• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ ರತ್ನದ ಸುತ್ತಾ ಸುತ್ತಿಕೊಂಡಿರುವ ವಿವಾದಗಳು

|

ಬೆಂಗಳೂರು, ಜನವರಿ 26: ಭಾರತ ರತ್ನ ಗೌರವವು ಭಾರತದ ಅತ್ಯುನ್ನತ ನಾಗರೀಕ ಗೌರವ. ಅತ್ಯುತ್ಕೃಷ್ಟ ಸೇವೆ ಮಾಡಿದವರಿಗೆ ಮಾತ್ರವೇ ಈ ಗೌರವ ನೀಡಲಾಗುತ್ತದೆ. ಈ ಅತ್ಯುನ್ನತ ನಾಗರೀಕ ಗೌರವಕ್ಕೂ ವಿವಾದಗಳು ಬಿಟ್ಟಿಲ್ಲ. ಹಲವು ವಿವಾದಗಳು ಭಾರತ ರತ್ನ ಸುತ್ತ ಸುತ್ತಿಕೊಂಡಿವೆ.

ಕರ್ನಾಟಕದ ಸೇವಾರತ್ನ ಶಿವಕುಮಾರಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಬೇಕು ಎಂಬುದು ಬಹು ವರ್ಷಗಳ ಒತ್ತಾಯವಾಗಿತ್ತು. ಆದರೆ ಈ ಹಿಂದಿನ ಯುಪಿಎ ಆಗಲಿ ಈಗಿನ ಎನ್‌ಡಿಎ ಸರ್ಕಾರಗಳಾಗಲಿ ಇದಕ್ಕೆ ಕಿವಿಗೊಡಲಿಲ್ಲ. ಶ್ರೀಗಳಿಗೆ ಅನಾರೋಗ್ಯ ಹೆಚ್ಚಾದಾಗಲಂತೂ ಪಕ್ಷಭೇದ ಮರೆತು ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಗಳು ಕೇಳಿಬಂದುವು ಆದರೆ ಈ ಬಾರಿಯೂ ರಾಜ್ಯದ ಜನರ ಆಸೆಗೆ ತಣ್ಣೀರು ಬಿದ್ದಿದೆ.

ಪ್ರಣಬ್ ಮುಖರ್ಜಿ, ನಾನಾಜಿ, ಭೂಪೇನ್ ಹಜಾರಿಕಾಗೆ ಭಾರತರತ್ನ

ಕೇಂದ್ರವು ನಿನ್ನೆ ಘೋಷಿಸಿದ ಭಾರತ ರತ್ನ ಪುರಸ್ಕೃತರ ಪಟ್ಟಿಯಲ್ಲಿ ಸಿದ್ದಗಂಗಾ ಶ್ರೀಗಳಿಗೆ ಜಾಗ ನೀಡದಿರುವುದು ಕನ್ನಡಿಗರನ್ನು ಕೆರಳಿಸಿದೆ. ಕೋಟ್ಯಂತರ ಜನಕ್ಕೆ ಅನ್ನ ಹಾಕಿದ, ಲಕ್ಷಾಂತರ ಜನಕ್ಕೆ ವಿದ್ಯಾದಾನ ಮಾಡಿದಕ್ಕಿಂತಲೂ ಸೇವೆ ಇನ್ನೇನು ಇರಲು ಸಾಧ್ಯ? ಎಂದು ಕನ್ನಡಿಗರು ಕೇಳುತ್ತಿದ್ದಾರೆ. ಬೇಕೆಂದೆ ಕೇಂದ್ರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಹೀಗೆ ಭಾರತ ರತ್ನ ಗೌರವದ ಸುತ್ತ ವಿವಾದ ಸುತ್ತಿಕೊಳ್ಳುತ್ತಿರುವುದು ಇದು ಮೊದಲೇನಲ್ಲ. ಹಲವು ಬಾರಿ ಭಾರತ ರತ್ನ ಗೌರವದ ಸುತ್ತಾ ವಿವಾದಗಳು ಸುತ್ತಿಕೊಂಡಿವೆ. ಒಮ್ಮೆಯಂತೂ ಘೋಷಿಸಲಾಗಿದ್ದ ಭಾರತ ರತ್ನವನ್ನು ವಾಪಸ್ ಪಡೆದ ಘಟನೆಯೂ ನಡೆದಿದೆ.

ಭಾರತರತ್ನ ಪ್ರಶಸ್ತಿಯ ಸುತ್ತ ಇರುವ ವಿವಾದಗಳ ಮಾಹಿತಿ ಇಲ್ಲಿದೆ ಕಣ್ಣಾಡಿಸಿ....

ಸುಭಾಷ್‌ಚಂದ್ರ ಭೋಸ್‌ ವಿವಾದ

ಸುಭಾಷ್‌ಚಂದ್ರ ಭೋಸ್‌ ವಿವಾದ

1992 ರಲ್ಲಿ ಅಂದಿನ ಸರ್ಕಾರ ಸುಭಾಶ್‌ಚಂದ್ರ ಭೋಸ್ ಅವರಿಗೆ ಮರಣೋತ್ತರ ಭಾರತ ರತ್ನ ಘೋಷಿಸಿತು. ಆದರೆ ಅದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಯಿತು. ಸುಭಾಷ್‌ಚಂದ್ರ ಭೋಸರು ಮರಣಹೊಂದಿದ್ದಾರೆ ಎಂಬುದಕ್ಕೆ ಯಾವುದೇ ದಾಖಲೆಗಳು ಇಲ್ಲ ಹಾಗಿದ್ದರೂ ಅವರಿಗೆ ಮರಣೋತ್ತರ ಗೌರವ ನೀಡುವುದು ಹೇಗೆ ಎಂದು ಪ್ರಶ್ನಿಸಲಾಯಿತು. ಸುಪ್ರಿಂ ಸಹ ಇದನ್ನು ಒಪ್ಪಿತು. ಹಾಗಾಗಿ ಘೋಷಿಸಿದ್ದ ಭಾರತ ರತ್ನವನ್ನು ಹಿಂಪಡೆಯಲಾಯಿತು.

ಪ್ರಶಸ್ತಿಗಳನ್ನೇ ರದ್ದು ಮಾಡಿದ್ದ ನ್ಯಾಯಾಲಯ

ಪ್ರಶಸ್ತಿಗಳನ್ನೇ ರದ್ದು ಮಾಡಿದ್ದ ನ್ಯಾಯಾಲಯ

ಭಾರತ ರತ್ನ ಸೇರಿ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಈ ಎಲ್ಲ ಪ್ರಶಸ್ತಿಗಳನ್ನು ಕೊಡುವುದನ್ನು ಪ್ರಶ್ನಿಸಿ ಬಾಲಾಜಿ ರಾಘವನ್ ಎಂಬುವರು ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಸಿದ್ದರು. ಈ ಪ್ರಶಸ್ತಿಗಳನ್ನು ನೀಡುವುದು ಸಂವಿಧಾನದ ಅನುಚ್ಛೇದ 18 ರ ಉಲ್ಲಂಘನೆ ಎಂದು ವಾದ ಮಂಡಿಸಲಾಯಿತು. ಅದರನ್ವಯ ಎಲ್ಲ ನಾಗರೀಕ ಪ್ರಶಸ್ತಿಗಳನ್ನು ಕೊಡುವುದನ್ನು ಸ್ಥಗಿತಗೊಳಿಸುವಂತೆ ಹೈಕೋರ್ಟ್‌ ಆದೇಶ ನೀಡಿತು. ಸುಪ್ರಿಂಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆಗೆ ವಿಶೇಷ ಪೀಠವೊಂದನ್ನು ರಚಿಸಿ ವಿಚಾರಣೆ ನಡೆಸಿ ಈ ಪ್ರಶಸ್ತಿಗಳು ಸಂವಿಧಾನದ ಆರ್ಟಿಕಲ್ 18 ನ್ನು ಉಲ್ಲಂಘಿಸುವುದಿಲ್ಲ ಎಂದು ತೀರ್ಪು ನೀಡಲಾಯಿತು.

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಸಿಗದಿದ್ದಕ್ಕೆ ತೀವ್ರ ಆಕ್ರೋಶ

ಸಚಿನ್ ತೆಂಡೂಲ್ಕರ್ ವಿವಾದ

ಸಚಿನ್ ತೆಂಡೂಲ್ಕರ್ ವಿವಾದ

2013 ರಲ್ಲಿ ವಿಜ್ಞಾನಿ ಸಿ.ಎನ್.ರಾವ್ ಜೊತೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಯಿತು. ಆಗ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನ ನೀಡುವುದನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹಾಕಲಾಯಿತು. ಸಚಿನ್ ಅವರು ಆಗ ಯುಪಿಎಯ ನಾಮನಿರ್ದೇಶಿತ ರಾಜ್ಯಸಭಾ ಸದಸ್ಯರಾಗಿದ್ದರು. ಹಾಗಾಗಿ ಅವರಿಗೆ ಭಾರತ ರತ್ನ ನೀಡುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಎಂದು ವಾದ ಮಂಡಿಸಲಾಗಿತ್ತು. ಆದರೆ ವಾದವನ್ನು ನ್ಯಾಯಾಲಯವು ಪುರಸ್ಕರಿಸಲಿಲ್ಲ. ಸಚಿನ್ ಅವರು ಭಾರತ ರತ್ನ ಪ್ರಶಸ್ತಿ ಪಡೆದ ಈ ವರೆಗಿನ ಅತಿ ಕಿರಿಯ ಎಂಬ ಗೌರವಕ್ಕೆ ಪಾತ್ರರಾದರು.

ವಿಜ್ಞಾನಿ ಸಿ.ಎನ್. ಆರ್.ರಾವ್‌ ಅವರಿಗೂ ಕೊಡಲು ವಿರೋಧ

ವಿಜ್ಞಾನಿ ಸಿ.ಎನ್. ಆರ್.ರಾವ್‌ ಅವರಿಗೂ ಕೊಡಲು ವಿರೋಧ

2013 ರಲ್ಲಿ ವಿಜ್ಞಾನಿ ಸಿ.ಎನ್. ಆರ್.ರಾವ್ ಅವರಿಗೆ ಭಾರತ ರತ್ನ ನೀಡಲಾಯಿತು ಆದರೆ ಸಿ.ಎನ್. ಆರ್.ರಾವ್ ಆಯ್ಕೆಗೂ ಕೆಲವು ವಿರೋಧಗಳು ವ್ಯಕ್ತವಾದವು. ರಾವ್ ಅವರು ಹೋಮಿಬಾಬಾ ಹಾಗೂ ವಿಕ್ರಂ ಸಾರಾಬಾಯ್ ಅವರ ಸಂಶೋಧನೆಗಳ ಕೃತಿ ಚೌರ್ಯ ಮಾಡಿದ್ದಾರೆ ಎಂದು ಆರೋಪಿಸಲಾಯಿತು. ರಾವ್ ಅವರು 1400 ಸಂಶೋಧನೆಗಳನ್ನು ಸಲ್ಲಿಸಿದ್ದಾರೆ ಎಂದಿದ್ದಾರೆ ಆದರೆ ಇದು ಸಾಧ್ಯವೇ ಇಲ್ಲ ಎಂದು ಕೆಲವರು ವಾದಿಸಿದರು. ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಹ ಹಾಕಲಾಯಿತು ಆದರೆ ಅರ್ಜಿಗಳನ್ನೆಲ್ಲಾ ನ್ಯಾಯಾಲಯವು ತಿರಸ್ಕರಿಸಿತು.

ರಾಜೀವ್ ಗಾಂಧಿ 'ಭಾರತ ರತ್ನ' ವಾಪಸ್‌: ದೆಹಲಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ವಿದೇಶಿಯರಿಗೆ ಭಾರತ ರತ್ನ ವಿವಾದ

ವಿದೇಶಿಯರಿಗೆ ಭಾರತ ರತ್ನ ವಿವಾದ

ಭಾರತೀಯರಿಗೆ ಮಾತ್ರವೇ ಭಾರತ ರತ್ನ ನೀಡುವ ನಿಯಮವನ್ನು ಮೊದಲ ಬಾರಿಗೆ ಮುರಿದಾಗಲೂ ಕೆಲವು ಅಪಸ್ವರಗಳು ಕೇಳಿಬಂದಿದ್ದವು. 1980ರಲ್ಲಿ ಮದರ್ ತೆರೆಸಾ ಅವರಿಗೆ ನೀಡಲಾಯಿತು. ಆಗ ಸಹ ಬಲಪಂಥೀಯ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ನಂತರ 1987 ರಲ್ಲಿ ಪಾಕಿಸ್ತಾನ ಸ್ವಾತಂತ್ರ್ಯ ಹೋರಾಟಗಾರ ಗಫರ್‌ ಖಾನ್ ಅವರಿಗೆ ಭಾರತ ರತ್ನ ನೀಡಲಾಯಿತು. 1990ರಲ್ಲಿ ನಲ್ಸೆನ್ ಮಂಡೇಲಾ ಅವರಿಗೆ ಭಾರತ ರತ್ನ ನೀಡಲಾಯಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bharat Ratna is highest civilian award which given in India. But many controversies are around this award. One time government taken back the award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more