• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪತಂಜಲಿ ಯೋಗ ಪೀಠದಲ್ಲಿ 83 ಮಂದಿಗೆ ಕೊರೊನಾವೈರಸ್ ಪಾಸಿಟಿವ್

|
Google Oneindia Kannada News

ಹರಿದ್ವಾರ, ಏಪ್ರಿಲ್ 23: ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯು ಉತ್ತರಾಖಂಡದಲ್ಲಿ ಹೆಚ್ಚು ಆತಂಕವನ್ನು ಹುಟ್ಟಿಸುತ್ತಿದೆ. ಹರಿದ್ವಾರದ ಪತಂಜಲಿ ಯೋಗ ಪೀಠದಲ್ಲೂ ಕೊವಿಡ್-19 ಸೋಂಕಿನ ಹಾವಳಿ ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ.

ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಯೋಗ ಪೀಠದಲ್ಲಿನ 83 ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಎಲ್ಲ ಸಂಕಿತರನ್ನು ಐಸೋಲೇಟ್ ಮಾಡಲಾಗಿದೆ.

ಕೊರೊನಾ ಭೀತಿ: ಕುಂಭಮೇಳದಿಂದ ವಾಪಸ್ಸಾದವರಿಗೆ 14 ದಿನ ಗೃಹ ದಿಗ್ಬಂಧನಕೊರೊನಾ ಭೀತಿ: ಕುಂಭಮೇಳದಿಂದ ವಾಪಸ್ಸಾದವರಿಗೆ 14 ದಿನ ಗೃಹ ದಿಗ್ಬಂಧನ

ಪತಂಜಲಿ ಯೋಗ ಪೀಠದಲ್ಲಿ ಭಾರಿ ಸಂಖ್ಯೆಯ ಸದಸ್ಯರಿಗೆ ಸೋಂಕು ತಗುಲಿರುವುದು ಆಡಳಿತಕ್ಕೂ ಹೊಡೆತ ಕೊಡುತ್ತಿದೆ. ಇನ್ನೊಂದಡೆ ಸಂಸ್ಥೆಯ ಎಲ್ಲ ಸಿಬ್ಬಂದಿಗೂ ಕೊರೊನಾವೈರಸ್ ಸೋಂಕಿನ ತಪಾಸಣೆ ನಡೆಸಲಾಗುತ್ತಿದೆ.

ಯೋಗ ಗುರುವಿಗೆ ಕೊರೊನಾ ಪರೀಕ್ಷೆ:

ಪತಂಜಲಿ ಯೋಗ ಪೀಠದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಯೋಗ ಗುರು ಬಾಬಾ ರಾಮ್ ದೇವ್ ಅವರಿಗೂ ಕೊವಿಡ್-19 ಸೋಂಕಿನ ತಪಾಸಣೆ ನಡೆಸುವುದಕ್ಕೆ ನಿರ್ಧರಿಸಲಾಗಿದೆ.

ಪ್ರತಿನಿತ್ಯ ಸಂಸ್ಥೆಯಲ್ಲಿ ಕೊರೊನಾ ಸೋಂಕಿತ ಪ್ರಕರಣ:

ಒಂದು ಮಾಹಿತಿಯ ಪ್ರಕಾರ, ಪತಂಜಲಿ ಯೋಗ ಪೀಠದ ಸಂಸ್ಥೆಗಳಲ್ಲಿ ಪ್ರತಿನಿತ್ಯ ಒಬ್ಬೊಬ್ಬ ಕೊರೊನಾವೈರಸ್ ಸೋಂಕಿತ ವ್ಯಕ್ತಿಗಳು ಪತ್ತೆಯಾಗುತ್ತಿದ್ದಾರೆ ಎಂದು ಹರಿದ್ವಾರದ ಸಿಎಓ ಡಾ. ಶಂಭು ಜಾ ತಿಳಿಸಿದ್ದಾರೆ. ಏಪ್ರಿಲ್ 10ರವರೆಗೆ ಪತಂಜಲಿ ಯೋಗ ಪೀಠ ಆಚಾರ್ಯ ಕುಲಂ ಹಾಗೂ ಯೋಗ ಗ್ರಾಮದಲ್ಲಿ 83 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಪತಂಜಲಿ ಕ್ಯಾಂಪಸ್ ನಲ್ಲಿ ಈ ಸೋಂಕಿತರನ್ನು ಐಸೋಲೇಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

English summary
Corona Fear At Haridwar Patanjali Yogpeeta After 83 People Tested Positive Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X