ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಅಪಾಯಕಾರಿ ನಡೆ; ಆರೋಗ್ಯ ಸಚಿವಾಲಯದಿಂದ ಜನರಿಗೆ ಎಚ್ಚರಿಕೆ

|
Google Oneindia Kannada News

ನವದೆಹಲಿ, ಜುಲೈ 6: ದೇಶದಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾಗಿ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿದ್ದಂತೆಯೇ ಜನರು ಮನಸೋಇಚ್ಛೆ ಓಡಾಡಲು ಶುರು ಮಾಡಿದ್ದಾರೆ. ಪ್ರವಾಸಿ ತಾಣಗಳಿಗೆ, ಗಿರಿಧಾಮಗಳಿಗೆ ಭೇಟಿ ಕೊಡುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದ್ದು, ಜನರು ಬೇಕಾಬಿಟ್ಟಿ ಪ್ರಯಾಣ ಮಾಡಲು ಆರಂಭಿಸಿದ್ದಾರೆ ಎಂದು ಹೇಳಿದೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಲಾವ್ ಅಗರ್‌ ವಾಲ್ ಆತಂಕ ವ್ಯಕ್ತಪಡಿಸಿದ್ದು, ಕೊರೊನಾ ಎರಡನೇ ಅಲೆ ಇನ್ನೂ ಕೊನೆಗೊಂಡಿಲ್ಲ ಎಂಬುದನ್ನೇ ಜನರು ಮರೆತುಬಿಡುತ್ತಿದ್ದಾರೆ ಎಂದಿದ್ದಾರೆ. ಮುಂದೆ ಓದಿ...

"ಇದು ಅಪಾಯಕಾರಿ ನಡೆ"

ಇಷ್ಟು ದಿನ ಎಲ್ಲೆಡೆ ಕೊರೊನಾ ನಿರ್ಬಂಧಗಳನ್ನು ಹೇರಲಾಗಿತ್ತು. ಪ್ರಯಾಣಕ್ಕೂ ಕೆಲವು ನಿರ್ಬಂಧಗಳಿದ್ದವು. ಈಗ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಈಗ ಜನರು ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಮನಾಲಿ, ಮುಸೋರಿ, ಸದಾರ್ ಬಜಾರ್ ದೆಹಲಿ, ಶಿಮ್ಲಾ, ದೆಹಲಿಯ ಲಕ್ಷ್ಮೀ ನರ, ದಾದರ್ ಮಾರ್ಕೆಟ್‌ನಲ್ಲಿ ಜನಜಂಗುಳಿಯಿರುವ ಚಿತ್ರಗಳನ್ನು ನೋಡಿದೆ. ಕೊರೊನಾ ನಿಯಮಗಳನ್ನು ಪಾಲಿಸದೇ ಜನರು ಓಡಾಡುತ್ತಿದ್ದಾರೆ. ಇದು ಅಪಾಯಕಾರಿ. ಸೋಂಕು ಕೊನೆಯಾಗಿಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ದೇಶದಲ್ಲಿ ಕಳೆದ 111 ದಿನಗಳಲ್ಲೇ ಅತಿ ಕಡಿಮೆ ಕೊರೊನಾ ಪ್ರಕರಣ ದಾಖಲುದೇಶದಲ್ಲಿ ಕಳೆದ 111 ದಿನಗಳಲ್ಲೇ ಅತಿ ಕಡಿಮೆ ಕೊರೊನಾ ಪ್ರಕರಣ ದಾಖಲು

ನಿಯಮ ಪಾಲನೆಯಿಂದಷ್ಟೇ ಬಚಾವಾಲು ಸಾಧ್ಯ

ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರಷ್ಟೇ ಕೊರೊನಾ ಸೋಂಕಿನಿಂದ ಬಚಾವಾಗಲು ಸಾಧ್ಯ. ಆದರೆ ಜನರು ಏಕೆ ಈಗಲೇ ಮೈಮರೆಯುತ್ತಿದ್ದಾರೆ ಎಂದು ಪ್ರಶ್ನಿಸಿದ್ದು, ಮೂರನೇ ಅಲೆ ಆತಂಕವಿರುವಾಗಲೇ ಈ ರೀತಿ ನಡವಳಿಕೆ ಭಯ ಹುಟ್ಟಿಸುತ್ತಿದೆ ಎಂದಿದ್ದಾರೆ.

 ದಿನನಿತ್ಯದ ಪ್ರಕರಣಗಳಲ್ಲಿ ಶೇ 30ರಷ್ಟು ಇಳಿಕೆ

ದಿನನಿತ್ಯದ ಪ್ರಕರಣಗಳಲ್ಲಿ ಶೇ 30ರಷ್ಟು ಇಳಿಕೆ

ದೇಶದಲ್ಲಿ ಕೊರೊನಾ ದಿನನಿತ್ಯದ ಪ್ರಕರಣಗಳಲ್ಲಿ ಶೇ 30ರಷ್ಟು ಇಳಿಕೆಯಾಗಿದೆ. ಆದರೆ ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ಆಂಧ್ರಪ್ರದೇಶ, ತ್ರಿಪುರಾ, ಮೇಘಾಲಯ, ಸಿಕ್ಕಿಂ ರಾಜ್ಯಗಳಲ್ಲಿ ಇನ್ನೂ ಸೋಂಕು ಕಡಿಮೆಯಾಗಿಲ್ಲ. ಅಲ್ಲಿ ಶೇ 10ಕ್ಕೂ ಹೆಚ್ಚು ಪಾಸಿಟಿವಿಟಿ ದರವಿದೆ. ಈಗ ಎಲ್ಲವನ್ನೂ ಮರೆತು ನಿಯಮಗಳನ್ನು ಗಾಳಿಗೆ ತೂರಿ ಓಡಾಡುತ್ತಿರುವುದು ಕಂಡುಬರುತ್ತದೆ ಎಂದು ಸಚಿವಾಲಯ ಹೇಳಿದೆ.

ಕೋವಿಡ್ ಲಸಿಕೆಗಳು ಡೆಲ್ಟಾ ರೂಪಾಂತರಿ ವಿರುದ್ಧ 8 ಪಟ್ಟು ಕಡಿಮೆ ಪರಿಣಾಮಕಾರಿಕೋವಿಡ್ ಲಸಿಕೆಗಳು ಡೆಲ್ಟಾ ರೂಪಾಂತರಿ ವಿರುದ್ಧ 8 ಪಟ್ಟು ಕಡಿಮೆ ಪರಿಣಾಮಕಾರಿ

"ಮೂರನೇ ಅಲೆ ನಿಭಾಯಿಸುವುದೇ ದೊಡ್ಡ ಸವಾಲು"

ನಮ್ಮ ಮುಂದಿನ ಸವಾಲು ಮೂರನೇ ಅಲೆಯಲ್ಲ. ಅದನ್ನು ನಾವು ಹೇಗೆ ನಿಭಾಯಿಸುತ್ತೇವೆ ಎಂಬುದು. ಮೂರನೇ ಅಲೆ ಹೇಗೆ, ಯಾವಾಗ ಬರುತ್ತದೆ ಎಂಬುದರ ಬಗ್ಗೆ ಗಮನ ಹರಿಸುವ ಮೊದಲು, ಹೇಗೆ ಕೊರೊನಾ ನಿಯಮಗಳನ್ನು ಪಾಲನೆಮಾಡಿ ಸೋಂಕು ಹರಡುವಿಕೆ ತಡೆಯಬಹುದು ಎಂಬುದರ ಕುರಿತು ಗಮನ ಹರಿಸಬೇಕು ಎಂದು ಐಸಿಎಂಆರ್ ಮಹಾ ನಿರ್ದೇಶಕ ಬಲರಾಂ ಭಾರ್ಗವ್ ಹೇಳಿದ್ದಾರೆ.

English summary
Corona second wave not yet over, warns Health Ministry over people visiting hill stations in huge number
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X