ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲರಿಂದ ಐಇಡಿ ಸ್ಫೋಟ, ಪೊಲೀಸ್ ಅಧಿಕಾರಿ ಸಾವು

|
Google Oneindia Kannada News

ರಾಯ್ಪುರ, ಮೇ 18: ನಕ್ಸಲರು ಐಇಡಿ ಸ್ಫೋಟಿಸಿದ್ದು, ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ.

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಮಂಗಳವಾರ ನಕ್ಸಲರು ನಡೆಸಿರುವ ಐಇಡಿ ಸ್ಫೋಟದಲ್ಲಿ ಹೆಡ್ ಕಾನ್‌ಸ್ಟೇಬಲ್ ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬ ಪೊಲೀಸ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಛತ್ತೀಸ್‌ಗಢ: ಮೋಸ್ಟ್‌ ವಾಂಟೆಡ್ ನಕ್ಸಲ್ ನಾಯಕ ಕೋಸಾ ಹತ್ಯೆಛತ್ತೀಸ್‌ಗಢ: ಮೋಸ್ಟ್‌ ವಾಂಟೆಡ್ ನಕ್ಸಲ್ ನಾಯಕ ಕೋಸಾ ಹತ್ಯೆ

ಗಾಯಗೊಂಡ ಪೊಲೀಸ್ ಮತ್ತು ಹೆಡ್ ಕಾನ್‌ಸ್ಟೇಬಲ್‌ನ ಶವವನ್ನು ಬಿಜಾಪುರಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಈ ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.

Cop Killed In IED Blast Triggered By Naxals In Chhattisgarh

ರಾಯ್ಪುರದಿಂದ 450 ಕಿ.ಮೀ ದೂರದಲ್ಲಿರುವ ಕುಟ್ರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 9.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಅಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾರ್ಯಗಳಿಗೆ ಭದ್ರತೆ ನೀಡುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಕ್ಸಲರು ಐಇಡಿ ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ನಕ್ಸಲ್ ದಾಳಿಯಲ್ಲಿ ಹೆಡ್ ಕಾನ್‌ಸ್ಟೇಬಲ್ ಕಲೆಂದ್ರ ಪ್ರಸಾದ್ ನಾಯಕ್ ಸಾವನ್ನಪ್ಪಿದ್ದರೆ, ಸ್ಫೋಟದಲ್ಲಿ ಕಾನ್‌ಸ್ಟೇಬಲ್ ಕಮಲ್ ಠಾಕೂರ್ ಅವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

English summary
A head constable was killed and another policeman injured when Naxals detonated an Improvised Explosive Device (IED) in Chhattisgarh's Bijapur district on Tuesday, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X