ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಮ್ಮತದ ಲೈಂಗಿಕ ಸಂಬಂಧ ಅತ್ಯಾಚಾರವಲ್ಲ: ಸುಪ್ರೀಂಕೋರ್ಟ್

|
Google Oneindia Kannada News

ನವದೆಹಲಿ, ಫೆಬ್ರವರಿ 03: ಒಮ್ಮತದ ಲೈಂಗಿಕ ಸಂಬಂಧ ಅತ್ಯಾಚಾರವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಒಂದೊಮ್ಮೆ ಒಮ್ಮತದಿಂದ ಲೈಂಗಿಕ ಸಂಬಂಧ ಹೊಂದಿದ ಬಳಿಕ ಮದುವೆಯಾಗಲು ನಿರಾಕರಿಸಿದರೆ ಅದನ್ನು ಅತ್ಯಾಚಾರವೆಂದು ಕರೆಯಲು ಸಾಧ್ಯವಿಲ್ಲ. ತನ್ನ ಮಾಜಿ ಸಂಗಾತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಸುಪ್ರೀಂಕೋರ್ಟ್ ತಡೆಹಿಡಿದಿದೆ. ಎಂಟು ವಾರಗಳವರೆಗೆ ಮತ್ತು ಪ್ರಕರಣದಲ್ಲಿ ಅರ್ಜಿದಾರರ ಸ್ವಾತಂತ್ರ್ಯದ ಪ್ರಶ್ನೆಯನ್ನು ವಿಚಾರಣಾ ನ್ಯಾಯಾಲಯ ನಿರ್ಧರಿಸುತ್ತದೆ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠ, ಪುರುಷ ಮತ್ತು ಹೆಂಡತಿಯಾಗಿ ಒಟ್ಟಿಗೆ ವಾಸಿಸುತ್ತಿದ್ದರೆ ಗಂಡ ಕ್ರೂರವಾಗಿರಬಹುದು, ಆದರೆ ವಾಸಿಸುತ್ತಿರುವ ದಂಪತಿಗಳ ನಡುವಿನ ಲೈಂಗಿಕ ಸಂಭೋಗವನ್ನು ಅತ್ಯಾಚಾರ ಎಂದು ಕರೆಯಬಹುದೇ? ಎಂದು ಕೋರ್ಟ್ ಪ್ರಶ್ನಿಸಿದೆ.

ಭಾರತದಲ್ಲಿ ಲೈಂಗಿಕತೆ: ಕೌಟುಂಬಿಕ ಆರೋಗ್ಯ ಸಮೀಕ್ಷೆ ಹೇಳುವುದು ಹೀಗೆಭಾರತದಲ್ಲಿ ಲೈಂಗಿಕತೆ: ಕೌಟುಂಬಿಕ ಆರೋಗ್ಯ ಸಮೀಕ್ಷೆ ಹೇಳುವುದು ಹೀಗೆ

ಎರಡು ವರ್ಷಗಳ ಕಾಲ ಮಹಿಳೆ ಆತನೊಂದಿಗೆ ಸಂಬಂಧ ಹೊಂದಿದ್ದಳು, ಬಳಿಕ ಆತನ ಮೇಲೆ ಅತ್ಯಾಚಾರ ಆರೋಪ ಹೊರಿಸಲಾಗಿದ್ದು, ಈ ಕುರಿತು ಅರ್ಜಿಯನ್ನು ಪರಿಶೀಲಿಸುವಾಗ ಸುಪ್ರೀಂಕೋರ್ಟ್ ಈ ವಿಷಯಗಳ ಕುರಿತು ಅವಲೋಕಿಸಿದೆ.

Consensual Sex In A Live-In Relationship Not Rape, Says Supreme Court

ಯಾರೂ ಮದುವೆ ವಿಚಾರವಾಗಿ ತಪ್ಪಾಗಿ ಭರವಸೆ ನೀಡಬಾರದು ಮತ್ತು ಮುರಿಯಬಾರದು. ಆದರೆ ಒಮ್ಮತದಿಂದ ಒಂದಾಗಿದ್ದರೆ ಅದನ್ನು ಅತ್ಯಾಚಾರವೆಂದು ಹೇಳಲಾಗದು ಎರಡೂ ಭಿನ್ನವಾಗಿದೆ.

ಆರೋಪಿಗಳನ್ನು ಪ್ರತಿನಿಧಿಸುವ ಹಿರಿಯ ವಕೀಲೆ ವಿಭಾ ದತ್ತಾ ಮಖೀಜಾ, ದಂಪತಿಗಳು ಒಟ್ಟಿಗೆ ಕೆಲಸ ಮಾಡುತ್ತಿದ್ದರು ಮತ್ತು ಅವರು ಎರಡು ವರ್ಷಗಳಿಂದ ಲೈವ್-ಇನ್ ಸಂಬಂಧದಲ್ಲಿದ್ದರು ಎಂದು ನ್ಯಾಯಪೀಠದ ಮುಂದೆ ವಾದಿಸಿದರು. ಆದಾಗ್ಯೂ, ಸುಪ್ರೀಂ ಕೋರ್ಟ್ ಪೀಠವು ಮದುವೆಗೆ ಸುಳ್ಳು ಭರವಸೆ ನೀಡುವುದು ತಪ್ಪು ಎಂದು ಉಲ್ಲೇಖಿಸಿದೆ.

English summary
On Monday, the Supreme Court said that any consensual sex that happens between a couple can not be called rape if the man fails to keep his promise of marrying the woman later.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X