ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಕೊರೊನಾ ಪ್ರಕರಣಗಳಲ್ಲಿ ಈ ಐದು ರಾಜ್ಯಗಳ ಪಾಲೇ ಹೆಚ್ಚು

|
Google Oneindia Kannada News

ನವದೆಹಲಿ, ಮಾರ್ಚ್ 26: ಕಳೆದ ಅಕ್ಟೋಬರ್ ನಂತರ ಶುಕ್ರವಾರ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಿನನಿತ್ಯದ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಐದು ರಾಜ್ಯಗಳ ಪಾಲು ಅಧಿಕವಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಛತ್ತೀಸ್‌ಗಢ ಹಾಗೂ ಗುಜರಾತ್‌ನಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿರುವುದಾಗಿ ತಿಳಿಸಿದೆ. ಶುಕ್ರವಾರ ದೇಶದಲ್ಲಿ 59,118 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಅಕ್ಟೋಬರ್ ನಂತರ ದಾಖಲಾಗಿರುವ ಅತಿ ಹೆಚ್ಚಿನ ದಿನನಿತ್ಯದ ಪ್ರಕರಣ ಇದಾಗಿದೆ.

ಕೊವಿಡ್ 19: ಮಾರ್ಚ್ 26ರಂದು ವಿಶ್ವದಲ್ಲಿ ಎಷ್ಟು ಮಂದಿ ಗುಣಮುಖ?ಕೊವಿಡ್ 19: ಮಾರ್ಚ್ 26ರಂದು ವಿಶ್ವದಲ್ಲಿ ಎಷ್ಟು ಮಂದಿ ಗುಣಮುಖ?

ಫೆಬ್ರವರಿ ಮಧ್ಯದಿಂದ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು, ಮೂರೂವರೆ ತಿಂಗಳ ನಂತರ ಸಕ್ರಿಯ ಪ್ರಕರಣಗಳು ಮತ್ತೆ ನಾಲ್ಕು ಲಕ್ಷಕ್ಕೆ ಮುಟ್ಟಿದೆ. ಸದ್ಯಕ್ಕೆ ದೇಶದಲ್ಲಿ 4.21 ಸಕ್ರಿಯ ಪ್ರಕರಣಗಳಿವೆ. ಪ್ರಸ್ತುತ ದಾಖಲಾಗುತ್ತಿರುವ ಒಟ್ಟಾರೆ ಪ್ರಕರಣಗಳಲ್ಲಿ ಮಹಾರಾಷ್ಟ್ರ, ಕೇರಳ, ಪಂಜಾಬ್‌ ರಾಜ್ಯಗಳ ಪಾಲು ಅತಿ ಹೆಚ್ಚಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಇಂದು 35,952, ಪಂಜಾಬ್‌ನಲ್ಲಿ 2,661 ಹಾಗೂ ಕರ್ನಾಟಕದಲ್ಲಿ 2,523 ಪ್ರಕರಣಗಳು ದಾಖಲಾಗಿವೆ.

Corona Cases Increasing In Five States And Account For 73.64 Percent

ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಛತ್ತೀಸ್‌ಗಡ, ಕೇರಳ, ಗುಜರಾತ್‌ನಿಂದ ದೇಶದ ಒಟ್ಟಾರೆ ಪ್ರಕರಣಗಳಲ್ಲಿ ಶೇ 80ರಷ್ಟು ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದುಬಂದಿದೆ.

English summary
Maharashtra, Punjab, Karnataka, Chhattisgarh and Gujarat, these five states have registered an increase in daily COVID-19 cases says Union Health Ministry,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X