ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್‌ ರೇವ್‌ ಪಾರ್ಟಿ‌: 26 ಜನರ ಬಂಧನ

By Ashwath
|
Google Oneindia Kannada News

ಹೈದರಾಬಾದ್‌, ಜು.14: ಹೈದರಾಬಾದ್‌ ತುರ್ಕಾ‌ಪಲ್ಲಿ ಪ್ರದೇಶದ ಕೋಳಿ ಫಾರಂ ಆವರಣದಲ್ಲಿ ರೇವ್‌ ಪಾರ್ಟಿ ನಡೆಸುತ್ತಿದ್ದವರ ಮೇಲೆ ಭಾನುವಾರ ಬೆಳಗ್ಗೆ ಪೊಲೀಸರು ದಾಳಿ ನಡೆಸಿ ರಾಯಚೂರಿನ ಉದ್ಯಮಿಗಳು ಸೇರಿದಂತೆ 26 ಜನರನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಶಾಮೀರ್‌ಪೇಟೆ ಪೊಲೀಸರು ರೇವ್‌ ಪಾರ್ಟಿ‌ಯಲ್ಲಿದ್ದ 14 ಯುವಕ, 12ಯುವತಿಯರನ್ನು ಬಂಧಿಸಿದ್ದಾರೆ.[ರೇವ್ ಪಾರ್ಟಿ ಮಾಡಿ ಸಿಕ್ಕರೂ ಭಯವಿಲ್ಲ]

rave party
ರಾಜು ಎಂಬಾತ ಈ ರೇವ್‌ ಪಾರ್ಟಿಯನ್ನು ಆಯೋಜಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ರಾಯಚೂರಿನ ಉದ್ಯಮಿಗಳ ತಂಡ ಹೈದರಾಬಾದ್‌ಗೆ ವಾರಾಂತ್ಯ ಪ್ರವಾಸಕ್ಕೆ ಬಂದಿದ್ದು, ಈ ಉದ್ಯಮಿಗಳಿಗೆ ರಾಜು ಅಲಿಯಾಸ್‌ ರಾಜನ್‌ ಶಾಮೀರ್‌ಪೇಟೆ ಆವರಣದ ಸಮೀಪದಲ್ಲಿರುವ ಎರಡು ಪ್ರಸಿದ್ದ ರೆಸಾರ್ಟ್‌‌ಗಳನ್ನು ಬುಕ್‌‌ ಮಾಡಿ ರೇವ್‌ ಪಾರ್ಟಿ ಆಯೋಜಿಸಿದ್ದ. ಪೊಲೀಸರ ದಾಳಿ ವೇಳೆ ರಾಜು ತಪ್ಪಿಸಿಕೊಂಡಿದ್ದಾನೆ.

ಬಂಧಿತ 12 ಯುವತಿಯರಲ್ಲಿ ಕೋಲ್ಕತ್ತಾದ ಮೂವರೂ, ಮುಂಬೈಯ ಒಬ್ಬಳು, 8 ಮಂದಿ ತೆಲಂಗಾಣದ ಮೂಲದವರು ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಸ್ಥಳದಲ್ಲಿ ಅಪಾರ ಪ್ರಮಾಣದ ಮದ್ಯ, 2 ಲಕ್ಷ ರೂ. ನಗದು,  19 ಮೊಬೈಲ್‌ ಫೋನ್‌ಗಳು ಹಾಗೂ ನಾಲ್ಕು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

English summary
Shamirpet police busted a rave party on the premises of a poultry farm and arrested 26 persons, including 12 women, in the early hours of Sunday. The cops seized four cars and Rs 2.98 lakh cash from the revellers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X