ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ ಮೊಬೈಲನ್ನು ಪೊಲೀಸರು ಹುಡುಕಿ ಕೊಡುತ್ತಾರೆ

By Ashwath
|
Google Oneindia Kannada News

ನವದೆಹಲಿ, ಜು,28: ಮೊಬೈಲ್‌ ಕಳೆದು ಹೋಯಿತು ಎಂದು ಸಿಮ್‌ ಬ್ಲಾಕ್‌ ಮಾಡಿ ಸುಮ್ಮನಿರಬೇಡಿ. ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿ. ಕಳೆದು ಹೋದ ಮೊಬೈಲ್‌ನ್ನು ಪೊಲೀಸರು ಹುಡುಕಿ ಮರಳಿ ನಿಮಗೆ ನೀಡುತ್ತಾರೆ!

ಹೌದು.ಇನ್ನು ಮುಂದೆ ಕಳವಾದ ಮೊಬೈಲ್‌ ದೂರನ್ನು ದಾಖಲಿಸುವುದರ ಜೊತೆಗೆ ಅದನ್ನು ಹುಡುಕಿ ಕೊಡುವುದು ಪೊಲೀಸರ ಕೆಲಸ. [ಆಂಡ್ರಾಯ್ಡ್‌ ಫೋನ್‌ ಕಳ್ಳರನ್ನು ಪತ್ತೆ ಹಚ್ಚುವುದು ಹೇಗೆ?]

Cops mobile

ಅಪರಾಧಿಗಳು ಮತ್ತು ಉಗ್ರರು ತಮ್ಮ ಕೃತ್ಯಗಳಿಗೆ ಕಳವಾದ ಮೊಬೈಲ್‌ಗಳನ್ನು ಬಳಸುತ್ತಿರುವ ಮಾಹಿತಿ ಗೃಹ ಇಲಾಖೆಗೆ ಲಭ್ಯವಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಕಳವಾದ ಮೊಬೈಲ್‌ ದೂರು ದಾಖಲಿಸಿ ಹುಡುಕಿಕೊಡುವುದನ್ನು ಕಡ್ಡಾಯ ಮಾಡಬೇಕೆಂದು ಸೂಚಿಸಿದೆ. ಹೀಗಾಗಿ ಇನ್ನುಮುಂದೆ ಮೊಬೈಲ್‌ ಕಳವಾದರೆ ಪೊಲೀಸರು ಕಡ್ಡಾಯವಾಗಿ ಎಫ್‌ಐಆರ್‌ ದಾಖಲಿಸುವುದರ ಜೊತೆಗೆ ಹುಡುಕಿ ಕೊಡಬೇಕಾಗುತ್ತದೆ.

ಈ ಹಿಂದೆ ಮೊಬೈಲ್‌ ಕಳವಾದರೂ ಅದೇ ಸಿಮ್‌ ಬೇಕಿದ್ದಲ್ಲಿ ಸಿಮ್‌ ಬ್ಲಾಕ್‌ ಮಾಡಿ ಪೊಲೀಸರಿಗೆ ದೂರು ನೀಡದೇ ಈ ಹಿಂದಿನ ನಂಬರ್‌ನ್ನು ಪಡೆದುಕೊಳ್ಳಬಹುದಾಗಿತ್ತು. ಆದರೆ ಕೆಲ ವ್ಯಕ್ತಿಗಳು ಉದ್ದೇಶ ಪೂರ್ವ‌ಕವಾಗಿ ಗ್ರಾಹಕರ ಸಿಮ್‌ ಬ್ಲಾಕ್‌ ಮಾಡುತ್ತಿದ್ದ ಪ್ರಕರಣ ಹೆಚ್ಚಾಗುತ್ತಿದ್ದ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ನೀಡಿದ ಪ್ರತಿಯನ್ನು ಮೊಬೈಲ್‌ ಸೇವಾ ಕಂಪೆನಿಗಳಿಗೆ ಸಲ್ಲಿಸಿ ಸಿಮ್‌ ಪಡೆದುಕೊಳ್ಳುವಂತೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ನಿಯಮ ರೂಪಿಸಿತ್ತು. ಇದೀಗ ಹೊಸ ನಿಯಮ ಬಂದಿರುವುದರಿಂದ ಪೊಲೀಸರು ಗ್ರಾಹಕರಿಂದ ದೂರು ದಾಖಲಿಸುವ ಜೊತೆಗೆ ಕಡ್ಡಾಯವಾಗಿ ಕಳೆದು ಹೋದ ಮೊಬೈಲ್‌ನ್ನು ಪತ್ತೆಮಾಡಬೇಕಿದೆ.

English summary
Have you lost your mobile phone? Don’t just block your SIM but rush to the nearest police station and lodge an FIR as it is compulsory for cops to not only lodge a complaint but also trace and recover it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X