ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ಚೇತರಿಸಿಕೊಂಡವರಿಗೆ ಕೋವಿಶೀಲ್ಡ್‌ ಲಸಿಕೆಯ 2 ಡೋಸ್ ಪರಿಣಾಮಕಾರಿ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಆಗಸ್ಟ್‌ 04: ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರ ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ ಪಡೆದವರಲ್ಲಿ ಡೆಲ್ಟಾ ರೂಪಾಂತರದ ವಿರುದ್ಧ ಹೋರಾಡಲು ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಕಾಯಗಳು ಸೃಷ್ಟಿಯಾಗಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಹಾಗೂ ಸಾಂಕ್ರಾಮಿಕ ರೋಗಶಾಸ್ತ್ರದ ರಾಷ್ಟ್ರೀಯ ಸಂಸ್ಥೆಯ ಇತ್ತೀಚಿನ ಅಧ್ಯಯನ ತಿಳಿಸಿದೆ.

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಕೋವಿಶೀಲ್ಡ್‌ ಲಸಿಕೆಯ ಪರಿಣಾಮದ ಕುರಿತು ಅಧ್ಯಯನ ಕೈಗೊಳ್ಳಲಾಗಿದ್ದು, ಕೋವಿಶೀಲ್ಡ್‌ನ ಮೊದಲ ಹಾಗೂ ಎರಡನೇ ಡೋಸ್ ಪಡೆದುಕೊಂಡವರಲ್ಲಿ ಪ್ರತಿಕಾಯ ಸ್ಪಂದನೆಯನ್ನು ಪರಿಶೀಲಿಸಲಾಗಿದೆ. ಇದು ಡೆಲ್ಟಾ ರೂಪಾಂತರವನ್ನು ಮಣಿಸುವಲ್ಲಿ ಹೇಗೆ ನೆರವಾಗಲಿದೆ ಎಂಬ ಕುರಿತು ಅಧ್ಯಯನ ಬೆಳಕು ಚೆಲ್ಲಿದೆ.

ಜೀವಿತಾವಧಿವರೆಗೂ ರಕ್ಷಣೆ ನೀಡಬಲ್ಲದು ಈ ಕೊರೊನಾ ಲಸಿಕೆ; ಅಧ್ಯಯನಜೀವಿತಾವಧಿವರೆಗೂ ರಕ್ಷಣೆ ನೀಡಬಲ್ಲದು ಈ ಕೊರೊನಾ ಲಸಿಕೆ; ಅಧ್ಯಯನ

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು, ಲಸಿಕೆ ಪಡೆದುಕೊಂಡ ನಂತರ ಮತ್ತೆ ಕೆಲವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಅಧ್ಯಯನ ನಡೆಸಲಾಗಿದೆ. ಡೆಲ್ಟಾ ರೂಪಾಂತರ ಇದೀಗ ಡೆಲ್ಟಾ ಪ್ಲಸ್ ರೂಪಾಂತರದ ಸೃಷ್ಟಿಗೂ ಕಾರಣವಾಗಿದ್ದು, ಈ ರೂಪಾಂತರಗಳ ವಿರುದ್ಧ ಲಸಿಕೆಗಳ ಪರಿಣಾಮವನ್ನು ಪರಾಮರ್ಶೆ ನಡೆಸಲು ಅಧ್ಯಯನ ಕೈಗೊಂಡಿದ್ದಾಗಿ ಸಂಸ್ಥೆ ಮಾಹಿತಿ ನೀಡಿದೆ.

Corona Recovered People With Both Doses Of Covishield Have Higher Immunity Against Delta

ಕೋವಿಶೀಲ್ಡ್ ಲಸಿಕೆಯ ಒಂದು ಅಥವಾ ಎರಡು ಡೋಸ್‌ ಪಡೆದವರಿಗೆ ಹೋಲಿಸಿದರೆ, ಕೊರೊನಾದಿಂದ ಗುಣಮುಖರಾಗಿ ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡವರಲ್ಲಿ ಅತಿ ಹೆಚ್ಚು ಪ್ರತಿಕಾಯ ಸೃಷ್ಟಿಯಾಗಿರುವುದು ಗೋಚರಿಸಿದೆ ಎಂದು ಅಧ್ಯಯನ ತಿಳಿಸಿದೆ.

ದೇಹದಲ್ಲಿನ ಪ್ರತಿಕಾಯಗಳನ್ನು ಮೀರಿ ರೂಪಾಂತರ ಸೃಷ್ಟಿಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂಬುದನ್ನು ಅಧ್ಯಯನ ಒತ್ತಿ ಹೇಳಿದೆ. ಇದರ ಬಗ್ಗೆ ನಿಗಾ ವಹಿಸುವಂತೆ ತಿಳಿಸಿದೆ.

ಕೋವಿಶೀಲ್ಡ್‌ ಕೊರೊನಾ ಲಸಿಕೆಯ ವಿಶ್ಲೇಷಣೆಗೆ ಸುಲಭವಾಗುವಂತೆ ಅಧ್ಯಯನವನ್ನು ಐದು ಭಾಗಗಳಾಗಿ ನಿರೂಪಿಸಲಾಗಿದೆ. ಒಂದು ಡೋಸ್ ಕೊರೊನಾ ಲಸಿಕೆ ಪಡೆದವರು, ಎರಡು ಡೋಸ್ ಪಡೆದವರು, ಕೊರೊನಾ ಸೋಂಕಿನಿಂದ ಗುಣಮುಖರಾಗಿ ಒಂದು ಡೋಸ್ ಲಸಿಕೆ ಪಡೆದವರು, ಕೊರೊನಾದಿಂದ ಗುಣಮುಖರಾಗಿ ಎರಡು ಡೋಸ್ ಲಸಿಕೆ ಪಡೆದವರು, ಮತ್ತೆ ಸೋಂಕಿಗೆ ತುತ್ತಾದವರು ಹೀಗೆ ಐದು ಅಂಶಗಳ ಆಧಾರದಲ್ಲಿ ಅಧ್ಯಯನ ನಡೆಸಲಾಗಿದೆ.

ಕೇರಳದಲ್ಲಿ ಕೊರೊನಾ ಏಕೆ ಹೆಚ್ಚುತ್ತಿದೆ? ಕೇಂದ್ರ ತಂಡ ನೀಡಿದ ಕಾರಣಗಳಿವು...ಕೇರಳದಲ್ಲಿ ಕೊರೊನಾ ಏಕೆ ಹೆಚ್ಚುತ್ತಿದೆ? ಕೇಂದ್ರ ತಂಡ ನೀಡಿದ ಕಾರಣಗಳಿವು...

ಪ್ರತಿಯೊಬ್ಬರ ಮಾದರಿಯನ್ನು ವಿಶ್ಲೇಷಣೆ ನಡೆಸಿ ಫಲಿತಾಂಶವನ್ನು ಕಂಡುಕೊಳ್ಳಲಾಗಿದೆ. ಈ ಫಲಿತಾಂಶದಲ್ಲಿ, ಕೊರೊನಾದಿಂದ ಗುಣಮುಖರಾಗಿ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಪ್ರತಿಕಾಯಗಳ ಸೃಷ್ಟಿ ಹೆಚ್ಚಿರುವುದಾಗಿ ತಿಳಿದುಬಂದಿದೆ.

ಲಸಿಕೆ ಪಡೆದ ನಾಲ್ಕು ವಾರಗಳ ನಂತರ ಈ ಅಧ್ಯಯನದಲ್ಲಿ ಭಾಗಿಯಾಗಿದ್ದವರ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಮತ್ತೆ ಸೋಂಕು ತಗುಲಿದವರ ಮಾದರಿಯನ್ನು ಲಸಿಕೆ ಪಡೆದ ಎರಡು ವಾರಗಳ ನಂತರ ಪರೀಕ್ಷಿಸಲಾಗಿದೆ.

ಎಲ್ಲಾ ಆಯಾಮಗಳಲ್ಲಿಯೂ ಕೋವಿಶೀಲ್ಡ್ ಲಸಿಕೆ ವ್ಯಾಪಕವಾಗಿ ಹರಡುತ್ತಿರುವ ಡೆಲ್ಟಾ ವಿರುದ್ಧ ಪರಿಣಾಮಕಾರಿ ಎಂಬುದು ಸಾಬೀತಾಗಿದೆ.

ಕೋವಿಶೀಲ್ಡ್ ಕೊರೊನಾ ಲಸಿಕೆಯು ಕೊರೊನಾ ಸೋಂಕಿನ ವಿರುದ್ಧ ಶೇ 93ರಷ್ಟು ರಕ್ಷಣೆ ನೀಡುತ್ತದೆ ಎಂದು ಈಚೆಗೆ ಕೇಂದ್ರ ಸರ್ಕಾರ ಘೋಷಿಸಿತ್ತು. ಸೋಂಕಿನಿಂದ ರಕ್ಷಣೆ ನೀಡುವುದರೊಂದಿಗೆ ಮರಣ ಪ್ರಮಾಣವನ್ನು ಶೇ 98ರಷ್ಟು ತಗ್ಗಿಸುವುದು ಎಂದು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು (ಎಎಫ್‌ಎಂಸಿ) ನಡೆಸಿರುವ ಅಧ್ಯಯನ ಮಾಹಿತಿ ನೀಡಿತ್ತು.

ಭಾರತದಲ್ಲಿ ಜನವರಿ 16ರಿಂದ ಬೃಹತ್ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಮೂರು ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ ವಿ ಲಸಿಕೆಗೆ ಅನುಮೋದನೆ ನೀಡಲಾಗಿದೆ. ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್ ಲಸಿಕೆ ಭಾರತದಲ್ಲಿಯೇ ಉತ್ಪಾದನೆಯಾಗುತ್ತಿದೆ. ಕೋವಿಶೀಲ್ಡ್ ಲಸಿಕೆಯನ್ನು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದನೆ ಮಾಡುತ್ತಿದೆ.

English summary
Corona recovered individuals with both doses of Covishield have higher immunity against Delta variant says ICMR Study
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X