಡಿದೆ.

ಕೊರೊನಾವೈರಸ್ ಸೋಂಕಿನ ವಿರುದ್ಧ ಭಾರತದಲ್ಲಿ ಲಸಿಕೆ ವಿತರಣೆ ಅಭಿಯಾನ ಶುರುವಾಗಿದೆ. ಶನಿವಾರ ಬೆಳಗ್ಗೆ 10.30ಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಲಸಿಕೆ ವಿತರಣೆಗೆ ಚಾಲನೆ ನೀಡಿ ಆಗಿದೆ. ದೇಶಾದ್ಯಂತ ಶನಿವಾರ ಕೊರೊನಾ ಲಸಿಕೆ ವಿತರಣೆ ನಡೆಸಿದ ಹಿನ್ನಲೆ ಎರಡ್ಮೂರು ದಿನಗಳಿಗೂ ಮೊದಲೇ ಎಲ್ಲ ಜಿಲ್ಲಾಕೇಂದ್ರಗಳಿಗೆ ಲಸಿಕೆ ತಲುಪಿಸಲಾಗಿತ್ತು. ಛತ್ತೀಸ್ ಗಢದಲ್ಲಿ ಕೊರೊನಾ ಲಸಿಕೆಯನ್ನು ವಿನೂತನ ರೀತಿಯಲ್ಲಿ ಸ್ವಾಗತಿಸಿಕೊಳ್ಳಲಾಯಿತು.

 Corona Vaccine Was Welcomed With Flowers, Band, Firecrackers And Puja At Chhattisgarh

ಕೊವಿಶೀಲ್ಡ್ ಲಸಿಕೆ ಪಡೆದ ಸೆರಮ್ ಇನ್ಸ್ ಟಿಟ್ಯೂಟ್ ಸಿಇಓ ಪೂನಾವಲ್ಲಾಕೊವಿಶೀಲ್ಡ್ ಲಸಿಕೆ ಪಡೆದ ಸೆರಮ್ ಇನ್ಸ್ ಟಿಟ್ಯೂಟ್ ಸಿಇಓ ಪೂನಾವಲ್ಲಾ

ಛತ್ತೀಸ್ ಗಢದ ಜೈ ಸ್ತಂಭ ಚೌಕ್ ರಸ್ತೆಯಲ್ಲಿ ಲಸಿಕೆಯನ್ನು ತರುವ ಹಾದಿಯಲ್ಲಿ ಆರೋಗ್ಯ ಇಲಾಖೆಯ ಕಾರ್ಯಕರ್ತರು ಹೂವುಗಳನ್ನು ಚೆಲ್ಲಿ, ಪಟಾಕಿಯನ್ನು ಸಿಡಿಸುತ್ತಾ, ಬ್ಯಾಂಡ್ ಬಾರಿಸುತ್ತಾ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಛತ್ತೀಸ್ ಗಢದಲ್ಲಿ ಕೊರೊನಾ ಲಸಿಕೆ ಕೇಂದ್ರ:

Recommended Video

ಮಂಡ್ಯ: 8 ಲಸಿಕ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ವಿತರಣೆ, ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ | Oneindia Kannada

ಛತ್ತೀಸ್ ಗಢ ರಾಜಧಾನಿ, ಬಲೋಡ್‌ನ ಜಿಲ್ಲಾ ಲಸಿಕೆ ಕೇಂದ್ರವು(ಡಿವಿಎಸ್) ಮಾದರಿ ಲಸಿಕೆ ಕೇಂದ್ರವಾಗಿ ಹೊರಹೊಮ್ಮಿದೆ. ಜಿಲ್ಲಾ ಮಟ್ಟದಲ್ಲಿ ನೆಲೆಗೊಂಡಿರುವ ಜಿಲ್ಲಾ ಲಸಿಕೆ ಕೇಂದ್ರವೊಂದು ಪ್ರಾದೇಶಿಕ ಮತ್ತು ರಾಜ್ಯದ ಲಸಿಕೆ ಕೇಂದ್ರಗಳಿಂದ ಈ ಲಸಿಕೆ ಪಡೆಯಲಾಗುತ್ತದೆ. ನಂತರ ಪ್ರತಿ ತಿಂಗಳು ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಕೋಲ್ಡ್ ಚೈನ್ ಪಾಯಿಂಟ್‌ಗಳಿಗೆ ಲಸಿಕೆ ಮತ್ತು ಸಿರಿಂಜಿನಂತಹ ಒಣ ದಾಸ್ತಾನುಗಳನ್ನು ರವಾನಿಸಲಾಗುತ್ತದೆ.

English summary
Corona Vaccine Was Welcomed With Flowers, Band, Firecrackers And Puja At Chhattisgarh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X