• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಯ್ಯುಜಿ ಮಹಾರಾಜ್ ಆತ್ಮಹತ್ಯೆಯ ಹಿಂದೆ ಎದ್ದ ಅನುಮಾನ!

|

ಇಂದೋರ್, ಜೂನ್ 13: ಖಿನ್ನತೆಯ ಕಾರಣ ನೀಡಿ ಆತ್ಮಹತ್ಯೆ ಮಾಡಿಕೊಂಡ ಮಧ್ಯಪ್ರದೇಶದ ಇಂದೋರ್ ನ ಅಧ್ಯಾತ್ಮ ಗುರು ಬಯ್ಯುಜಿ ಮಹಾರಾಜ್ ಅವರ ಸಾವಿನ ಸುತ್ತ ಹಲವು ಅನುಮಾನಗಳು ಎದ್ದಿವೆ.

ಮಧ್ಯಪ್ರದೇಶದಲ್ಲಿ ಸಾಕಷ್ಟು ಪ್ರಭಾವೀ ವ್ಯಕ್ತಿಯಾಗಿದ್ದ ಬಯ್ಯುಜಿ ಮಹಾರಾಜ್ ಅವರು ರೂಪದರ್ಶಿಯಾಗಿ ನಂತರ ಸಂತರಾಗಿ ಬದಲಾಗಿದ್ದರು. ಉದಯಸಿಂಗ್ ದೇಶ್ ಮುಖ್ ಎಂಬುದು ಅವರ ನಿಜವಾದ ಹೆಸರು. ಜನರ ಬಾಯಲ್ಲಿ ಬಯ್ಯುಜಿ ಮಹಾರಾಜ್ ಎಂದೇ ಪ್ರಸಿದ್ಧಿ ಪಡೆದಿದ್ದರು. ಅವರಿಗೆ ಬಾಲಿವುಡ್ ನ ಘಟಾನುಘಟಿಗಳೂ ಅನುಯಾಯಿಗಳಾಗಿದ್ದರು. ಆದರೆ ನಿನ್ನೆ(ಜೂನ್ 13) ಇದ್ದಕ್ಕಿಂತೆ ಅವರು ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಧ್ಯಪ್ರದೇಶ ಮಾತ್ರವಲ್ಲದೆ ಇಡೀ ಭಾರತವನ್ನೂ ತಲ್ಲಣಿಸಿತ್ತು.

ಗುಂಡುಹಾರಿಸಿಕೊಂಡು ಮಧ್ಯಪ್ರದೇಶದ ಬಯ್ಯುಜಿ ಮಹಾರಾಜ್ ಆತ್ಮಹತ್ಯೆ

'ನನಗೆ ಜೀವನದಲ್ಲಿ ಜಿಗುಪ್ಸೆ ಬಂದಿದೆ' ಎಂದು ಡೆತ್ ನೋಟ್ ಬರೆದಿಟ್ಟು ಸಾಯುವಂಥ ಸ್ಥಿತಿ ಅವರಿಗೆ ನಿಜಕ್ಕೂ ಬಂದಿತ್ತೆ? ಎಂಬ ಪ್ರಶ್ನೆ ಇದೀಗ ಎದ್ದಿದೆ.

ವೈವಾಹಿಕ ಜೀವನ ಕಾರಣವೇ?

ಕೆಲವು ಮೂಲಗಳ ಪ್ರಕಾರ ಬಯ್ಯುಜಿ ಅವರಿಗೆ ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿಲ್ಲ. ಅವರ ಪತ್ನಿ ಮಾಧ್ವಿ 2015 ರ ನವೆಂಬರ್ ನಲ್ಲಿ ಸಾವಿಗೀಡಾಗಿದ್ದರು. ನಂತರ 2017 ರಲ್ಲಿ ಆಯುಷಿ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಅವರು ಎರಡನೇ ಮದುವೆಯಾಗಿದ್ದು, ಮೊದಲೇ ಪತ್ನಿಯ ಕುಟುಂಬಕ್ಕೆ ಇಷ್ಟವಿರಲಿಲ್ಲ. ಇದರಿಂದಾಗಿ ಎರಡೂ ಕುಟುಂಬದ ನಡುವೆ ಭಿನ್ನಾಭಿಪ್ರಾಯವಿತ್ತು.

ಸಿಸಿಟಿವಿ ಫೂಟೇಜ್

ಬಯ್ಯುಜಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಕೆಲವೇ ಗಂಟೆಗಳ ಮೊದಲು ಮಧ್ಯಪ್ರದೇಶದ ಹೊಟೇಲ್ ವೊಂದರಲ್ಲಿ ಹಲವು ಕಾಲ ಕಳೆದಿದ್ದರು. ಹಲವು ಗಂಟೆಗಳ ಕಾಲ ಹೊಟೇಲ್ ನ ರಿಸೆಪ್ಷನ್ ನಲ್ಲಿ ಫೋನಿನಲ್ಲೇ ಮಾತನಾಡುತ್ತಿದ್ದ ಅವರು ಗಾಬರಿಯಲ್ಲಿದ್ದಿದುದು ಸಿಸಿಟಿವಿ ಫೂಟೇಜ್ ನಲ್ಲಿ ಕಂಡುಬಂದಿದೆ. ಕೆಲವು ಸಮಯದ ನಂತರ ಅವರ ಎರಡನೇ ಪತ್ನಿ ಆಯುಷಿ ಅವರು ಸಹ ಅವರ ಬಳಿ ಬಂದು ಮಾತನಾಡಿದ್ದಾರೆ. ಇಬ್ಬರೂ ಕೆಲ ಹೊತ್ತಿನವರೆಗೆ ಜಗಳ ಎಂಬ ರೀತಿಯಲ್ಲೇ ಮಾತನಾಡಿದ್ದಾರೆ.

ಆಸ್ತಿ ವಿವಾದ

ಮೊದಲನೇ ಪತ್ನಿ ಮತ್ತು ಎರಡನೇ ಪತ್ನಿಯರ ಕುಟುಂಬಗಳ ನಡುವಲ್ಲಿ ಬಯ್ಯುಜಿ ಅವರ ಆಸ್ತಿಗೆ ಸಂಬಂಧಿಸಿದಂತೆ ಕೆಲವು ವಿವಾದಗಳಿದ್ದವು ಎಂಬ ಮಾಹಿತಿಯೂ ಲಭ್ಯವಾಗಿದೆ

ರಾಜಕೀಯ ಒತ್ತಡ

ಬಯ್ಯುಜಿ ಅವರಿಗೆ ಬಿಜೆಪಿ ಸೇರುವಂತೆ ಸಾಕಷ್ಟು ಒತ್ತಡಗಳಿದ್ದವು. ಸ್ವತಃ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂಪುಟದಲ್ಲಿ ಸ್ಥಾನ ಸಹ ನೀಡುವುದಾಗಿ ಹೇಳಿದ್ದರು. ಆದರೆ ಅದಕ್ಕೆ ಅವರು ಒಪ್ಪಿರಲಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After Madhya Pradesh spiritual guru Bayyuji Maharaj's suicide, many conspiracy theories emerging now. He committed suicide by shooting himself in Indore on June 12th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more