ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರಮಿಕ್ ರೈಲು ಸಂಚಾರ; ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿ

|
Google Oneindia Kannada News

ನವದೆಹಲಿ, ಮೇ 19 : ಲಾಕ್ ಡೌನ್ ಪರಿಣಾಮ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಶ್ರಮಿಕ್ ರೈಲಿನ ಮೂಲಕ ಕರೆದುಕೊಂಡು ಹೋಗಲಾಗುತ್ತಿದೆ. ಆದರೆ, ಈ ವಿಚಾರ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಜಟಾಪಟಿಗೆ ಕಾರಣವಾಗಿದೆ.

ಮಂಗಳವಾರ ಕೇಂದ್ರ ರೈಲ್ವೆ ಸಚಿವಾಲಯ ಶ್ರಮಿಕ್ ರೈಲಿನ ಸಂಚಾರದ ವಿಚಾರದಲ್ಲಿ ಮಾರ್ಗಸೂಚಿಯನ್ನು ತಿದ್ದುಪಡಿ ಮಾಡಿದೆ. ಒಂದು ರಾಜ್ಯದ ಒಪ್ಪಿಗೆ ಸಿಕ್ಕರೆ ಶ್ರಮಿಕ್ ರೈಲು ಓಡಿಸಲಾಗುತ್ತದೆ ಎಂದು ಹೇಳಿದೆ.

ಶ್ರಮಿಕ್ ರೈಲಿನಲ್ಲಿ ಕಲಬುರಗಿಗೆ ವಾಪಸ್ ಆದ 1251 ಕಾರ್ಮಿಕರು ಶ್ರಮಿಕ್ ರೈಲಿನಲ್ಲಿ ಕಲಬುರಗಿಗೆ ವಾಪಸ್ ಆದ 1251 ಕಾರ್ಮಿಕರು

ಒಂದು ರಾಜ್ಯ ಕಾರ್ಮಿಕರನ್ನು ವಾಪಸ್ ಕಳಿಸಲು ಶ್ರಮಿಕ್ ರೈಲು ಓಡಿಸಲು ಒಪ್ಪಿಗೆ ಕೇಳಿದರೆ ಕೆಲವೊಂದು ರಾಜ್ಯ ಒಪ್ಪಿಗೆ ಕೊಡುತ್ತಿರಲಿಲ್ಲ. ಆದ್ದರಿಂದ, ಕಾರ್ಮಿಕರಿಗೆ ತೊಂದರೆ ಉಂಟಾಗಿತ್ತು.

ಶ್ರಮಿಕ್ ವಿಶೇಷ ರೈಲಿನ ದರ; ರೈಲ್ವೆ ಇಲಾಖೆಯ ಸ್ಪಷ್ಟನೆ ಶ್ರಮಿಕ್ ವಿಶೇಷ ರೈಲಿನ ದರ; ರೈಲ್ವೆ ಇಲಾಖೆಯ ಸ್ಪಷ್ಟನೆ

Consent Of States For Migrant Trains Not Needed Says Railways

ಹೊಸ ಪರಿಷ್ಕೃತ ಮಾರ್ಗಸೂಚಿ ಪ್ರಕಾರ ಒಂದು ರಾಜ್ಯ ಕಾರ್ಮಿಕರನ್ನು ವಾಪಸ್ ಕಳಿಸಲು ಪಟ್ಟಿ ನೀಡಿದರೆ ಸಾಕು. ಆ ಪಟ್ಟಿಗೆ ಕಾರ್ಮಿಕರು ತಲುಪಬೇಕಾದ ರಾಜ್ಯದ ಒಪ್ಪಿಗೆ ಬೇಕಾಗಿಲ್ಲ. ಪಟ್ಟಿ ಕೊಟ್ಟ ರಾಜ್ಯದಿಂದ ರೈಲನ್ನು ಓಡಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಇಂದೋರ್-ಕೋಲ್ಕತ್ತಾ ನಡುವೆ ಶ್ರಮಿಕ್ ರೈಲು ಸಂಚಾರಕ್ಕೆ ಮನವಿ ಇಂದೋರ್-ಕೋಲ್ಕತ್ತಾ ನಡುವೆ ಶ್ರಮಿಕ್ ರೈಲು ಸಂಚಾರಕ್ಕೆ ಮನವಿ

ಕೇಂದ್ರ ರೈಲ್ವೆ ಇಲಾಖೆಯೇ ರಾಜ್ಯದ ಜೊತೆ ಚರ್ಚೆ ಮಾಡಿ ಅಗತ್ಯವಾದ ಬೋಗಿಯ ಸಂಖ್ಯೆ, ನಿಲ್ದಾಣದ ವಿವರವನ್ನು ಅಂತಿಮಗೊಳಿಸಲಿದೆ. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಯಾವ ರಾಜ್ಯಕ್ಕೆ ಕಾರ್ಮಿಕರನ್ನು ವಾಪಸ್ ಕಳಿಸಬೇಕು ಎಂದು ರೈಲ್ವೆಗೆ ತಿಳಿಸಿದರೆ ಸಾಕು.

ಕಾರ್ಮಿಕರು ರೈಲು ಹತ್ತುವಾಗ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು. ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು ಎಂದು ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿಯಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

English summary
In its fresh set of guidelines ministry of railways said that consent of terminating state is not necessary to run Shramik special train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X