ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

18ವರ್ಷ ಮೇಲ್ಪಟ್ಟ ಸರ್ವರಿಗೂ ಕೊರೊನಾ ಲಸಿಕೆ: ಎರಡು ಬಹುದೊಡ್ಡ ಸವಾಲುಗಳು

|
Google Oneindia Kannada News

ಕೂರೊನಾ ಎರಡನೇ ಅಲೆ ತೀವ್ರವಾಗಿ ಕಾಡುತ್ತಿರುವ ಬೆನ್ನಲ್ಲೇ ಮೋದಿ ನೇತೃತ್ವದ ಕೇಂದ್ರ ಸರಕಾರ ಹದಿನೆಂಟು ವರ್ಷಕ್ಕೂ ಮೇಲ್ಪಟ್ಟವರಿಗೂ ಮೇ ಒಂದರಿಂದ ಲಸಿಕೆ ನೀಡುವ ಬಹುದೊಡ್ಡ ಘೋಷಣೆಯನ್ನು ಮಾಡಿದೆ.

ಸೋಮವಾರ (ಏ 19) ಸರಣಿ ಸಭೆಯನ್ನು ನಡೆಸಿದ ಪ್ರಧಾನಿ ಮೋದಿ, ಕೊರೊನಾ ಅಲೆಯನ್ನು ನಿಯಂತ್ರಿಸುವ ಸಂಬಂಧ, ಹದಿನೆಂಟು ವಯಸ್ಸಿಗೆ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಮಹಾರಾಷ್ಟ್ರದಿಂದ ಹೊರಟ ಮೊದಲ ಮಹಾರಾಷ್ಟ್ರದಿಂದ ಹೊರಟ ಮೊದಲ "ಆಕ್ಸಿಜನ್ ಎಕ್ಸ್‌ಪ್ರೆಸ್" ರೈಲು

ಇದರ ಜೊತೆಗೆ, ಲಸಿಕೆ ತಯಾರಿಸುವ ಭಾರತದ ಎರಡು ಕಂಪೆನಿಗಳಾದ ಭಾರತ್ ಬಯೋಟೆಕ್ (ಕೋವ್ಯಾಕ್ಸಿನ್) ಮತ್ತು ಸೇರಂ ಇನ್ಸ್ಟಿಟ್ಯೂಟ್ (ಕೋವಿಶೀಲ್ಡ್) ಸಂಸ್ಥೆಗಳಿಗೆ ಮುಕ್ತವಾಗಿ ರಾಜ್ಯಗಳಿಗೆ ನೇರವಾಗಿ ಲಸಿಕೆಯನ್ನು ನೀಡಬಹುದು ಎನ್ನುವ ನಿರ್ಧಾರವನ್ನೂ ಕೇಂದ್ರ ಪ್ರಕಟಿಸಿದೆ.

 ಬೆಂಗಳೂರಿಗೆ ಪ್ರತ್ಯೇಕ ಕೋವಿಡ್ 19 ನಿಯಮ ಜಾರಿ: ಸಚಿವ ಅಶೋಕ್ ಬೆಂಗಳೂರಿಗೆ ಪ್ರತ್ಯೇಕ ಕೋವಿಡ್ 19 ನಿಯಮ ಜಾರಿ: ಸಚಿವ ಅಶೋಕ್

25ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಬೇಕು ಎನ್ನುವ ಒತ್ತಾಯದ ನಡುವೆ, ಕೇಂದ್ರ ಸರಕಾರ ಅದನ್ನು ಇನ್ನೂ ಸಡಿಲಿಸಿ ಹದಿನೆಂಟು ವರ್ಷಕ್ಕೆ ಇಳಿಸಿದೆ. ಕೆಲವೊಂದು ಷರತ್ತಿನೊಂದಿಗೆ ಎರಡು ಲಸಿಕೆ ತಯಾರಿಕಾ ಸಂಸ್ಥೆಗಳಿಗೆ ಕೇಂದ್ರ ಸರಕಾರ ಅನುಮತಿ ನೀಡಿದ್ದರೂ, ಎರಡು ಬಹುದೊಡ್ಡ ಸವಾಲನ್ನು ಎದುರಿಸಬೇಕಾಗಿದೆ.

 ಪೂರ್ವ ನಿಗದಿತ ಬೆಲೆಗಿಂತ ಹೆಚ್ಚಿನ ದರವನ್ನು ತೆಗೆದುಕೊಳ್ಳಬಾರದು

ಪೂರ್ವ ನಿಗದಿತ ಬೆಲೆಗಿಂತ ಹೆಚ್ಚಿನ ದರವನ್ನು ತೆಗೆದುಕೊಳ್ಳಬಾರದು

ಘೋಷಣೆ ಮಾಡುವ ಮುನ್ನ ಲಸಿಕೆ ತಯಾರಿಕಾ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿದ ಮೋದಿ, ಕೇಂದ್ರದ ಷರತ್ತನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ. ಅದರಂತೇ, ಪೂರ್ವ ನಿಗದಿತ ಬೆಲೆಗಿಂತ ಹೆಚ್ಚಿನ ದರವನ್ನು ತೆಗೆದುಕೊಳ್ಳಬಾರದು ಎಂದು ಕೇಂದ್ರ ಸರಕಾರ ಎರಡು ಸಂಸ್ಥೆಗಳಿಗೆ ಸೂಚಿಸಿದೆ.

 ಕೇಂದ್ರ ಸರಕಾರದಿಂದ ಹಣ ಬಿಡುಗಡೆ

ಕೇಂದ್ರ ಸರಕಾರದಿಂದ ಹಣ ಬಿಡುಗಡೆ

ಉತ್ಪಾದನೆಯ ವೇಗವನ್ನು ಹೆಚ್ಚಿಸಲು ಭಾರತ್ ಬಯೋಟೆಕ್ ಸಂಸ್ಥೆಗೆ 1,500 ಮತ್ತು ಸೇರಂ ಇನ್ಸ್ಟಿಟ್ಯೂಟ್ ಸಂಸ್ಥೆಗೆ 3,000 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರಕಾರ ಬಿಡುಗಡೆಗೊಳಿಸಿದೆ. ಒಟ್ಟು ಉತ್ಪಾದನೆಯ ಶೇ. 50ರಷ್ಟನ್ನು ಕೇಂದ್ರ ಆರೋಗ್ಯ ಇಲಾಖೆಗೆ, ಮಿಕ್ಕದನ್ನು ಇಂಡೆಂಟ್ ಪ್ರಕಾರ ರಾಜ್ಯಗಳಿಗೆ ನೀಡುವ ಸೂಚನೆಯನ್ನು ಕೇಂದ್ರ ಸರಕಾರ ಈ ಎರಡು ಸಂಸ್ಥೆಗಳಿಗೆ ನೀಡಿದೆ.

 ಕೇಂದ್ರದ ಮುಂದಿರುವ ಬಹುದೊಡ್ಡ ಸವಾಲುಗಳು

ಕೇಂದ್ರದ ಮುಂದಿರುವ ಬಹುದೊಡ್ಡ ಸವಾಲುಗಳು

ಈ ಬಹುದೊಡ್ಡ ಘೋಷಣೆಯ ನಂತರ ಕೇಂದ್ರಕ್ಕೆ ಎರಡು ಸವಾಲು ಎದುರಾಗಿದೆ. ಹದಿನೆಂಟು ವರ್ಷಕ್ಕೆ ಮೇಲ್ಪಟ್ಟ ಕೋಟ್ಯಾಂತರ ನಾಗರೀಕರು ಇರುವುದರಿಂದ, ಇನ್ನುಳಿದಿರುವ ಹತ್ತುದಿನದ ಅವಧಿಯಲ್ಲಿ ಕೋಟೀ ಕೋಟಿ ಲೆಕ್ಕದಲ್ಲಿ ಎರಡು ಸಂಸ್ಥೆಗಳು ಲಸಿಕೆ ಉತ್ಪಾದನೆಯನ್ನು ಮಾಡಬೇಕಿದೆ. ಜೊತೆಗೆ, ದೇಶಾದ್ಯಂತ ಮೊದಲನೇ ಮತ್ತು ಎರಡನೇ ಡೋಸೇಜ್ ಲಸಿಕೆ ಅಭಿಯಾನ ಮುಗಿಯಲು ಇನ್ನೆರಡು ವರ್ಷವಾದರೂ ಬೇಕಾಗಬಹುದು. ಅಲ್ಲಿಯವರೆಗೆ, ಉತ್ಪಾದನೆಯಲ್ಲಿ ಯಾವುದೇ ಕಮ್ಮಿಯಾಗದಂತೆ ನೋಡಿಕೊಳ್ಳಬೇಕಿದೆ.

Recommended Video

ಇದ್ದಕ್ಕಿದ್ದಂತೆ ದೇಶದ ಜನರ ಮುಂದೆ ಬರಲು ಮುಂದಾದ ಮೋದಿ Oneindia Kannada
 ಭಾರತ್ ಬಯೋಟೆಕ್ ಮತ್ತು ಸೇರಂ ಸಂಸ್ಥೆಗಳು

ಭಾರತ್ ಬಯೋಟೆಕ್ ಮತ್ತು ಸೇರಂ ಸಂಸ್ಥೆಗಳು

ಭಾರತ್ ಬಯೋಟೆಕ್ ಮತ್ತು ಸೇರಂ ಸಂಸ್ಥೆಗಳು ಉತ್ಪಾದನೆಯನ್ನು ಮಾಡುತ್ತಿರುವುದಾದರೂ, ಅದಕ್ಕೆ ಕೆಲವೊಂದು ಕಚ್ಚಾವಸ್ತುಗಳು ಅಮೆರಿಕಾದಿಂದ ಬರಬೇಕಿದೆ. ಅಲ್ಲಿನ ರಕ್ಷಣಾ ಕಾಯಿದೆ ಅನ್ವಯ ಆ ವಸ್ತುಗಳ ರಫ್ತನ್ನು ಅಮೆರಿಕಾ ಸದ್ಯದ ಮಟ್ಟಿಗೆ ನಿಷೇಧ ಮಾಡಿದೆ. ಹಾಗಾಗಿ ಈ ಸವಾಲನ್ನು ಕೇಂದ್ರ ಹೇಗೆ ನಿಭಾಯಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

English summary
Corona Vaccine Above 18 Years: Two Big Challenge To Modi Led Union Government
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X