ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಮತ್ತೆ ಕೊರೊನಾ ಕೇಕೆ: ಒಂದೇ ದಿನ 14,506 ಕೇಸ್

|
Google Oneindia Kannada News

ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಉಲ್ಬಣಗೊಳ್ಳುತ್ತಿರುವುದು ಜನರನ್ನು ಆತಂಕಕ್ಕೆ ತಳ್ಳಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 14,506 ಹೊಸ ಕೊರೊನವೈರಸ್ ಪ್ರಕರಣಗಳು ದಾಖಲಾಗಿವೆ. ಜೊತೆಗೆ ಸೋಂಕಿನಿಂದ 30 ಸಾವುಗಳು ಸಂಭವಿಸಿವೆ.

ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ (ಜೂನ್ 29) ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 11,574 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ಒಟ್ಟು ಚೇತರಿಕೆ ದರ ಸುಮಾರು 98.57 ಪ್ರತಿಶತದಷ್ಟಿದ್ದರೆ, ಈವರೆಗೆ ಒಟ್ಟು ಚೇತರಿಕೆಯ ಸಂಖ್ಯೆ 4,28,08,666 ಕ್ಕೆ ತಲುಪಿದೆ.

Breaking: ಕರ್ನಾಟಕದಲ್ಲಿ ಒಂದೇ ದಿನ 968 ಮಂದಿಗೆ ಕೊರೊನಾ ವೈರಸ್!Breaking: ಕರ್ನಾಟಕದಲ್ಲಿ ಒಂದೇ ದಿನ 968 ಮಂದಿಗೆ ಕೊರೊನಾ ವೈರಸ್!

ಭಾರತದಲ್ಲಿ COVID-19 ನ ಒಟ್ಟು ಸಕ್ರಿಯ ಪ್ರಕರಣಗಳು 99,602 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಇಂದು ತೋರಿಸಿವೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ COVID-19 ಪ್ರಕರಣಗಳ ಸಂಖ್ಯೆ 2,902 ದಾಖಲಾಗಿದೆ. ಒಟ್ಟು 0.22 ಪ್ರತಿಶತದಷ್ಟು ಸಕ್ರಿಯ ಪ್ರಕರಣಗಳಿವೆ ಎಂದು ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಮತ್ತೆ ಕೊರೊನಾ ಉಲ್ಬಣ: ಒಂದೇ ದಿನ 14,506 ಕೇಸ್

ಭಾರತದಲ್ಲಿ ಮಾರ್ಚ್ 2020 ರಲ್ಲಿ COVID ಸಾಂಕ್ರಾಮಿಕ ರೋಗದಿಂದ ಮೊದಲ ಸಾವು ವರದಿಯಾಗಿತ್ತು. ಜೂನ್ 29 ರಂದು ದೈನಂದಿನ ಪಾಸಿಟಿವಿಟಿ ದರವು 3.35 ಶೇಕಡಾವನ್ನು ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ 30 ಸಾವುಗಳು ಸಂಭವಿಸಿದ್ದು ಈವರೆಗೆ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5,25,077 ಕ್ಕೆ ತಲುಪಿದೆ.

ದೆಹಲಿ ಕೋವಿಡ್:

ದೆಹಲಿಯು 874 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಸೋಂಕಿನಿಂದ ನಾಲ್ಕು ಸಾವುಗಳು ಸಂಭವಿಸಿವೆ. ಆದರೆ ಧನಾತ್ಮಕ ಪ್ರಮಾಣವು ಶೇಕಡಾ 5.18 ಕ್ಕೆ ಇಳಿದಿದೆ ಎಂದು ನಗರ ಆರೋಗ್ಯ ಇಲಾಖೆ ಮಂಗಳವಾರ ಹಂಚಿಕೊಂಡ ಮಾಹಿತಿ ತಿಳಿಸಿದೆ. ರಾಷ್ಟ್ರ ರಾಜಧಾನಿ ಸೋಮವಾರ 628 ಹೊಸ ಕೋವಿಡ್ ಪ್ರಕರಣಗಳು ಮತ್ತು ವೈರಲ್ ಕಾಯಿಲೆಯಿಂದ ಮೂರು ಸಾವುಗಳನ್ನು ವರದಿ ಮಾಡಿತ್ತು. ಆದರೆ ಸಕಾರಾತ್ಮಕ ದರವು ಶೇಕಡಾ 8.06 ರಷ್ಟಿದೆ. ಆದರೆ ದಿನ ಕಳೆದಂತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದು ಗಮನಿಸಬಹುದು.

ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 19,32,900 ಕ್ಕೆ ಏರಿದ್ದು, ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 26,260 ಕ್ಕೆ ಏರಿದೆ. ಆರೋಗ್ಯ ಇಲಾಖೆ ಭಾನುವಾರ ಬುಲೆಟಿನ್ ಬಿಡುಗಡೆ ಮಾಡಿರಲಿಲ್ಲ. ಶನಿವಾರ, ನಗರವು ಕೋವಿಡ್‌ನಿಂದ ಆರು ಸಾವುಗಳನ್ನು ಕಂಡರೆ, ಧನಾತ್ಮಕ ಪ್ರಮಾಣವು ಶೇಕಡಾ 7.8 ರಷ್ಟಿತ್ತು.

ಭಾರತದಲ್ಲಿ ಮತ್ತೆ ಕೊರೊನಾ ಉಲ್ಬಣ: ಒಂದೇ ದಿನ 14,506 ಕೇಸ್

ಶುಕ್ರವಾರ, ನಗರದಲ್ಲಿ 1,447 ಕೋವಿಡ್ ಪ್ರಕರಣಗಳು ಮತ್ತು ಒಂದು ಸಾವು ದಾಖಲಾಗಿದ್ದರೆ, ಧನಾತ್ಮಕ ಪ್ರಮಾಣವು ಶೇಕಡಾ 5.98 ರಷ್ಟಿತ್ತು. ಇನ್ನೂ ಗುರುವಾರ 1,934 ಕೋವಿಡ್ ಪ್ರಕರಣಗಳು ಮತ್ತು ಶೂನ್ಯ ಸಾವು ದಾಖಲಾಗಿದೆ.

English summary
The number of coronavirus cases in India is again on the rise. In the last 24 hours, there have been 14,506 new cases of coronavirus in India. In addition there were 30 deaths due to infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X